ಉತ್ತಮ ಸಮಾಜಕ್ಕಾಗಿ

ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಎರಡು ದಿನಗಳ ಪ್ರವಾಸ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ

0

ಬೆಳಗಾವಿ: ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಡಿಸೆಂಬರ್ 21 ಹಾಗೂ 22 ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಗೋಕಾಕ, ರಾಯಬಾಗ, ಕುಡಚಿ, ಯಮಕನಮರಡಿ, ರಾಮದುರ್ಗ ಹಾಗೂ ಕಿತ್ತೂರು ವಿಧಾನಸಭಾ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಕಿತ್ತೂರು ಮತಕ್ಷೇತ್ರ:
ಕಿತ್ತೂರು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ, ನೀರಾವರಿ, ಸಾರ್ವಜನಿಕ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ರೂ. 27489.17 ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
• ಕರ್ನಾಟಕ ನೀರಾವರಿ ನಿಗಮ ನಿಯಮಿತ: ಕಿತ್ತೂರು ಮತಕ್ಷೇತ್ರದ ಕೆರೆಗಳಿಗೆ ಮಲಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ. ಅಂದಾಜು ಮೊತ್ತ 24820 ಲಕ್ಷ.
• ಲೋಕೋಪಯೋಗಿ ಇಲಾಖೆ: ಕಿತ್ತೂರು ಪಟ್ಟಣದಲ್ಲಿ ಮಿನಿ ವಿಧಾನಸೌಧ ಕಟ್ಟಡದ ಶಂಕುಸ್ಥಾಪನೆ. ಅಂದಾಜು ಮೊತ್ತ ರೂ. 1000 ಕೋಟಿ.
• ನಗರಾಭಿವೃದ್ಧಿ ಇಲಾಖೆ: ಕಿತ್ತೂರು ಹಾಗೂ ಎಂ.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಗರೋತ್ಥಾನ-3ರ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಒಟ್ಟು 16 ಕಾಮಗಾರಿಗಳ ಶಂಕುಸ್ಥಾಪನೆ. ಅಂದಾಜು ಮೊತ್ತ ರೂ. 850 ಲಕ್ಷ.
• ಜಲಸಂಪನ್ಮೂಲ ಇಲಾಖೆ: ಕುರಗುಂದ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣದ ಶಂಕುಸ್ಥಾಪನೆ ಹಾಗೂ ಕಿತ್ತೂರು ವಿಧಾನಸಭಾ ಕ್ಷೇತ್ರ ಮಲಪ್ರಭಾ ನದಿ ಮೂಲದಿಂದ ಮಾರ್ಗನಕೊಪ್ಪ ಗ್ರಾಮದ ಒಟ್ಟು 5 ಕೆರೆಗಳ ತುಂಬುವ ಯೋಜನೆಗೆ ಶಂಕುಸ್ಥಾಪನೆ. ಮೊತ್ತ ರೂ. 640 ಲಕ್ಷ.
• ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಷರ್ ಡೆವಲಪ್‍ಮೆಂಟ್ ಲಿ. : ಕಿತ್ತೂರು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಾಲಕರ ವಿದ್ಯಾರ್ಥಿನಿಲಯ ಕಟ್ಟಡದ ಉದ್ಘಾಟನೆ. ಮೊತ್ತ 99.60 ಲಕ್ಷ.
• ಪದವಿಪೂರ್ವ ಶಿಕ್ಷಣ ಇಲಾಖೆ: ಕಿತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರ್.ಐ.ಡಿ.ಎಫ್ 19ರ ಯೋಜನೆಯಡಿಯಲ್ಲಿ ನಿರ್ಮಿಸಲಾದ 6 ಕೊಠಡಿಗಳ ಕಾಮಗಾರಿಯ ಉದ್ಘಾಟನೆ. ಮೊತ್ತ 50.39 ಲಕ್ಷ.
• ಸಾರ್ವಜನಿಕ ಶಿಕ್ಷಣ ಇಲಾಖೆ: ಕತ್ರಿದಡ್ಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಕೊಠಡಿಗಳ ಉದ್ಘಾಟನೆ. ಮೊತ್ತ ರೂ. 27489.17 ಲಕ್ಷ.

ರಾಯಬಾಗ ಮತಕ್ಷೇತ್ರ:
ರಾಯಬಾಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿ, ಗ್ರಾಮೀಣ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ರೂ. 18527.63 ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

• ರಾಯಬಾಗ ತಾಲೂಕಿನ 10 ಗ್ರಾಮಗಳ 17 ಕೆರೆಗಳನ್ನು ಮತ್ತು ಹೆಚ್ಚುವರಿ 22 ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಶಂಕುಸ್ಥಾಪನೆ. ಅಂದಾಜು ಮೊತ್ತ ರೂ. 9140 ಲಕ್ಷ.
• ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ: ನಾಗರಮುನ್ನೊಳ್ಳಿ ಹಾಗೂ ಇತರೆ 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಉದ್ಘಾಟನೆ ಹಾಗೂ ಕಬ್ಬೂರು ಮತ್ತು ಇತರೆ 8 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಉದ್ಘಾಟನೆ. ಮೊತ್ತ 2954.63 ಲಕ್ಷ.
• ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ: ರಾಯಬಾಗ ತಾಲೂಕು ಚಿಂಚಲಿ, ಮುಳವಾಡ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣದ ಶಂಕುಸ್ಥಾಪನೆ. ಮೊತ್ತ 1690 ಲಕ್ಷ.
• ನಗರಾಭಿವೃದ್ಧಿ ಇಲಾಖೆ: ರಾಯಬಾಗ, ಚಿಂಚಲಿ, ಕಬ್ಬೂರ ಹಾಗೂ ಕಂಕಣವಾಡಿ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ನಗರೋತ್ಥಾನ-3 ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಒಟ್ಟು 34 ಕಾಮಗಾರಿಗಳಿಗೆ ಶಂಕುಸ್ಥಾಪನೆ. ತಾಲೂಕಿನ ಹಾರೂಗೇರಿ-ರಾಯಬಾಗ-ನಾಗರಮುನೋಳಿ ರಸ್ತೆ ಕಿ.ಮೀ. 218 ರಿಂದ 23.08 ವರೆಗೆ ರಸ್ತೆ ಸುಧಾರಣೆ ಹಾಗೂ ಅಗಲೀಕರಣ ಕಾಮಗಾರಿಯ ಶಂಕುಸ್ಥಾಪನೆ. ತಾಲೂಕಿನ ಮಂಗಸೂಳಿ-ಲಕ್ಷ್ಮೇಶ್ವರ ರಾ.ಹೆದ್ದಾರಿ 73 ಕಿ.ಮೀ. 56.80 ರಿಂದ 59.66 ವರೆಗೆ ರಸ್ತೆ ಸುಧಾರಣೆ ಕಾಮಗಾರಿಯ ಶಂಕುಸ್ಥಾಪನೆ. ಮೊತ್ತ 598 ಲಕ್ಷ.
• ಜಲಸಂಪನ್ಮೂಲ ಇಲಾಖೆ: ರಾಯಬಾಗ ತಾಲೂಕಿನ ಕಂಕನವಾಡಿ-ತುಕಾನಟ್ಟಿ ರಸ್ತೆಯ ಹಿರೇಹಳ್ಳಕ್ಕೆ ಅಡ್ಡಲಾಗಿ ಬಿ.ಸಿ.ಬಿ ನಿರ್ಮಾಣ. ಶಂಕುಸ್ಥಾಪನೆ. ಮೊತ್ತ ರೂ. 200 ಲಕ್ಷ.

ಕುಡಚಿ ಮತಕ್ಷೇತ್ರ:
ಕುಡಚಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ನೀರಾವರಿ, ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ರೂ. 15265.5 ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

• ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ: ರಾಯಬಾಗ ತಾಲೂಕಿನ ಕುಡಚಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ( ಮಹಾರಾಷ್ಟ್ರ ಗಡಿಗೆ ಸಂಪರ್ಕ) ಶಂಕುಸ್ಥಾಪನೆ. ಅಂದಾಜು ಮೊತ್ತ ರೂ. 5000 ಲಕ್ಷ.
• ಕರ್ನಾಟಕ ನೀರಾವರಿ ನಿಗಮ ನಿಯಮಿತ: ಕುಡಚಿ ಮತಕ್ಷೇತ್ರದಲ್ಲಿ 10 ಗ್ರಾಮಗಳ 19 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಕಾಮಗಾರಿಗೆ ಶಂಕುಸ್ಥಾಪನೆ. ಅಂದಾಜು ಮೊತ್ತ 3438 ಲಕ್ಷ.
• ನಗರಾಭಿವೃದ್ಧಿ ಇಲಾಖೆ: ಪುರಸಭೆ ಕುಡಚಿ, ಹಾರೂಗೇರಿ ಹಾಗೂ ಮುಗಳಖೋಡ ವ್ಯಾಪ್ತಿಯಲ್ಲಿ ನಗರೋತ್ಥಾನ-3ರ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಒಟ್ಟು 34 ಕಾಮಗಾರಿಗಳ ಶಂಕುಸ್ಥಾಪನೆ. ಅಂದಾಜು ಮೊತ್ತ ರೂ. 2337.50 ಲಕ್ಷ.
• ಸಮಾಜ ಕಲ್ಯಾಣ ಇಲಾಖೆ: ಕುಡಚಿ ಪಟ್ಟಣದಲ್ಲಿ ಆಶ್ರಮ ಶಾಲೆ ಹಾಗೂ ಕಪ್ಪಲಗುದ್ದಿ ಗ್ರಾಮದಲ್ಲಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಾಮಗಾರಿಗಳ ಶಂಕುಸ್ಥಾಪನೆ. ಅಂದಾಜು ಮೊತ್ತ ರೂ. 2190 ಲಕ್ಷ.
• ಲೋಕೋಪಯೋಗಿ ಇಲಾಖೆ: ರಾಯಬಾಗ ತಾಲೂಕಿನ ಕಾಗವಾಡ-ಕಲಾದಗಿ ರಾಜ್ಯ ಹೆದ್ದಾರಿ -53 ರ ರಸ್ತೆ ಕಿ.ಮೀ. ನಂ. 24.10 ರಿಂದ 24.40 ರವರೆಗೆ, 28.50 ರಿಂದ 32.55 ರವರೆಗೆ ಸುಧಾರಣೆ ಹಾಗೂ ಅಗಲೀಕರಣ ಕಾಮಗಾರಿಯ ಶಂಕುಸ್ಥಾಪನೆ. ರಾಯಬಾಗ-ಬೆಕ್ಕೇರಿ-ಮೊರಬ ರಸ್ತೆ ಕಿ.ಮೀ. 9 ರಲ್ಲಿ ಸೇತುವೆ ನಿರ್ಮಿಸುವ ಕಾಮಗಾರಿಯ ಶಂಕುಸ್ಥಾಪನೆ. ರಾಯಬಾಗ ತಾಲೂಕಿನ ಕಾಗವಾಡ-ಕಲಾದಗಿ ರಾಜ್ಯ ಹೆದ್ದಾರಿ -53 ರ ರಸ್ತೆ ಕಿ.ಮೀ. 32.55 ರಿಂದ 35 ರವರೆಗೆ ಸುಧಾರಣೆ ಹಾಗೂ ಅಗಲೀಕರಣ ಕಾಮಗಾರಿಯ ಶಂಕುಸ್ಥಾಪನೆ. ಚಿಂಚಲಿ ರೈಲ್ವೆ ಸ್ಟೇಶನ್‍ನಿಂದ ಸುಟ್ಟಟ್ಟಿ-ಕಾಗವಾಡ-ಕಲಾದಗಿ ಕೂಡು ರಸ್ತೆ ಕಿ.ಮೀ. ಪ್ರಾರಂಭದಿಂದ 1.30 ಮತ್ತು 2.98 ರಿಂದ 5.46 ರವರೆಗೆ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ.
• ಕುಡಚಿ ಮತಕ್ಷೇತ್ರದ ಹಾರೂಗೇರಿ –ರಾಯಬಾಗ-ನಾಗರಮುನ್ನೋಳ್ಳಿ ರಸ್ತೆ ಕಿ.ಮೀ. 1.80 ರಿಂದ 7 ರವರೆಗೆ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿಯ ಶಂಕುಸ್ಥಾಪನೆ. ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಂಗಸೂಳಿ-ಲಕ್ಷ್ಮೇಶ್ವರ ರಾ.ಹೆದ್ದಾರಿ- 73 ರ ಬಾಕಿ ಉಳಿದ ಕಿ.ಮೀ. 24 ರಿಂದ 26.20 ರವರೆಗೆ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ. ಈ ಎಲ್ಲ ಕಾಮಗಾರಿಗಳ ಒಟ್ಟು ಅಂದಾಜು ಮೊತ್ತ ರೂ. 1500 ಲಕ್ಷ.
• ಜಲಸಂಪನ್ಮೂಲ ಇಲಾಖೆ: ರಾಯಬಾಗ ತಾಲೂಕಿನ ಖೇಮಲಾಪೂರ ಮತ್ತು ಅಥಣಿ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮಗಳ ಮಧ್ಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ. ಕುಡಚಿ ಗ್ರಾಮದ ಪಾರಿಸ, ಶಿವರಾಯಿ, ಕಾಗವಾಡೆ, ವಸ್ತಿ ಹಾಗೂ ಇತರರಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಒದಗಿಸುವ ಕಾಮಗಾರಿಯ ಶಂಕುಸ್ಥಾಪನೆ. ಅಂದಾಜು ಮೊತ್ತ ರೂ. 800 ಲಕ್ಷ.

ಯಮಕನಮರಡಿ ಮತಕ್ಷೇತ್ರ:
ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ, ಪರಿಶಿಷ್ಟ ವರ್ಗ, ಇಂಧನ, ಗ್ರಾಮೀಣ ಕುಡಿಯುವ ನೀರು, ಜಲಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ರೂ. 7043.63 ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

• ಲೋಕೋಪಯೋಗಿ ಇಲಾಖೆ : ಹುಕ್ಕೇರಿ ತಾಲೂಕಿನ ಶಟ್ಟಿಹಳ್ಳಿ-ಇಂಚಲಕರಂಜಿ ರಾ.ಹೆ.- 78 ಕಿ.ಮೀ. ಪ್ರಾರಂಭದಿಂದ 27.43 ರವರೆಗೆ ಆಯ್ದ ಭಾಗಗಳಲ್ಲಿ ಸುಧಾರಣೆ ಕಾಮಗಾರಿಯ ಉದ್ಘಾಟನೆ. ರೂ. 2074 ಲಕ್ಷ
• ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ : ಹಾಲಭಾವಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಉದ್ಘಾಟನೆ. ರೂ. 1544 ಲಕ್ಷ.
• ಕರ್ನಾಟಕ ವಿದ್ಯುತ ಪ್ರಸರಣ ನಿಗಮ ನಿಯಮಿತ : ಹುದಲಿ ಗ್ರಾಮದಲ್ಲಿ 1×10 ಎಂ.ವಿ.ಎ. 110.11 ಕೆವ್ಹಿ ಹೊಸ ವಿ.ವಿ. ಕೇಂದ್ರದ ಶಂಕುಸ್ಥಾಪನೆ ರೂ. 1455.55 ಲಕ್ಷ.
• ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ : ಕಾಕತಿ ಹಾಗೂ ಇತರೆ 7 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ. ವೆಚ್ಚ ರೂ. 1380.08 ಲಕ್ಷ.
• ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ) : ಹೊಸವಂಟಮೂರಿ ಗ್ರಾಮದ ಕೆರೆಗೆ ನೀರು ತುಂಬಿಸುವ ಕಾಮಗಾರಿಯ ಘಟಪ್ರಭಾ ನದಿಯಿಂದ ಶಂಕುಸ್ಥಾಪನೆ. ಹುಕ್ಕೇರಿ ತಾಲೂಕಿನ ದೊಂಡಗಟ್ಟಿ ಕೆರೆಯನ್ನು ಘಟಪ್ರಭಾ ನದಿಯಿಂದ ತುಂಬಿಸುವ ಕಾಮಗಾರಿಯ ಶಂಕುಸ್ಥಾಪನೆ. ಹುಕ್ಕೇರಿ ತಾಲೂಕಿನ ಮಾವನೂರ (ಸೈಟ್-3) ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 950 ಲಕ್ಷ.

ಗೋಕಾಕ ಮತಕ್ಷೇತ್ರ:
ಗೋಕಾಕ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆ, ರಸ್ತೆ ಅಭಿವೃದ್ಧಿ, ಆರೋಗ್ಯ, ಸಣ್ಣ ನೀರಾವರಿ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ರೂ. 10932.66 ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

• ನಗರಾಭಿವೃದ್ಧಿ ಇಲಾಖೆ : ನಗರಸಭೆ ಗೋಕಾಕ, ಪುರಸಭೆ ಕೊಣ್ಣುರ ಹಾಗೂ ಪ.ಪಂ. ಮಲ್ಲಾಪೂರ ಪಿ.ಜಿ. ವ್ಯಾಪ್ತಿಯಲ್ಲಿ ನಗರೋತ್ಥಾನ-3ರ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಒಟ್ಟು 49 ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಪುರಸಭೆ ಕೊಣ್ಣುರ ಎಸ್.ಎಫ.ಸಿ. ಯೋಜನೆಯಡಿ ನಿರ್ಮಿಸಲಾದ ನೂತನ ಕಟ್ಟಡದ ಉದ್ಘಾಟನೆ. ಅಂದಾಜು ವೆಚ್ಚ ರೂ.3394.26 ಲಕ್ಷ.
• ಲೋಕೋಪಯೋಗಿ ಇಲಾಖೆ : 1) ಪ್ಯಾಕೇಜ ನಂ. 181 ಗೋಕಾಕ ತಾಲೂಕಿನ ಬದಾಮಿ-ಗೊಡಚಿ ಗೋಕಾಕ ಪಾಲ್ಸ್ ರಾಜ್ಯ ಹೆದ್ದಾರಿ- 134 ರಸ್ತೆ ಕಿ.ಮೀ 114.19 ರಿಂದ 125 ರವರೆಗೆ ಮತ್ತು ಜಾಂಬೋಟಿ-ರಬಕವಿ ರಾಜ್ಯ ಹೆದ್ದಾರಿ-54 ಕಿ.ಮೀ 59 ರಿಂದ 86.77 ರವರೆಗಿನ ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆಯ ಕಾಮಗಾರಿಯ ಉದ್ಘಾಟನೆ. ಗೋಕಾಕ ತಾಲೂಕಿನ ಬದಾಮಿ-ಗೊಡಚಿ-ಗೋಕಾಕ ಪಾಲ್ಸ್ ರಾಜ್ಯ ಹೆದ್ದಾರಿ-134 ಕಿ.ಮೀ 114.75 ರಿಂದ 115.75 ಹಾಗೂ 116.90 ರಿಂದ 117.50 ರವರೆಗಿನ ರಸ್ತೆಯ ಅಗಲೀಕರಣ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣದ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 3012.40 ಲಕ್ಷ
• ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ : ಗೋಕಾಕ ತಾಲೂಕಿನ ದೂಪದಾಳ-ಗೋಕಾಕ ಪಾಲ್ಸ್ ರಸ್ತೆಯ ಕಿ.ಮೀ 4 ರಲ್ಲಿ ಘಟಪ್ರಭಾ ನದಿಗೆ ಶಂಕುಸ್ಥಾಪನೆ. ಗೋಕಾಕ ತಾಲೂಕಿನ ಗೋಕಾಕ ಪಟ್ಟಣದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಸೇತುವೆಯ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 2300 ಲಕ್ಷ.
• ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ : ಗೋಕಾಕ ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ 100 ಹಾಸಿಗೆಗಳ ಮಹಿಳೆಯ ಹಾಗೂ ಮಕ್ಕಳ ಆಸ್ಪತ್ರೆ (ಎಂ.ಸಿ.ಹೆಚ್) ನಿರ್ಮಾಣದ ಕಾಮಗಾರಿಯ ಉದ್ಘಾಟನೆ. ಅಂದಾಜು ವೆಚ್ಚ ರೂ. 1361 ಲಕ್ಷ.
• ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ : ಯೋಗಿಕೊಳ್ಳ ಗ್ರಾಮದ ಹತ್ತಿರ ಮಾರ್ಕಂಡೇಯ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ ನಿರ್ಮಾಣ ಕಾಮಗಾರಿಯ ಉದ್ಘಾಟನೆ. ಗೋಕಾಕ ತಾಲೂಕಿನ ಶಿಂಗಳಾಪೂರ (ಸೈಟ್-2) ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ. ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಹತ್ತಿರ ಬಳ್ಳಾರಿ ನಾಲಾಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 600 ಲಕ್ಷ.
• ಸಮಾಜ ಕಲ್ಯಾಣ ಇಲಾಖೆ : ಮಲ್ಲಾಪೂರ ಪಿ.ಜಿ. ಗ್ರಾಮದಲ್ಲಿನ ಮೆಟ್ರಿಕಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 265 ಲಕ್ಷ.

ರಾಮದುರ್ಗ ಮತಕ್ಷೇತ್ರ:
ರಾಮದುರ್ಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನೀರು ಸರಬರಾಜು, ಸಮಾಜ ಕಲ್ಯಾಣ, ಗ್ರಾಮೀಣ ಕುಡಿಯುವ ನೀರು, ಶಿಕ್ಷಣ, ಜಲಸಂಪನ್ಮೂಲ, ವಿದ್ಯುತ್ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು ರೂ. 14224.66 ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

• ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ : ರಾಮದುರ್ಗ ಪಟ್ಟಣದ ಹಾಗೂ ಮಾರ್ಗ ಮಧ್ಯದ 13 ಹಳ್ಳಿಗಳಿಗೆ ರೇಣುಕಾ ಸಾಗರ ಜಲಾಶಯ ಮೂಲದಿಂದ 24 ಘಿ 7 ಕುಡಿಯುವ ನೀರು ಸರಬರಾಜು ಯೋಜನೆಯ ಉದ್ಘಾಟನೆ. ಅಂದಾಜು ವೆಚ್ಚ ರೂ. 5808.25 ಲಕ್ಷ.
• ಸಮಾಜ ಕಲ್ಯಾಣ ಇಲಾಖೆ : ಬಟಕುರ್ಕಿ ಗ್ರಾಮದಲ್ಲಿನ ಇಂದಿರಾ ಗಾಂಧಿ ವಸತಿ ಶಾಲೆ ಹಾಗೂ ರಾಮದುರ್ಗ ತಾಲೂಕಿನ ಕೇಂದ್ರದಲ್ಲಿನ ಮೆಟ್ರಿಕ ನಂತರದ ಬಾಲಕರ ವಿದ್ಯಾರ್ಥಿ ನಿಲಯಗಳ ಕಾಮಗಾರಿಯ ಶಂಕುಸ್ಥಾಪನೆ. ಕೆ.ಚಂದರಗಿ, ಕಟಕೋಳ, ಸುರೇಬಾನ ಮತ್ತು ಮುದಕವಿ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 2530 ಲಕ್ಷ.
• ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಬಟಕುರ್ಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 1200 ಲಕ್ಷ.
• ಸಾರ್ವಜನಿಕ ಶಿಕ್ಷಣ ಇಲಾಖೆ: ಹೊಸದಾಗಿ ನಿರ್ಮಿಸಲಾದ ಆದರ್ಶ ವಿದ್ಯಾಲಯ ಮತ್ತು ಬಾಲಕಿಯರ ವಸತಿ ನಿಲಯ, ಕಟಕೋಳ ಹಾಗೂ ಸರ್ಕಾರಿ ಪ್ರೌಢ ಶಾಲೆ ನರಸಾಪೂರ, ತೋರಣಗಟ್ಟಿ, ಸಾಲಹಳ್ಳಿ, ಚುಂಚನೂರ ಮತ್ತು ಬನ್ನೂರ ತಾಂಡಾ ಕಟ್ಟಡಗಳ ಶಂಕುಸ್ಥಾಪನೆ, ಅಂದಾಜು ವೆಚ್ಚ ರೂ. 1025.27 ಲಕ್ಷ.
• ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ರಾಮದುರ್ಗ ತಾಲೂಕಿನ ಅವರಾದಿ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ಬ್ಯಾರೇಜ್ ಸಹಿತ ಸೇತುವೆ ನಿರ್ಮಾಣದ ಉದ್ಘಾಟನೆ ಮತ್ತು ಗೊಣಗನೂರ ಗ್ರಾಮದ ಹತ್ತಿರ ಮಲಪ್ರಭಾನದಿಗೆ ಅಡ್ಡಲಾಗಿ ಬಿ.ಸಿ.ಬಿ. ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಹರಲಾಪೂರ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ಬಿ.ಸಿ.ಬಿ. ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ. ಹುಲಿಗೊಪ್ಪ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ಬಿ.ಸಿ.ಬಿ. ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 950 ಲಕ್ಷ.
• ಕರ್ನಾಟಕ ವಿದ್ಯುತ ಪ್ರಸರಣ ನಿಗಮದಿಂದ ಜಿ. ಹೊಸಕೋಟಿ ಗ್ರಾಮದಲ್ಲಿ 1*10 ಎಂ.ವಿ.ಎ, 110/11 ಕೆ.ವಿ ಹೊಸ ವಿ.ವಿ ಕೇಂದ್ರದ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 948.89 ಲಕ್ಷ.
• ರಾಜ್ಯ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ : ರಾಮದುರ್ಗ ತಾಲೂಕಿನ ಮುನವಳ್ಳಿ, ಕೊಟಿಮಚಗಿ ರಾಜ್ಯ ಹೆದ್ದಾರಿ 83 ಕಿ.ಮೀ 59.40 ರಲ್ಲಿ ಬಾಕ್ಸ್‍ಕಲ್ವರ್ಟ್ ನಿರ್ಮಾಣ. ಮುದೇನೂರು ಸಾಲಾಪುರ ರಸ್ತೆಯ ಕಿ.ಮೀ 2.4 ಮತ್ತು 3.50 ರಲ್ಲಿ ಬಾಕ್ಸ್‍ಕಲ್ವರ್ಟ್ ನಿರ್ಮಾಣ. ರಾಜ್ಯ ಹೆದ್ದಾರಿ 139 ರಿಂದ ಹನಮಸಾಗರ, ಚುಂಚನೂರು, ಬೆನಕಟ್ಟಿ ರಸ್ತೆ ಕಿ.ಮೀ 8.50 ರಲ್ಲಿ ಸೇತುವೆ ನಿರ್ಮಾಣ. ಹಲಗತ್ತಿ, ಮೂಲಂಗಿ ಹಿರೇತಡಸಿ ರಸ್ತೆಯ ಕಿ.ಮೀ 4.50 ರಲ್ಲಿ ಸೇತುವೆ ನಿರ್ಮಾಣ. ಮುಳ್ಳೂರು, ಮುದೇನಕೊಪ್ಪ, ಚಿಕ್ಕನರಗುಂದ ರಸ್ತೆಯ ಕಿ.ಮೀ 1.8ರಲ್ಲಿ ಸೇತುವೆ ಕಾಂಕ್ರೀಟ್ ಮಾಡುವುದು. ಜಾಲಿಕಟ್ಟಿ, ಕಿತ್ತೂರು, ಕುರಗೋವಿನಕೊಪ್ಪ ರಸ್ತೆಯ ಕಿ.ಮೀ 2.10 ಮತ್ತು 2.50ರಲ್ಲಿ ಬಾಕ್ಸ್‍ಕಲ್ವರ್ಟ್ ನಿರ್ಮಾಣ. ಮುದೇನೂರು, ಹನುಮಾಪುರ, ಉಮಥಾರ ರಸ್ತೆಯ ಕಿ.ಮೀ 11ರಲ್ಲಿ ಪೇವ್‍ಡೀಪ್ ದುರಸ್ಥಿ ಕಾಮಗಾರಿಗಳ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 500 ಲಕ್ಷ.
• ಗೃಹ ಇಲಾಖೆ : ರಾಮದುರ್ಗ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂಧಿಗಳ ವಸತಿ ಸಮುಚ್ಚಯದ ಉದ್ಘಾಟನೆ. ಅಂದಾಜು ವೆಚ್ಚ ರೂ. 456.50 ಲಕ್ಷ.

• ಪಂಚಾಯತ ರಾಜ್ ಇಂಜಿನೀಯರಿಂಗ್ ಇಲಾಖೆ : ರಾಮದುರ್ಗ ತಾಲೂಕಿನ ಕೆ. ಜುನಿಪೇಠ ಗ್ರಾಮದ ಹತ್ತಿರ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ತೂಗು ಸೇತುವೆಯ ಉದ್ಘಾಟನೆ. ಅಂದಾಜು ವೆಚ್ಚ ರೂ. 265 ಲಕ್ಷ
• ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ : ಕಟಕೋಳ ಗ್ರಾಮದಲ್ಲಿ ಕಾಳು ಸಂಗ್ರಹಣೆ ಮಾಡುವ 1000 ಮೆಟ್ರಿಕ ಟನ್ ಸಾಮಥ್ರ್ಯದ ಒಂದು ಗೋದಾಮು, ಕುರಿ, ಮೇಕೆ, ಸಂತೆ ಕಟ್ಟಿ, ರಾಮದುರ್ಗ ಕ್ಲನಿಂಗ್ ಗ್ರೈಂಡಿಂಗ್ ಪ್ಯಾಕಿಂಗ್ ಯುನಿಟ್ ಕಟ್ಟಡಗಳ ಉದ್ಘಾಟನೆ. ಅಂದಾಜು ವೆಚ್ಚ ರೂ. 220 ಲಕ್ಷ.
• ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ರಾಮದುರ್ಗ ತಾಲೂಕಿನ ಕೇಂದ್ರದಲ್ಲಿ ಡಿ. ದೇವರಾಜ ಅರಸು ಭವನದ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 100 ಲಕ್ಷ.
• ನಗರಾಭಿವೃದ್ಧಿ ಇಲಾಖೆ : ನಗರೋತ್ಥಾನ 3ರ ಯೋಜನೆಯಡಿಯಲ್ಲಿ ಪುರಸಭೆ ರಾಮದುರ್ಗ ಪಟ್ಟಣದ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗಳ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 99.25 ಲಕ್ಷ.
• ಕಾರ್ಮಿಕ ಇಲಾಖೆ: ರಾಮದುರ್ಗಲ್ಲಿನ ಸರ್ಕಾರಿ ಕೈಗಾರಿಕೆ ತರಬೇತಿ ಕೇಂದ್ರದ ಉದ್ಘಾಟನೆ. ಅಂದಾಜು ವೆಚ್ಚ ರೂ. 89 ಲಕ್ಷ.
• ಪಶು ಸಂಗೋಪನೆ: ತಾಲೂಕಿನಲ್ಲಿ ಪಶು ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ. ಅಂದಾಜು ವೆಚ್ಚ ರೂ. 32.50 ಲಕ್ಷ.
• ಸಾರಿಗೆ ಇಲಾಖೆ: ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಪ್ರಾರಂಭೋತ್ಸವ. ಅಂದಾಜು ವೆಚ್ಚ ರೂ. 14224.66 ಲಕ್ಷ.

Leave A Reply

 Click this button or press Ctrl+G to toggle between Kannada and English

Your email address will not be published.