ಉತ್ತಮ ಸಮಾಜಕ್ಕಾಗಿ

ಕಿಡಿಗೇಡಿಗಳನ್ನು ದಮನ ಮಾಡಿ: ಡಿಸಿಗೆ MES ಒತ್ತಾಯ

0

ಬೆಳಗಾವಿ: ಸೋಮವಾರ ತಡರಾತ್ರಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ನಡೆದ ಕಲ್ಲುತೂರಾಟ ಮತ್ತು ದೊಂಬಿ ಪ್ರಕರಣಗಳಲ್ಲಿನ ಕಿಡಿಗೇಡಿಗಳನ್ನು ಬಂಧಿಸುವಂತೆ ಎಂಇಎಸ್ ನಗರ ಘಟಕ ಇಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದೆ. ಕಳೆದ ಹಲವು ದಿನಗಳಿಂದ ನಗರದ ಅತಿಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಡುವ ಖಡಕ್ ಗಲ್ಲಿ, ಜಾಲಗಾರ ಗಲ್ಲಿ, ದರಬಾರ ಗಲ್ಲಿ, ಖಡೇಬಜಾರ್ ಪ್ರದೇಶಗಳಲ್ಲಿ ಭಾರಿ ಕಲ್ಲುತೂರಾಟ ನಡೆದಿರುವುದು, ವಾಹನಗಳನ್ನು ಸುಟ್ಟು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದದ್ದು ಅಶಾಂತಿ ಮೂಡಿಸಿದೆ. ಸ್ವತಃ ಎಸಿಪಿ ಶಂಕರ ಮಾರಿಹಾಳ ಅವರಿಗೆ ಕಲ್ಲು ತೂರಿ ಗಾಯಪಡಿಸಿದ್ದು ಕಾನೂನು ಸುವ್ಯವಸ್ಥೆಯನ್ನೇ ಕೈಗೆ ತೆಗೆದುಕೊಂಡಂತೆ ಆಗಿದೆ ಎಂದು ಎಂಇಎಸ್ ಆತಂಕ ವ್ಯಕ್ತಪಡಿಸಿದೆ. ಕಳೆದ ನವ್ಹೆಂಬರ್ ಮಾಸದಲ್ಲಿ ಇಂತಹ ಘಟನೆ ನಡೆದು ಈಗ ಮರುಕಳಿಸಿರುವುದು ಖೇದಕರ. ನಗರದ ವ್ಯಾಪಾರ ವಹಿವಾಟಿಗೆ ತೀವೃ ಧಕ್ಕೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಜಿಲ್ಲಾಡಳಿತ ತತಕ್ಷಣ ಕೀಟಲೆಕೋರರ ಪತ್ತೆ ಹಚ್ಚಿ ಹೆಡೆಮುರಿಕಟ್ಟಬೇಕು ಎಂದು ಎಂಇಎಸ್ ವಿನಂತಿ ಮಾಡಿದೆ.

ಮಾಜಿ ಮಹಾಪೌರರಾದ ಸರಿತಾ ಪಾಟೀಲ, ಟಿ. ಕೆ. ಪಾಟೀಲ, ನೇತಾಜಿ ಜಾಧವ, ನಾರಾಯಣ ಕಿಟವಾಡಕರ, ನಾಗೇಶ ಸಾತೇರಿ, ದ್ವಾರಕನಾಥ ಉರಣಕರ, ಕಿರಣ ಸಾಯನಾಯಕ, ರತನ ಮಾಸೇಕರ, ದೇವೇಂದ್ರ ದಳವಿ, ಸುಹಾಸ ಕಿಲ್ಲೇಕರ, ಗೋಪಾಲ ಕಿಲ್ಲೇಕರ, ಪಿ. ಬಿ. ಪಾಟೀಲ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.