ಉತ್ತಮ ಸಮಾಜಕ್ಕಾಗಿ

ಕಾಂಗ್ರೆಸ್ ಗೆ ಸೇರ್ಪಡೆ

0

ಬೆಳಗಾವಿ: ವಿಸ್ಮಯ ಬೆಳವಣಿಗೆಯೊಂದರಲ್ಲಿ; ಕೊಲೆಗೀಡಾಗಿದ್ದ ಧಾರವಾಡ ಜಿಪಂ. ಬಿಜೆಪಿ ಸದಸ್ಯ ದಿ. ಯೋಗಿಶಗೌಡ ಅವರ ಪತ್ನಿ ಮಲ್ಲಮ್ಮ ಬೆಳಗಾವಿಯಲ್ಲಿ ಕಾಂಗ್ರೆಸ್ ಗೆ ಇಂದು ಸಂಜೆ ಸೇರಿಕೊಂಡಿದ್ದಾರೆ. ತಮ್ಮ ಪತಿ ಯೋಗಿಶ ಗೌಡರ ಹತ್ಯೆಯಲ್ಲಿ ಬಿಜೆಪಿ ನಾಯಕರು ಅನಾವಶ್ಯಕ ರಾಜಕೀಯ ಬೆಳವಣಿಗೆ ಸೃಷ್ಟಿಸಿದ್ದಾರೆ. ಇದರಿಂದ ತಮಗೆ ತೀವೃ ಬೇಸರವಾಗಿದ್ದು, ಆದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಮಲ್ಲಮ್ಮ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮಲ್ಲಮ್ಮ ಅವರಿಗೆ ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಬಿಜೆಪಿ ಪಕ್ಷದ ನಡುವಳಿಕೆಗಳ ಬಗ್ಗೆ‌ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸ್ವ-ಇಚ್ಛೆಯಿಂದ ಸೇರ್ಪಡೆಗೊಂಡಿದ್ದೇ‌ನೆ ಎಂದು ಮಲ್ಲಮ್ಮ ಪ್ರತಿಕ್ರಿಯಿಸಿದರು. ಯೋಗೀಶಗೌಡರ ಕೊಲೆ ಪ್ರಕರಣವನ್ನು ಕೇಂದ್ರದ ತನಿಖಾ ದಳಗಳಿಗೆ ವಹಿಸುವ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಸಿಬಿಐ ನಂತಹ ತನಿಖಾ ಸಂಸ್ಥೆಗಳಿಗೆ ವಹಿಸಿ ಕೊಲೆ ಸಂಚು ಹೊರಬರಬೇಕೆನ್ನುವುದು ತಮ್ಮ ಕುಟುಂಬ ಸದಸ್ಯರ ಒತ್ತಾಸೆ ಸಹ ಎಂದು ಮಲ್ಲಮ್ಮ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.