ಉತ್ತಮ ಸಮಾಜಕ್ಕಾಗಿ

ಕಾಯಕವೇ ಕಲ್ಯಾಣ ರಾಜ್ಯದ ಕಂಭ:ಡಾ.ರಂಗರಾಜ ವನದುರ್ಗ

0

ಬೆಳಗಾವಿ:ಪ್ರಪಂಚದ ಬಹುದೊಡ್ಡ ಜ್ಞಾನಿಗಳಿಗೆ,ಜ್ಞಾನಿಗಳಿಗೆ,ಚಿಂತಕರಿಗೆ,ರಾಜಕಾರಣಿಗಳಿಗೆ,ಸ್ವಾಮಿಗಳಿಗೆ ಅವರದ್ದೆ ಆದ ಚಿಂತನೆಗಳಿರುತ್ತವೆ.ಅವುಹೊಸ ರಾಜ್ಯ ಕಟ್ಟಬೇಕೆಂದು ಕನಸನ್ನುಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಗಾಂಧೀಜಿಯವರಿಗೆ ರಾಮರಾಜ್ಯ ಕಟ್ಟಬೇಕೆಂದು,ಪ್ಲೇಟೋನಿಗೆ ಆದರ್ಶ ರಾಜ್ಯ ಕಟ್ಟಬೇಕೆಂದು,ಅಂಬೇಡ್ಕರ್ ಅವರಿಗೆ ಪ್ರಜಾರಾಜ್ಯ ಕಟ್ಟಬೇಕೆಂದು,ಮಾರ್ಕನಿಗೆ ಕಾರ್ಮಿಕ ಕಟ್ಟಬೇಕೆಂದು,ಕನಕನಿಗೆ ರಾಗಿ ರಾಜ್ಯಕಟ್ಟಬೇಕೆಂದು,ನಂಜುಡಸ್ವಾಮಿಯವರಿಗೆ ರೈರ ರಾಜ್ಯ ಕಟ್ಟಬೇಕೆಂದು ಕನಸಿತ್ತು.ಅದರಂತೆ ಬಸವಣ್ಣನವರಿಗೆ ಕಲ್ಯಾಣ ರಾಜ್ಯ ಕಟ್ಟಬೇಕೆಂಬ ಕನಸಿತ್ತು.ಈ ಕಲ್ಯಾಣ ರಾಜ್ಯಕ್ಕೆ ಕಾಯಕವೇ ಕಂಭ ವಾಗಿತ್ತು ಎಂದು ರಾಣಿ ಚನ್ನಮ್ಮಾ ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ಕುಲ ಸಚಿವ ಡಾ.ರಂಗರಾಜ ವನದುರ್ಗ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನÀದಲ್ಲಿ ರವಿವಾರ 17 ರಂದು ಹಿರಿಯ ಸಾಹಿತಿ ಶಿ.ಗು.ಕುಸುಗಲ್ಲ ಅವರ ಶರಣ ಆಶಯ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು.
ಹನ್ನೆರಡೆನೆಯ ಶತಮಾನದ ಶರಣರ ನಡೆ ನುಡಿ,ಬದುಕು ಬರಹಗಳು ಇಂದಿನ ತಲೆಮಾರಿಗಳಿಗೆ ತುಂಬಾ ಅಗತ್ಯವಾಗಿ ಬೇಕಾಗಿದೆ. ಅವರ ವಚನಗಳ ರಚನೆ ಕೇವಲ ಸಾಹಿತ್ಯದ ಸಂಗ್ರಹ ವಲ್ಲ,ಅವು ಸ್ವಸ್ಥ್ಯ ಮತ್ತು ಸ್ವಾಭಿಮಾನಿ ಸಮಾಜದ ಸಲಕರಣೆಗಳು. ಹಾಗಾಗಿ ಅಂದಿನ ಶರಣರು ಅನೇಕ ಮೂಲಬೂತ ಅಧಿಕಾರಗಳನ್ನು ಪ್ರಶ್ನೆಮಾಡಬೇಕಾಯಿತು. ತಲೆಮಾರಿಗಳಿಂದ ಸಾಗಿಬಂದ ಜ್ಞಾನಾಧಿಕಾರ,ಧರ್ಮಧಿಕಾರ,ದೈವಾಧಿಕಾರ,ಆರ್ಥಿಕ ಅಧಿಕಾರಗಳನ್ನು ಮೊದಲ ಬಾರಿಗೆ ಪ್ರಶ್ನೆ ಮಾಡಿದವರು. 12ನೇ ಶತಮಾನದ ಶರಣರು. ಅಂಥ ಶರಣರಿಗೆ ಎಂದಿಗೂ ಮರಣ ಇರುದಿಲ್ಲ ಎಂದುಡಾ.ರಂಗರಾಜ ನುಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅಥಿತಿಗಳಾದ ಡಾ.ಎಚ್.ಬಿ.ಕೋಲ್ಕಾರ ಅವರು ಕುಸಗಲ್ಲ ಅವರ ಸಾಮಾಜಿಕ ಕಳಕಳಿ ಹನ್ನೆರಡೆನೆಯ ಶತಮಾನದ ಶರಣರನ್ನು ನೆನಪಿಸುತ್ತದೆ ಎಂದರು.
ಹಿರಿಯ ಸಾಹಿತಿ ಎಮ್ ಎಸ್ ಇಂಚಲ ಅಧ್ಯಕ್ಷತೆ ವಹಿಸಿದರು. ಜಿ.ಎಸ್ ಸೋನಾರ ನಿರೂಪಿಸಿದರು.ಶಿಕ್ಷಕ ಸಂಘಟಕ ಬಸವರಾಜ ಸುಣಗಾರ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.