ಉತ್ತಮ ಸಮಾಜಕ್ಕಾಗಿ

₹22 ಲಕ್ಷ ಪಾವತಿಸಿದ ಅಧಿಕಾರಿಗಳು: ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ಹಿಂದಕ್ಕೆ

0

ಬೆಳಗಾವಿ: KSRTC ನೌಕರರ ಪತ್ತಿನ ಸಹಕಾರಿ ಸಂಘ ಹಾಗೂ ಉನ್ನತ ಸಾರಿಗೆ ಅಧಿಕಾರಿಗಳ ನಡುವೆ ಇಂದು ಸಂಧಾನ ಸಭೆ ನಡೆದಿದ್ದರಿಂದ ನಾಳೆ ನಡೆಯಲಿದ್ದ ಮುಷ್ಕರ ತಾತ್ಕಾಲಿಕ ಹಿಂಪಡೆಯಲಾಗಿದೆ. ಕಳೆದ ಜುಲೈ ಹಾಗೂ ಆಗಸ್ಟ್ ತಿಂಗಳ ಸೇರಿ ಒಟ್ಟು ಪಾವತಿಸಬೇಕಾದ ಹಣದಲ್ಲಿ ಎರಡೂ ತಿಂಗಳ ಹಣ ಚೆಕ್ ಮೂಲಕ ಇಂದು ಪಾವತಿಸಿದ್ದರಿಂದ ಮುಷ್ಕರ ತಾತ್ಕಾಲಿಕ ಹಿಂಪಡೆಯುವ ನಿರ್ಧಾರ ಮಾಡಲಾಯಿತು ಎಂದು ಸಂಘದ ಕಾರ್ಯದರ್ಶಿ ಐ. ಎಸ್. ಮದವಾಲ ತಿಳಿಸಿದ್ದಾರೆ.ನವ್ಹೆಂಬರ್ ವರೆಗೆ ಇನ್ನುಳಿದ ಮೂರು ತಿಂಗಳ ಹಣ ಜನೇವರಿಯಲ್ಲಿ ಪಾವತಿಸುವುದಾಗಿ ಸಾರಿಗೆ ಇಲಾಖೆಯ ಬೆಳಗಾವಿ ನಿಯಂತ್ರಣಾಧಿಕಾರಿ ಲಿಖಿತ ಭರವಸೆ ನೀಡಿದ್ದರಿಂದ ಅನಿರ್ಧಿಷ್ಠಾವಧಿ ಧರಣಿ ತಾತ್ಕಾಲಿಕ ಹಿಂಪಡೆಯಲಾಗಿದೆ. ಬೆಳಗಾವಿ ಸಾರಿಗೆ ವಿಭಾಗದಿಂದ ಪಾವತಿಸಬೇಕಿದ್ದ ಒಟ್ಟು ₹88 ಲಕ್ಷದ ಪೈಕಿ ಇಂದು ₹22 ಲಕ್ಷದ ಚೆಕ್ ಸಂಘಕ್ಕೆ ನೀಡಲಾಗಿದೆ. ಆದರೆ ಚಿಕ್ಕೋಡಿ ವಿಭಾಗದ ಸಾರಿಗೆ ನಿಯಂತ್ರಣಾಧಿಕಾರಿ ಮಾತ್ರ ತಮ್ಮ ವಿಭಾಗದಿಂದ ಸಲ್ಲಿಸಬೇಕಿದ್ದ ಹಣದ ಬಗ್ಗೆ ಇನ್ನೂ ಯಾವ ಭರವಸೆಯನ್ನು ನೀಡಿಲ್ಲ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಡಿಸಿ ಗಣೇಶ ರಾಠೋಡ್ ಅವರು ನಡೆಸಿದ ಸಂಧಾನ ಸಭೆಯಲ್ಲಿ ಅಬ್ಬಾಸ್ ಖಾಜಿ, ಬಾಬು ಅಕ್ಕನ್ನವರ, ಐ. ಎಸ್. ಮದವಾಲ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು. ಉಳಿದ ಹಣ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಿಂದ ಹಣ ಸಂದಾಯವಾಗದಿದ್ದರೆ ಧರಣಿ ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಸಂಘ ತಿಳಿಸಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: