ಉತ್ತಮ ಸಮಾಜಕ್ಕಾಗಿ

ಪ್ರಕಟಣೆ

0

ಪಿಂಚಣಿ ರಹಿತ ಮಾಜಿ ಸೈನಿಕರ ಗಮನಕ್ಕೆ
ಬೆಳಗಾವಿ: ಪಿಂಚಣಿ ರಹಿತ ಮಾಜಿ ಸೈನಿಕರು ಈಗಾಗಲೇ ಕೇಂದ್ರೀಯ ಸೈನಿಕ ಮಂಡಳಿ ದೆಹಲಿ ಇವರಿಂದ ಪೆನ್ಯೂರಿ ಗ್ರಾಂಟ ಪಡೆಯುತ್ತಿರುವವರು ಹಾಗೂ ಹೊಸದಾಗಿ ಪಡೆಯಲಿಚ್ಚಿಸುವವರು ಆನ ಲೈನ ಮೂಲಕ ಕೇಂದ್ರೀಯ ಸೈನಿಕ ಮಂಡಳಿ ಹೊಸ ದೇಹಲಿ ಇವರಿಗೆ ವೆಬಸೈಟ www.ksb.gov.in ನಲ್ಲಿ ನವೀಕರಣದ ಮತ್ತು ಹೊಸ ಅರ್ಜಿಗಳನ್ನು(RENEWAL and NEW APPLICATION)ಗಳನ್ನು ತುಂಬುವಂತೆ ತಿಳಿಸಲಾಗಿದೆ. ನವೀಕರಣದ ಅರ್ಜಿಗಳನ್ನು (RENEWAL) ತುಂಬುವ ಮೊದಲು ಈ ಕಾರ್ಯಾಲಯದಿಂದ ಜೀವಿತ ಪ್ರಮಾಣ ಪತ್ರ (LIFE CERTIFICATE) ವನ್ನು ಪಡೆದು ತುಂಬ ಬೇಕಾಗಿರುವುದರಿಂದ ಈ ಕಾರ್ಯಾಲಯಕ್ಕೆ ಕೂಡಲೇ ಬರುವಂತೆ ತಿಳಿಸಲಾಗಿದೆ.
ಮಾಜಿ ಸೈನಿಕರ ಮಕ್ಕಳ ಭರ್ತಿ ರ್ಯಾಲಿ
ಬೆಳಗಾವಿ:  ಹೆಡಕ್ವ್ವಾರ್ಟರ್ಸ್ ಮದ್ರಾಸ್ ಇಂಜಿನಿಯರ್ ಗ್ರೂಫ್ ಮತ್ತು ಸೆಂಟರ್ ಬೆಂಗಳೂರು ರವರ ಕೋಟಾದಡಿಯಲ್ಲಿ ದಿನಾಂಕ 28 ಡಿಸೆಂಬರ್ 2017 ರಿಂದ ಸೇನಾ ಭರ್ತಿ ರ್ಯಾಲಿ ನಡೆಯಲಿದೆ. ಇದರಲ್ಲಿ ಮದ್ರಾಸ್ ಎಂಜಿನಿಯರ್ ಗ್ರೂಫ್‍ನಲ್ಲಿ ಸೇವೆ ಸಲ್ಲಿಸಿದ ಹಾಗೂ ಕರ್ನಾಟಕ ರಾಜ್ಯದ ಯುದ್ಧ ಸಂತ್ರಸ್ಥರ ಮಕ್ಕಳು, ಸೇವೆಯಲ್ಲಿರುವ ಸೈನಿಕರ ಮಕ್ಕಳು, ಮಾಜಿ ಸೈನಿಕರ ಮಕ್ಕಳು ಹಾಗೂ ಸೇವೆಯಲ್ಲಿರುವ ಸೈನಿಕರ ಸ್ವಂತ ಸಹೋದರರು ಮಾತ್ರ ಭಾಗವಹಿಸಬಹುದು.
ರ್ಯಾಲಿ ನಡೆಯುವ ಸ್ಥಳ : 3 ಟ್ರೇನಿಂಗ ಬಟಾಲಿಯನ್ ಮಾರುತಿ ಸೇವಾ ನಗರ ಗೆಟ, ಮದ್ರಾಸ ಇಂಜನಿಯರ ಗ್ರೂಫ್ ಮತ್ತು ಸೆಂಟರ್ ಬೆಂಗಳೂರು-42. ಅಭ್ಯರ್ಥಿಗಳು ದಿನಾಂಕ 28 ಡಿಸೆಂಬರ್ 2018 ರಂದು ಬೆಳಿಗ್ಗೆ 0530ಘಂಟೆಗೆ ಹಾಜರಿರಬೇಕು.

ಡಿ.24 ರಂದು ಕಿತ್ತೂರಿನ ಸೈನಿಕ ಶಾಲೆಯ ವಾರ್ಷಿಕ ದಿನಾಚರಣೆ
ಬೆಳಗಾವಿ: ಚನ್ನಮ್ಮನ ಕಿತ್ತೂರಿನ ಸಮೀಪದ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ 49ನೇ ವಾರ್ಷಿಕ ದಿನಾಚರಣೆ ಸಮಾರಂಭವನ್ನು ಡಿಸೆಂಬರ್.24 ರಂದು ಬೆಳಿಗ್ಗೆ 10 ಗಂಟೆಗೆ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಗೆ ಪಥಸಂಚಲನ ಹಾಗೂ ಮೈದಾನದ ಚಟುವಟಿಕೆ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 11.30ಕ್ಕೆ ಶಾಲಾ ಆವರಣದ ಡಾ. ಬಿ.ಡಿ. ಜತ್ತಿ ಬಯಲು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ. ಉದ್ಯಮಿ ಡಾ. ವಿಜಯ ಸಂಕೇಶ್ವರ ಹಾಗೂ ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸಮಿತಿಯ ಅಧ್ಯಕ್ಷರಾದ ಡಾ. ದ್ರಾಕ್ಷಾಯಿಣಿ ಜಂಗಮಶೆಟ್ಟಿ ಅಧ್ಯಕ್ಷತೆ ವಹಿಸುವರು.
ಉಪಾಧ್ಯಕ್ಷರಾದ ಮಹಾಂತಪ್ಪ ಪಟ್ಟಣಶೆಟ್ಟರ್, ಚೇರ್‍ಮನ್ ಡಾ. ಮಹೇಂದ್ರ ಕಂಠಿ, ಸದಸ್ಯರಾದ ಮಹಾಂತೇಶ ಕೌಜಲಗಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳುವರು ಎಂದು ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.