ಉತ್ತಮ ಸಮಾಜಕ್ಕಾಗಿ

ಮೆಸ್ತಾ ಹಂತಕರನ್ನು ಪತ್ತೆ ಹಚ್ಚಿ ಹಿಂದೂಪರ ಸಂಘಟನೆಗಳು ಕಾರ್ಯಕರ್ತರು ಘೋಷಣೆ

0

ಬೆಳಗಾವಿ: ಕಳೆದ ಎರಡು ವರ್ಷದಲ್ಲಿ ಹಿಂದೂಪರ ಕಾರ್ಯಕರ್ತರ ಬರ್ಬರ ಹತ್ಯೆಗಳು ನಡೆದಿವೆ ಎಂದು ಆತಂಕ ವ್ಯಕ್ತಪಡಿಸಿ ಸದ್ಯ ರಾಜ್ಯಾದ್ಯಂತ ವಿಸ್ತರಿಸಿರುವ ಅಸಹನೆಗೆ ಪರೇಶ ಮೆಸ್ತಾ ಸಾವು ಬಲ ನೀಡಿದೆ.ಬಿಜೆಪಿ, ಬಜರಂಗದಳ, ಶ್ರೀರಾಮಸೇನಾ, ಆರ್ ಎಸ್ ಎಸ್ ಸೇರಿದಂತೆ ಎಲ್ಲ ಹಿಂದೂಪರ ಸಂಘಟನೆಗಳು ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮೆಸ್ತಾ ಹಂತಕರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಆಗ್ರಹಿಸಿದವು. ನಗರದ ಬೋಗಾರವೆಸ್ ವೃತ್ತದಲ್ಲಿ ಸೇರಿದ ಸಾವಿರಾರು ಕಾರ್ಯಕರ್ತರು ಘೋಷಣೆ ಕೂಗಿದರು.ನಂತರ ಮೆರವಣಿಗೆ ಹೊರಟು ಕಿರ್ಲೋಸಕರ್ ರಸ್ತೆಯಿಂದ ಮಾರುಕಟ್ಟೆ ಪ್ರದೇಶಗಳಲ್ಲಿ ರ್ಯಾಲಿ ಹೊರಟು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕೇಸರಿ ಧ್ವಜ ಮತ್ತು ಶಾಲು ಹೊತ್ತ ಸಾವಿರಾರು ಕಾರ್ಯಕರ್ತರು ದೇಶದಲ್ಲಿ ಹಿಂದೂ ವಿರೋಧಿ ಘಟನೆಗಳು ನಡೆಯುತ್ತಿವೆ. ಕಳೆದ ಎರಡು ವರ್ಷದಲ್ಲಿ ಸುಮಾರು 30 ಜನ ಹಿಂದೂಪರ ಕಾರ್ಯಕರ್ತರ ಕಗ್ಗೊಲೆಯಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಗಳು ಮತ್ತು ದೇಶ ವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಹೊನ್ನಾವರದಲ್ಲಿ ಅಮಾಯಕ ತರುಣ ಪರೇಶ್ ಮೆಸ್ತಾ ನನ್ನು ಕೊಲೆ ಮಾಡಿ ಕೆರೆಗೆ ಎಸೆಯಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನಡೆ ಪ್ರದರ್ಶಿಸುತ್ತಿದೆ ಎಂದರು.ನಂತರ ಬೋಗಾರವೆಸ್ ವೃತ್ತದಿಂದ ಪೊಲೀಸರೊಂದಿಗೆ ವಾದ ಮಾಡಿ ಮೆರವಣಿಗೆ ಕಾಲೇಜು ರಸ್ತೆ ಬದಲು ಕಿರ್ಲೋಸ್ಕರ್ ರಸ್ತೆ ಮೂಲಕ ಡಿಸಿ ಕಚೇರಿ ತಲುಪಿತು. ಡಿಸಿಪಿ ಸೀಮಾ ಲಾಟಕರ ನೇತೃತ್ವದಲ್ಲಿ ಡಿಎಆರ್, ಕೆಎಸ್ ಆರ್ ಪಿ ಪೊಲೀಸರು ಬೃಹತ್ ಬಂದೋಬಸ್ತ ಏರ್ಪಡಿಸಿದ್ದರು.

ಸಂಜಯ ಪಾಟೀಲ, ಅಭಯ ಪಾಟೀಲ, ಅನಿಲ ಬೆನಕೆ, ರಾಜು ಟೋಪನ್ನವರ, ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡ್ರ, ಆನಂದ ಜಕಾತಿ, ರಮಾಕಾಂತ ಕೊಂಡೂಸ್ಕರ್, ರವಿ ಕೋಕಿತಕರ, ಬಾಳು ಪವಾರ ಸೇರಿದಂತೆ ಎಲ್ಲಾ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.