ಉತ್ತಮ ಸಮಾಜಕ್ಕಾಗಿ

St.Paul’s ಶಾಲೆ: ಹಳೆ ವಿದ್ಯಾರ್ಥಿಗಳ ಮಹಾಸಮ್ಮೇಳನ ಡಿ. 23ಕ್ಕೆ

0

ಬೆಳಗಾವಿ: ನಗರದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆ ತನ್ನದೇ ರೆಕಾರ್ಡ್ ಮುರಿದು ಇನ್ನೊಂದು ಜಾಗತಿಕ ರೆಕಾರ್ಡ್ ಮಾಡಲು ಹೊರಟಿದೆ. ಇಂದು ಸುದ್ದಿಗೋಷ್ಠಿಯಲ್ಕಿ ವಿಷಯ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಮನೋಜ ಮೈಕಲ್ 2017 ರಲ್ಲಿ 160 ನೇ ಸ್ಥಾಪನಾ ದಿನಾಚರಣೆ ಆಚರಿಸಿದ್ದ ಸೇಂಟ್ ಪಾಲ್ ಸಂಸ್ಥೆ ಈ ಬಾರಿ ಹಳೆ ವಿದ್ಯಾರ್ಥಿಗಳನ್ನು ಸೇರಿಸಿ ಜಾಗತಿಕ ದಾಖಲೆ ಮಾಡಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸುಮಾರು 3638 ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿರುವ ಸಮ್ನೇಳನ ಸಂಸ್ಥೆಯ ಇತಿಹಾಸದಲ್ಲಿ ಸ್ಮರಣೀಯವಾಗಿರಲಿದೆ. ಡಿಸೆಂಬರ್ 23ರ ಬೆಳಿಗ್ಗೆ 9ಕ್ಕೆ Paulite’s Annual Dinner ಕಾರ್ಯಕ್ರಮ ನಡೆಯಲಿದೆ. ಶಾಲಾ ಮೈದಾನದಲ್ಲಿ ಹಳೆ ವಿದ್ಯಾರ್ಥಿಗಳಿಗೆ ಫುಟಬಾಲ್ ಸೇರಿ ಇತರ ಸ್ಪರ್ಧೆ & ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಹಳೆ ವಿದ್ಯಾರ್ಥಿಗಳು ಮತ್ತು ಅವರ ಸಂಬಂಧಿಕರಿಗೆ ಡಿನ್ನರ್ ಪಾರ್ಟಿ, ರಸಸಂಜೆ ಏರ್ಪಡಿಸುವ ಮೂಲಕ ದಾಖಲೆ ಬರೆಯಲಾಗುವುದು ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.