ಉತ್ತಮ ಸಮಾಜಕ್ಕಾಗಿ

ಉಗ್ರ ಸ್ವರೂಪ ಪಡೆಯುವತ್ತ ಗೋಕಾಕ ಬಂದ್ : ಪ್ರತಿಭಟನಾಕಾರರಿಂದ ವಾಹನ ಜಕಂ

0

ಗೋಕಾಕ: ನೂತನ ಜಿಲ್ಲೆಗಾಗಿ ಇಂದು ಗೋಕಾಕ ನ್ಯಾಯವಾದಿಗಳ ಸಂಘದವರು ಗೋಕಾಕ ಬಂದಗೆ ಕರೆ ನೀಡಿದ್ದಾರೆ. ನಗರದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಪ್ರಾರಂಭವಾಗುವ ಪ್ರತಿಭಟನಾ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡು ತಹಶೀಲ್ದಾರ್ ಮುಂಖಾತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲ್ಲಿದೆ.

ಮುಂಜಾನೆಯಿಂದ ಜನರು ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿದ್ದಾರೆ, ಶಾಲಾ ಕಾಲೇಜುಗಳಿಗೆ ಸಹ ರಜೆ ಷೋಷಿಸಲಾಗಿದೆ, ದಿನಾಲೂ ತುಂಬಿ ತುಳುಕುತ್ತಿದ ಆಸ್ಪತ್ರೆಗಳು ಇಂದು ರೋಗಿಗಳಿಲ್ಲದೆ ನಿಧಾನಗತಿಯಾಗಿವೆ, ಬಸ್ ಗಳ ಓಡಾಟ ಸಂಪೂರ್ಣ ಬಂದಾಗಿದೆ, ಅಲ್ಲಲಿ ಪೊಲೀಸರ ಸರ್ಪಗಾವಲು ಇದೆ ಒಟ್ಟಾರೇಯಾಗಿ ಬಹು ದಶಕಗಳ ಗೋಕಾಕ ಜಿಲ್ಲಾ ಹೋರಾಟ ಈಗ ಉಗ್ರ ಸ್ವರೂಪ ತಾಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನಗರದ ಹೋರವಲಯದ ನಾಕಾ ನಂ 1 ರಲ್ಲಿ ಪ್ರತಿಭಟನಾ ಕಾರರ ಆಕ್ರೋಶಕ್ಕೆ ಎರೆಡು ಖಾಸಗಿ ವಾಹನಗಳು ಬಲಿಯಾಗಿ ಜಕಂ ಆಗಿವೆ ಇದರಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.