ಉತ್ತಮ ಸಮಾಜಕ್ಕಾಗಿ

ಕರ್ನಾಟಕವನ್ನು ಕಾಶ್ಮೀರ ಮಾಡುತ್ತಿದೆ ಸಿದ್ಧರಾಮಯ್ಯ ಸರಕಾರ: ಕೆ. ಮುರಳಿಧರ

0

ಬೆಳಗಾವಿ: ಬಿಜೆಪಿ 2018 ರ ಚುನಾವಣೆಗೆ ತಯ್ಯಾರಿಗಾಗಿ ಸಾಮೂಹಿಕ ನಾಯಕತ್ವದಲ್ಲಿ ಮುಂದಡಿಯಿಟ್ಟಿದೆ ಎಂದು ರಾಜ್ಯ ಉಸ್ತುವಾರಿ ಕೆ. ಮುರಳಿಧರರಾವ್ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ಚುನಾವಣೆಗೆ ಸಿದ್ಧವಾಗಿದೆ. 2014 ರಲ್ಲಿ ದಿಲ್ಲಿಯಿಂದ ಹಿಡಿದು ಎಲ್ಲೆಡೆ ಕಾಂಗ್ರೆಸ್ ಮುಕ್ತ ಮಾಡಿತ್ತು. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಲಾಗುವುದು. 150 Mission BJP ಹೊತ್ತಿದೆ. ಪರಿವರ್ತನಾ ರ್ಯಾಲಿ ಬಿಎಸ್ ವೈ ನೇತೃತ್ವದಲ್ಲಿ ಬಹಳ ಉತ್ತಮವಾಗಿ ನಡೆದಿದೆ. ಬಿಎಸ್ ವೈ ತರಹ ಪ್ರತಿಪಕ್ಷದ ಮತ್ತೋಬ್ಬರು ನಾಯಕರು ಮಾಡಲು ಸಾಧ್ಯವಿಲ್ಲ. ರಾಜ್ಯದ ಜನರ ಕಾಂಗ್ರೆಸ್ ವಿರುದ್ಧದ ಸಿಟ್ಟು ಬಿಎಸ್ ವೈ ಯಾತ್ರೆ ವೇಳೆ ತಿಳಿದುಬಂದಿದೆ. ಬಿಜೆಪಿ ಮತ್ತು ನರೇಂದ್ರ ಮೋದಿ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಮತ್ತು ವಿಶ್ವಾಸ ಇದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಯಾತ್ರೆ ಹೋಗಿದ್ದು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲಾಗುವುದು. ಹಿಮಾಚಲ ಪ್ರದೇಶ ಮತ್ತು ಗುಜರಾತನಲ್ಲಿ ಬಿಜೆಪಿ ಜಯಭೇರಿ ಭಾರಿಸಲಾಗುವುದು. ಡಿಸೆಂಬರ್ ನಂತರ ಬಿಜೆಪಿ ಯಶಸ್ಸಿನ ಯಾತ್ರೆ ಕರ್ನಾಟಕದಲ್ಲಿ ನಡೆಯಲಿದೆ. ಗುಜರಾತ್ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಭಯ ಹುಟ್ಟಿದೆ. ಡಿಸೆಂಬರ್ 18 ರ ನಂತರ ಬಿಜೆಪಿಯ ಗಮನ ಕರ್ನಾಟಕದತ್ತ ತಿರುಗಲಿದೆ ಎಂದರು.

ದೇಶದ ತುಂಬ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿದೆ. ರಾಜ್ಯದಲ್ಲಿ ಬ್ರಷ್ಟಾಚಾರ ಮತ್ತು ಆಡಳುತ ಎರಡೂ ಒಂದೇ ಮುಖ. ಭ್ರಷ್ಟ ಸಚಿವರನ್ನು ಹೊರಗಟ್ಟುವ ಧೈರ್ಯವಿಲ್ಲ. ಸಿದ್ಧರಾಮಯ್ಯ ಹಿಂದೂ ವಿರೋಧಿ ಆಗಿದ್ದು ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ರಾಷ್ಟ್ರ ವಿರೋಧಿ, ಭಯೋತ್ಪಾದಕ ಮನಸ್ಥಿತಿ ಅವರೊಂದಿಗೆ ಸರಕಾರ ಕೈ ಜೋಡಿಸಿದೆ. ಕರ್ನಾಟಕವನ್ನು ಕಾಶ್ಮೀರ ಆಗಿ ಕಾಂಗ್ರೆಸ್ ಬದಲಾಯಿಸಿದೆ. ದೇಶ ವಿರೋಧಿ ಘೋಷಣೆ ಕೂಗುವ ಶಕ್ತಿಗಳೊಂದಿಗೆ ಸಿದ್ಧರಾಮಯ್ಯ ಸರಕಾರ ಕೈ ಜೋಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಬಿಜೆಪಿಯ 14 ಕಾರ್ಯಕರ್ತರು ಕಳೆದುಹೋಗಿದ್ದಾರೆ. ರಾಜಕೀಯ ಪ್ರತಿಸ್ಫರ್ಧಿಯಾಗಿ ಸ್ವೀಕರಿಸುವ ಬದಲು, ಬಿಜೆಪಿಯನ್ನು ವಿರೋಧಿಯೆಂದು ಭಾವಿಸಿದ್ದಾರೆ. ಸಾಲಮನ್ನಾ ಬರೀ ಒಂದು ಕಣ್ಣು ಒರೆಸುವ ತಂತ್ರ. ಕಾಂಗ್ರೆಸ್ ಕೆಟ್ಟ ಆಡಳಿತ ವೈಖರಿಯೇ ಬಿಜೆಪಿಗೆ ವರದಾನವಾಗಲಿದೆ. ನರೇಂದ್ರ ಮೋದಿ ಅವರು ಡಿಸೆಂಬರ್ 18 ನಂತರ ರಾಜ್ಯಕ್ಕೆ ಆಗಮಿಸಿ ಬಿಜೆಪಿ ಯಾತ್ರೆಯ ಸಮಾರೋಪದಲ್ಲಿ ಐತಿಹಾಸಿಕ ಭಾಷಣ ಮಾಡಲಿದ್ದಾರೆ ಎಂದರು.

ಅಸಭ್ಯ ಭಾಷೆ ಬಳಸುವವರ ವಿರುದ್ಧ ಬಿಜೆಪಿ ಹೈಕಮಾಂಡ್ ಸಹಿಸದು. ನಮ್ಮ ಪಕ್ಷದ ನಡವಳಿಕೆ ಮತ್ತು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಶಿಸ್ತು ನಮ್ಮ ಪಕ್ಷದ ಧ್ಯೇಯ ಎಂದರು. ಸಂಸದ ಸುರೇಶ ಅಂಗಡಿ, ಮಹಾಂತೇಷ ಕವಟಗಿಮಠ, ಡಾ. ವಿಶ್ವನಾಥ ಪಾಟೀಲ, ರಾಜೇಂದ್ರ ಹರಕುಣಿ, ಭಾರತಿ ಮಗದುಮ್, ಅನಿಲ ಬೆನಕೆ, ಈರಣ್ಣ ಕಡಾಡಿ, ರಾಜು ಟೋಪನ್ನವರ ಮತ್ತಿತರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.