ಉತ್ತಮ ಸಮಾಜಕ್ಕಾಗಿ

ಪ್ರಕಟಣೆ

0

ಸಾರಿಗೆ ಕುಂದು ಕೊರತೆಗಳ ಅಹವಾಲು ಸ್ವಿಕಾರ
ಬೆಳಗಾವಿ: ಡಿಸೆಂಬರ್ 19 (ಮಂಗಳವಾರ) ಮಧ್ಯಾಹ್ನ 12.00 ಗಂಟೆಗೆ ನಗರದ ಉಪ ಸಾರಿಗೆ ಆಯುಕ್ತರ, ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಹಾಗೂ ಡಿಸೆಂಬರ್ 23 ರಂದು ಮಧ್ಯಾಹ್ನ 12.00 ಗಂಟೆಗೆ ಚಿಕ್ಕೋಡಿಯ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಾರಿಗೆ ವ್ಯವಸ್ಥೆಯ ಕುಂದು ಕೊರತೆಗಳ ಕುರಿತು ಅದಾಲತ್‍ವನ್ನು ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಸಾರಿಗೆ ವ್ಯವಸ್ಥೆಯ ಕುರಿತು ಯಾವುದೇ ಕುಂದು ಕೊರತೆಗಳಿದ್ದಲ್ಲಿ, ಸಾರಿಗೆ ಇಲಾಖೆಯ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕೆಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮಾಜಿ ಸೈನಿಕರಿಗೆ ಹೊಸ ಪಿಂಚಣಿ ಅರ್ಜಿ ಆಹ್ವಾನ
ಬೆಳಗಾವಿ:  ಪಿಂಚಣಿ ರಹಿತ ಮಾಜಿ ಸೈನಿಕರು ಈಗಾಗಲೇ ಕೇಂದ್ರೀಯ ಸೈನಿಕ ಮಂಡಳಿ ದೆಹಲಿ ಇವರಿಂದ ಪೆನ್ನೂರಿ ಗ್ರಾಂಟ ಪಡೆಯುತ್ತಿರುವವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ತಿತಿತಿ.ಞsb.gov.iಟಿ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬುದು. ಹೆಚ್ಚಿನ ಮಹಿತಿಗಾಗಿ ಬೆಳಗಾವಿಯ ಜಂಟಿ ನಿರ್ದೇಶಕರ ಕಾರ್ಯಾಲಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ಸಂರ್ಪಕಿಸಬೇಕೆಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಡಿ.23 ರಂದು ಸಾರ್ವಜನಿಕರ ಅಹವಾಲು ಸ್ವಿಕಾರ
ಬೆಳಗಾವಿ: ಡಿಸೆಂಬರ್ 18 (ಕರ್ನಾಟಕ ವಾರ್ತೆ): ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಿಕ ಪಿಂಚಣಿ ಪ್ರಕರಣಗಳ ಕುರಿತು ವಿಲೇವಾರಿ ಜಿಲ್ಲಾ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೋನಗಾ ಗ್ರಾಮದಲ್ಲಿ ಡಿಸೆಂಬರ್ 23 ರಂದು ಬೆಳಿಗ್ಗೆ 11.00 ಗಂಟೆಗೆ ಸಮುದಾಯ ಭವನದಲ್ಲಿ ಸಾರ್ವಜನಿಕರ ಹವಾಲು ಹಾಗೂ ಹೊಸ ಅರ್ಜಿಗಳನ್ನು ಸ್ವಿಕರಿಸಲಾಗುವುದು.
ಸಾರ್ವಜನಿಕರು ಈ ಅದಾಲತ್ತಿನಲ್ಲಿ ಭಾಗವಹಿಸಿ ತಮ್ಮ ಕುಂದುಕೊರತೆಗಳಿಗೆ ಪರಿಹಾರ ಪಡೆದುಕೊಳ್ಳಬೇಕೆಂದು ಕಂದಾಯ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: