ಉತ್ತಮ ಸಮಾಜಕ್ಕಾಗಿ

ರೈತರು ದೇಶದ ಬೆನ್ನೆಲಬು : ಶ್ರೀಮತಿ ಆಶಾ ಐಹೊಳೆ

0

ಬೆಳಗಾವಿ: ರೈತರು ದೇಶದ ಬೆನ್ನೆಲಬು ಆದ್ದರಿಂದ ಅವರು ಕಷ್ಟಪಟ್ಟು ಬೆಳೆದ ಬೆಳೆಗÀಳನ್ನು ವಿಚಾರಿಸಿ ಖರೀದಿಸದೆ ಗೌರವದಿಂದ ಖರೀದಸಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷೆಯಾದ ಶ್ರೀಮತಿ ಆಶಾ ಐಹೊಳಿ ಅವರು ಹೇಳಿದರು.
ನಗರದ ಹ್ಯೂಮ್‍ಪಾರ್ಕ್‍ನಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ ಮತ್ತು ಬೆಳಗಾವಿ ಜಿಲ್ಲಾ ತೋಟಗಾರಿಕೆ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 16 ಶನಿವಾರ ಆಯೋಜಿಲಾಗಿದ್ದ 60ನೇ ಫಲ-ಪುಷ್ಪ ಪ್ರದರ್ಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರವು ಬಹುಮುಖ್ಯವಾಗಿದ್ದು, ರೈತವರ್ಗಗಳಿಗೆ ಸಹಕಾರ ನೀಡುವುದರೊಂದಿಗೆ ಗೌರವಿಸುದು ಮುಖ್ಯವಾಗಿದೆ. ನಮ್ಮ ಮಕ್ಕಳನ್ನು ಕೇವಲ ಡಾಕ್ಟರ್ ಮತ್ತು ಇಂಜಿನೀಯರಗಳಾಗಿ ಬೆಳೆಸದೆ ಉತ್ತಮ ರೈತರನ್ನಾಗಿ ಬೆಳೆಸಬೇಕು ಇದರಿಂದ ದೇಶದ ಭವಿಷ್ಯ ಉಜ್ವಲವಾಗುವುದು ಎಂದು ಅಭಿಪ್ರಾಯಪಟ್ಟರು.
ಈ ಫಲ-ಪುಷ್ಪ ಪ್ರದರ್ಶನದಲ್ಲಿ ವಿವಿಧ ರೀತಿಯ ಆಧುನಿಕ ತಂತ್ರಜ್ಞಾನದ ಪುಷ್ಪಗಳನ್ನು ಬೆಳೆದು ಪ್ರದರ್ಶನಕ್ಕೆ ಇಡಲಾಗಿದೆ ಸಾರ್ವಜನಿಕರು ಅವುಗಳನ್ನು ಖರೀದಿಸಿ ತಮ್ಮ ಮನೆಯ ಅಂಗಳವನ್ನು ಸುಂದರವಾಗಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾದ ರಾಮಚಂದ್ರನ್ ಆರ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಬಿ.ಆರ್.ರವಿ ಕಾಂತೇಗೌಡ ಅವರು 60ನೇ ಫಲ-ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಸಂಜೋತಾ ಬಾಂದೇಕರ, ಜಿಪಂ ಉಪಾಧ್ಯಕ್ಷರಾದ ಅರುಣ ಕಟಾಂಬಳೆ, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷರಾದ ಪ್ರಕಾಶ ಪಾಟೀಲ ತೋಟಗಾರಿಕೆ ಇಲಾಖೆಯ ಸಹಪ್ರಾಯೋಜಿಕರಾದ ರವಿಶಂಕರ ನರಗಟ್ಟಿ ಸೇರಿದಂತೆ ವಿವಿಧ ತಾಲೂಕಿನ ತೋಟಾಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.