ಉತ್ತಮ ಸಮಾಜಕ್ಕಾಗಿ

ಭಾರಿ ಸಂಭ್ರಮಾಚರಣೆ

0

ಹಿಮಾಚಲ ಪ್ರದೇಶ & ಗುಜರಾತನಲ್ಲಿ ಬಿಜೆಪಿ ಜಯಭೇರಿ: ಬೆಳಗಾವಿಯಲ್ಲಿ ಭಾರಿ ಸಂಭ್ರಮಾಚರಣೆ

ಬೆಳಗಾವಿ: ಹಿಮಾಚಲ ಪ್ರದೇಶದಲ್ಲಿ ಮತ್ತು ಗುಜರಾತ ನಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದರಿಂದ ಬೆಳಗಾವಿಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತು. ಮಾಜಿ ಶಾಸಕ ಅಭಯ ಪಾಟೀಲ ಅವರ ಹಳೆ ಪಿಬಿ ರಸ್ತೆಯ ಕಚೇರಿಯಲ್ಲಿ ಸೇರಿಬಂದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಡೋಲು ಭಾರಿಸಿ ಹರ ಹರ ಮೋದಿ ಉದ್ಘೋಷದೊಂದಿಗೆ ಹರ್ಷ ವ್ಯಕ್ತಪಡಿಸಿದರು.ಮಾಜಿ ಶಾಸಕ ಅಭಯ ಪಾಟೀಲ ಮಾತನಾಡಿ ಹಿಮಾಚಲ ಪ್ರದೇಶ ಮತ್ತು ಗುಜರಾತ ಜಯಭೇರಿ ನಂತರ ಕರ್ನಾಟಕದಲ್ಲೂ ಮುಂಬರುವ ಚುನಾವಣೆಯಲ್ಲಿ ಭಾರಿ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಬಿಜೆಪಿ ಹಿಡಿಯಲಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಧೂಳಿಪಟ ಆಗುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಶಶಿ ಪಾಟೀಲ, ಮಂಗೇಶ ಪವಾರ, ಮಹೇಶ ವೇರ್ಣೇಕರ, ಗಜಾನನ ಗುಂಜೇರಿ, ಲೋಹಿತ ಮೋರಕರ, ಚಿದಾನಂದ ಮೂಡಲಗಿ, ರಾಜು ಕಟಾರೆ, ಸಂಜಯ ಸವ್ವಾಸೇರಿ, ನಂದು ಮಿರಜಕರ, ಸಂತೋಷ ಟೋಪಗಿ ಇತರರು ಉಪಸ್ಥಿತರಿದ್ದರು.

ಬಿಜೆಪಿ ವಿಜಯಪತಾಕೆ: ನಗರದಲ್ಲಿ ಮಹಾಸಂಭ್ರಮ

ಬೆಳಗಾವಿ: ಮಾಧ್ಯಮ ಸಮೀಕ್ಷೆಗಳನ್ನು ಬೆಂಬಲಿಸುವಂತೆ ಗುಜರಾತ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರಿಂದ ಪಕ್ಷದ ಪಾಳೆಯದಲ್ಲಿ ಅಪಾರ ಸಂತಸ ಇಂದು ಉಂಟಾಗಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಮುನ್ನೆಲೆ ಇದ್ದಾಗಲೇ ಬೆಳಗಾವಿಯಲ್ಲಿ ಸಂಭ್ರಮ ಬೆಳಿಗ್ಗೆಯಿಂದ ಪ್ರಾರಂಭವಾಗಿತ್ತು.ಮೋದಿ ಮೋಡಿ ಮತ್ತೊಮ್ಮೆ ದೇಶದ ಜನರ ಗಮನ ಸೆಳೆದಿದ್ದು, ಜನರ ಚರ್ಚೆಯಲ್ಲಿದ್ದ ಬಿಜೆಪಿ ಗೆಲುವಿನ ಲೆಕ್ಕಾಚಾರ ಇಂದು ಸಫಲತೆ ಕಂಡಿದೆ. ಬಿಜೆಪಿಯ ಚುನಾವಣಾ ಸಫಲತೆ ಹಿನ್ನಲೆ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿ‌ದರು. ಚನ್ನಮ್ಮ ವೃತ್ತದಲ್ಲಿ ಸೇರಿಬಂದ ಕಾರ್ಯಕರ್ತರು ಸಂಭ್ರಮ ಆಚರಣೆ ನಡೆಸಿದರು. ನಂತರ ಚನ್ನಮ್ಮ ವೃತ್ತದ ಗಣೇಶನಿಗೆ ಪೂಜೆ ಸಲ್ಲಿಸಲಾಯಿತು.ನಗರ ಜಿಲ್ಲಾಧ್ಯಕ್ಷ ರಾಜೇಂದ್ರ ಹರಕುಣಿ, ಉಪಾಧ್ಯಕ್ಷ ಶಿವಲಿಂಗ ಹೂಗಾರ, ಡಾ. ರವಿ ಪಾಟೀಲ, ಕಿರಣ ಜಾಧವ, ರಾಜು ಚಿಕ್ಕನಗೌಡ್ರ, ನ್ಯಾಯವಾದಿ ಹಾಗೂ ಮುಖಂಡ ಅನಿಲ ಬೆನಕೆ, ರಾಜು ಟೋಪಣ್ಣವರ, ಗೂಳಪ್ಪ ಹೊಸಮನಿ, ಪಾಂಡುರಂಗ ಧೋತ್ರೆ, ಸದಾನಂದ ಗುಂಟೇಪ್ಪನವರ, ಲೀನಾ ಟೋಪಣ್ಣವರ, ದೀಪಾ ಕುಡುಚಿ, ಸಾರಿಕಾ ಪಾಟೀಲ, ಶಿಲ್ಪಾ ಕೇಕರೆ, ಪ್ರಜ್ಞಾ ಶಿಂಧೆ ಸೇರಿ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.