ಉತ್ತಮ ಸಮಾಜಕ್ಕಾಗಿ

ಉತ್ತಮ ಸಾಧನೆಯತ್ತ ಅರಣ್ಯ ಇಲಾಖೆ : ಎಸ್. ಈ. ಸುಧೀಂದ್ರ

0

ಬೆಳಗಾವಿ:: ಕೇವಲ ಒಂದು ವರ್ಷದಲ್ಲಿ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಇಲಾಖೆಯು 14 ಕೋಟಿ ರೂ. ಲಾಭ ಗಳಿಸುವದರೊಂದಿಗೆ ಅರಣ್ಯ ಕೈಗಾರಿಕಾ ನಿಗಮವು ಉತ್ತಮ ಸಾಧನೆಯತ್ತ ದಾಪುಗಾಲು ಇಡುತ್ತಿದೆ ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವರ ನಿರ್ದೇಶಕರ, ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಎಸ್. ಈ. ಸುಧೀಂದ್ರ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ (ಡಿಸೆಂಬರ್) 17 ರವಿವಾರ ಅರಣ್ಯ ಇಲಾಖೆಯ ವತಿಯಿಂದ 2017ನೇ ಸಾಲಿನ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟ ಸಮಾರೊಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಅರಣ್ಯ ಕೈಗಾರಿಕಾ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರು ಮತ್ತು ಡಿಗ್ರುಪ್ ಸೇರಿದಂತೆ ಇತರ ಖಾಲಿ ಇರುವ ಹುದ್ದೆಗಳಿಗೆ ಒಟ್ಟು 116 ಅಭ್ಯರ್ಥಿಗಳನ್ನು ಭರ್ತಿಮಾಡಬೇಕಿತ್ತು ಅದರಲ್ಲಿ 71 ಅಭ್ಯರ್ಥಿಗಳನ್ನು ನೇಮಕ ಮಾಡಲು ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಕೆಲವೇ ದಿನಗಳಲ್ಲಿ ನೇಮಕಾತಿ ಆದೇಶ ಹೊರಡಿಲಾಗುವುದು ಎಂದು ತಿಳಿಸಿದರು. ಇತ್ತಚಿನ ದಿನಗಳಲ್ಲಿ ಅರಣ್ಯ ಇಲಾಖೆಯು ತಮ್ಮ ಕಾರ್ಯ ಚಟುವಟಿಕೆಗಳೊಂದಿಗೆ ಕ್ರೀಡೆಗಳಲ್ಲಿಯು ಉತ್ತಮ ಸಾಧನೆ ಮಾಡುತ್ತಿದ್ದು, ಅರಣ್ಯ ಇಲಾಖೆಗೆ ಮತ್ತು ಸಿಬ್ಬಂದಿಗಳಿಗೆ ಯಾವುದೇ ರೀತಿ ಕುಂದುಕೊರತೆಗಳು ಆಗದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.
ಎಂ.ಎಲ್.ಆರ್.ಸಿ. ಬ್ರಿಗೇಡಿಯರ್ ಗೋವಿಂದ ಕಾಲವಾಡ ಅವರು ಮಾತನಾಡಿ, ದೇಶದ ರಕ್ಷಣೆಯಲ್ಲಿ ಸೈಕರ ಪಾತ್ರವು ಎಷ್ಟು ಮುಖ್ಯ ಇದೆಯೋ ಅಷ್ಟೇ ಅರಣ್ಯ ಇಲಾಖೆಯದ್ದಾಗಿದೆ. ಅರಣ್ಯದಲ್ಲಿ ಸೈನಿಕರು ಆಯುಧವನ್ನು ಇಟ್ಟು ಕೊಂಡು ಕೆಲಸ ಮಾಡಿದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಯುಧ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಧೈರ್ಯದ ಸಂಗತಿಯಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಬಂಡಿಪೂರ ಹುಲಿ ಸಂರಕ್ಷಣಾ ವಿಭಾಗದ ಮಲೆಯೂರು ವಲಯದ ಹುತಾತ್ಮ ಮುರಗೇಪ್ಪ ತಮ್ಮನಗೋಳ ಅವರ ಕುಟುಂಬಕ್ಕೆ ರಾಜ್ಯ ಸರಕಾರದ ವತಿಯಿಂದ ಕೊಡಮಾಡಿದ 2 ಲಕ್ಷ ರೂ. ಚಕ್ಕನ್ನು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಎಸ್. ಈ. ಸುಧೀಂದ್ರ ಅವರು ನೀಡದರು.
ಕಾರ್ಯಕ್ರಮದಲ್ಲಿ ರಾಜ್ಯ ಅರಣ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಎಂ.ಎ. ಶೇಖ್ ಅವರು ಮಾತನಾಡಿದರು. ಮತ್ತು ವಿವಿಧ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ತಂಡಗಳಿಗೆ ವೇದಿಕೆ ಮೇಲಿದ್ದ ಗಣ್ಯರಿಂದ ಬಹುಮಾನಗಳನ್ನು ನೀಡಲಾಯಿತು.
ವಿವಿಧ ಜಿಲ್ಲೆಗಳ ಅಪರ ಪ್ರಧಾನ ಮುಖ್ಯ ಅರಣ್ಯ ಸಂಸರಕ್ಷಣಾಧಿಕಾರಿಗಳಾದ ಶ್ರೀಮತಿ ಸೀಮಾ ಗರ್ಗ, ಶ್ರೀಮತಿ ಅನೀತಾ ಅರೇಕಲ್, ಸಂಜಯ್ ಬಿಜ್ಜುರ, ಅಶೋಕ ಬಸರಕೊಡ, ಶ್ರೀಮತಿ ರಾಧಾದೇವಿ, ಶ್ರೀಮತಿ ಗೀತಾಂಜಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.