ಉತ್ತಮ ಸಮಾಜಕ್ಕಾಗಿ

ಲೇಖಕಿಯರ ಸಂಘವು ಬೆಳೆದಿರುವದಕ್ಕೆ ಅಂತರಾಷ್ರ್ಟೀಯ ಪ್ರಶಸ್ತಿಗಳೇ ಸಾಕ್ಷಿ: ದೀಪಿಕಾ ಚಾಟೆ

0

ಬೆಳಗಾವಿ: ಲೇಖಕಿಯರ ಸಂಘವು ಬೆಳೆದು ಬಂದ ಬಗೆಯನ್ನು ಹಾಗೂ ಇಂದಿಗೂ ಪ್ರಬುದ್ದತ್ತೆಯಿಂದ ದಾಪುಗಾಲಿಡುತ್ತಾ ಬೆಳೆಯುತ್ತಿರುವದು. ನಮ್ಮ ಜಯ ಅನೇಕ ಲೇಖಕಿಯರಿಗೆ ದೊರೆತ ರಾಷ್ಟ್ರಿಯ ಅಂತರಾಷ್ರ್ಟೀಯ ಪ್ರಶಸ್ತಿಗಳೆ ಸಾಕ್ಷಿ ದಿ.ಲೀಲಾತಾಯಿಯವರು ದಿಮಂತ ವ್ಯಕ್ತಿತ್ವದವರಾಗಿದ್ದು.ಅನೇಕ ಮಹಿಳೆಯರಿಗೆ ಸ್ವಾವಲಂಬನೆಯಿಂದ ಬದುಕನ್ನು ಕಲಿಸಿದವರು.ಅವರಂತ ಚೇತನವನ್ನು ನೆನೆಯುವದು ನಮ್ಮ ಸುಯೋಗ ಎಂದು ದೀಪಿಕಾ ಚಾಟೆ ಅಭಿಪ್ರಾಯ ವ್ಯಕ್ತಪಡಿಸಿದರು
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಸೋಮವಾರ 18 ರಂದು ದಿ.ಲೀಲಾತಾಯಿ ದೇಶಪಾಂಡೆಯವರ ಸ್ಮಾರಣಾರ್ಥ ಆಯೋಜಿಸಲಾಗಿತ್ತು ದತ್ತಿ ನಿಧಿ ಕಾರ್ಯಕ್ರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ನೀತಾರಾವ್ ಅವರು ಕವಿತೆ ಎನ್ನುವದು ಸುಮ್ಮನೇ ಹುಟ್ಟುವುದಿಲ್ಲ ವಿಷಯಗಳು ವಿಚಾರಗಳು ಅವುಗಳನ್ನೆಲ್ಲ ಸೂಕ್ಮವಾಗಿ ಗ್ರಹಿಸುವ ಮನಸಿನಲ್ಲಿ ತಾಕಲಾಟವಾಡಿ ಮಥಿಸಿ,ಶಬ್ದಗಳನ್ನು ಹುಟ್ಟುಹಾಕಿ ಒಂದು ಕವಿತೆಗೆ ಕಾರಣವಾಗಬಹುದು ಕವನಗಳು ಸರಳ ಸುಂದರವಾಗಿ ಓದುಗರು ಮೆಚ್ಚುವಂತೆ ಇರಬೇಕು ನಾವು ಅನುಭವಿಸಿದ. ವಿಷಯಗಳನ್ನು ಲಾಲಿತ್ಯ ಪೂರ್ಣವಾಗಿ ಓದುಗರಿಗೆ ಪ್ರೀತಿ ಬರುವಂತೆ ಹೇಳುವ ವಿಧಾನವೇ ಕವನ.ಹೇಳುವ ವಿಷಯವನ್ನುಕಡಿಮೆ ಶಬ್ದಗಳಲ್ಲಿ ಶಿಸ್ತಾಗಿ ಕಟ್ಟಿ ಕೊಡಬೇಕು.ಆಗ ಕವನ ಸಾರ್ಥಕವಾಗುತ್ತದೆ.ಇಲ್ಲದಿದ್ದರೆ ಬರೀ ಟೋಳ್ಳು ಶಬ್ದಗಳ ವೈಭವ ಪ್ರಾಸಗಳಾಡಂಭರತ್ತಲೇ ಚಿಟ್ಟು ಹಿಡಿಸಬಹುದು ಎಂದು ಅಭಿಪ್ರಾಯ ಪ.ಟ್ಟರು.
ದತ್ತಿ ನಿಧಿ ದಾನಿಗಳಾದ ಪ್ರಕಾಶ ದೇಶಪಾಂಡೆಯವರು ತಮ್ಮ ತಾಯಿದಿ ಲೀಲಾತಾಯಿಯವರ ವ್ಯಕ್ತಿತ್ವ ದಾನವರಣಗೋಳಿಸಿದರು.ಮರಾಠಿ ಮಾತೃಭಾಷೆಯಾದರೂ ಕೂಡ ಕನ್ನಡಭಾಷೆಯ ಅಭಿಮಾನಿಯಾಗಿದ್ದರು ಸಾಹಿತ್ಯದ ಒಲವನ್ನು ಹೊಂದಿದವರಾಗಿದ್ದರು.ಯಾವುದೇ ಜಾತಿ ,ಬೇಧವೇನಿಸದೆ ಎಲ್ಲರೊಂದಿಗೂ ಸಹಬಾಳ್ವೆ ನೆಡೆಸುತ್ತಿದ್ದರು. ಎಂದು ಅಭಿಪ್ರಾಯ ಪಟ್ಟರು.ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಡಾ.ಗುರುದೇವ ಹುಲೆಪ್ಪನ್ನವರಮಠ ಅವರು ದತ್ತಿ ದಾನಿ ಧರ್ಮಗಳಿಗೆ ತಮ್ಮ ಧನವನ್ನು ತೂರಿದಂಥ ದಾನ ಪರಂಪರೆ ನಮ್ಮ ಕನ್ನಡ ನಾಡಿನದು ವನಿತಾ,ಲಲೀತಾ,ಕವಿತಾ ಈ ಮೂರನ್ನು ಕೂಡ ಜಾಗೃಕತೆಯಿಂದ ನೋಡಿಕೋಳ್ಳಬೇಕು ಅಂದಾಗ ಮಾತ್ರ ಅವು ಹೋಳಪನ್ನು ಪಡೆಯಬಲ್ಲವು ಎಂದು ಅಭಿಪ್ರಾಯ ಪಟ್ಟರು.
ರಜನಿ ಜೀರಗ್ಯಾಳ,ಪುಷ್ಪಾ ಮುರಗೋಡ,ಶಕುಂತಲಾ ಹಿರೇಮಠ,ಡಾ.ವಿಜಯಾ ಡಾಂಗೆ, ಮಂಗಲ ಮಠದ,ಶಾಂತಾ ಮಸೂತಿ,ಇಂಧಿರಾ ಮೋಟೆಬೇನ್ನೂರ,ಮೈತ್ರೇಯಣಿ,ಸುನಂದಾ ಮುಳೆ,ಜ್ಯೋತಿ ಬದಾಮಿ ಸ್ವಾಗತಿಸಿದರು.ಹೇಮಾ ಸೋನ್ನೋಳಿ ನಿರೂಪಿಸಿದರು. ,ರೇಣುಕಾ ಕಠಾರೆ ವಂದಿಸಿದರು.ದಯಾ ದೇಶಪಾಂಡೆ,ಎಲ್ ಎಸ್ ಶಾಸ್ತ್ರೀ,ಬಸವರಾಜ ಸಸಾಲಟ್ಟಿ,ಬಸವರಾಜ ಜಗಜಂಪಿ,ಗುಂಡ್ಲೂರು,ನೀಲಗಂಗಾ ಚರಂತಿಮಠ, ಎಮ್.ಎ.ಪಾಟೀಲ ಹಾಗೂ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.