ಉತ್ತಮ ಸಮಾಜಕ್ಕಾಗಿ

ವಿದ್ಯಾರ್ಥಿಗಳ ರಕ್ಷಣೆ ಮಾಡಲಾಗದ ಸರಕಾರ: ಪ್ರತಿಭಟನೆ

0

ಬೆಳಗಾವಿ: ವಿಜಯಪುರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ದಲಿತ ಬಾಲಕಿಯ ಪ್ರಕರಣಕ್ಕೆ ನಗರದಲ್ಲಿ ಭಾರಿ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ, ಎಬಿವಿಪಿ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಯುವ ಮಂಚ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರತ್ಯೇಕ ಮನವಿ ಸಲ್ಲಿಸಿದವು.ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಶಾಂತಿಗೆ ಹೆಸರಾದ ಕರ್ನಾಟಕದಲ್ಲಿ ಕೊಲೆ, ಅತ್ಯಾಚಾರ, ಮಾನಹಾನಿ, ರೈತ ಆತ್ಮಹತ್ಯೆ ಪ್ರಕರಣಗಳು, ಜಿಹಾದಿ ಶಕ್ತಿಗಳ ಅಟ್ಟಹಾಸ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಎಗ್ಗಿಲ್ಲದೇ ನಡೆದಿವೆ ಆದರೆ ಸಮಾಜ ವಿರೋಧಿಗಳು ಮತ್ತು ದುಷ್ಕರ್ಮಿಗಳ ಸೆದೆ ಬಡೆಯಲು ರಾಜ್ಯ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಹೋಲಿಕೆಯಾಗಿ ಅಪ್ರಾಪ್ತ ಶಾಲಾ ಬಾಲಕಿಯನ್ನು ಕಾಮುಕರು ಅತ್ಯಾಚಾರ ಗೈದು ಹತ್ಯೆ ಮಾಡಿರುವುದು ಶೋಚನೀಯ ಎಂದು ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಇದಲ್ಲದೇ ಬಿಜೆಪಿಯ ದಿ. ಯೋಗೀಶಗೌಡರ ಪತ್ನಿಗೆ ಇಲ್ಲ ಸಲ್ಲದ ಆಮೀಷ ಒಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ವ್ಯವಸ್ಥಿತ ಹುನ್ನಾರ ಮಾಡಿದೆ ಎಂದರು.
ರಾಜೇಂದ್ರ ಹರಕುಣಿ, ಶಿವಲಿಂಗ ಹೂಗಾರ, ಡಾ. ರವಿ ಪಾಟೀಲ, ಉಜ್ವಲಾ ಬಡವನಾಚೆ, ರಾಜು ಚಿಕ್ಕನಗೌಡರ, ಸದಾನಂದ ಗುಂಟೆಪ್ಪನವರ ಇತರರು ಭಾಗವಹಿಸಿದ್ದರು.

ಅತ್ಯಾಚಾರಿಗಳ ಪತ್ತೆಗೆ ಡಾ. ಬಾಬಾಸಾಹೇಬ ಯುವ ಮಂಚ ಒತ್ತಾಯ

ಬೆಳಗಾವಿ: ವಿಜಯಪುರದಲ್ಲಿ ನಡೆದ ದಲಿತ ವಿದ್ಯಾರ್ಥಿನಿ ಅವಮಾನ ಮತ್ತು ಕಗ್ಗೊಲೆ ಖಂಡಿಸಿ ಡಾ. ಬಾಬಾಸಾಹೇಬ ಯುವ ಮಂಚ ಭಾರಿ ಪ್ರತಿಭಟನೆ ನಡೆಸಿತು. ಶಾಲೆಗೆ ಹೊರಟ ವಿದ್ಯಾರ್ಥಿನಿಯನ್ನು ಕಾಮುಕರು ಹಿಡಿದೆಳೆದೊಯ್ದು ಅತ್ಯಾಚಾರ ಎಸಗಿದ್ದು ಕಾನೂನು ಸುವ್ಯವಸ್ಥೆಗೆ ವ್ಯಂಗ್ಯ ಉಂಟುಮಾಡಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ದಲಿತ ಸಮಾಜದ ರಕ್ಷಣೆಗೆ ಸರಕಾರ ಕಂಕಣಬದ್ಧವಾಗಬೇಕು. ವಿದ್ಯಾರ್ಥಿನಿ ಅತ್ಯಾಚಾರಿಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆ ವಿಸ್ತರಿಸುತ್ತದೆ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿ ಎಚ್ಚರಿಸಿದ್ದಾರೆ.

ಕಲ್ಲಪ್ಪ ರಾಮಚನ್ನವರ, ಗಜಾನನ ದೇವರಮನಿ, ಸಿದ್ರಾಯಿ ಮೇತ್ರಿ, ರವಿ ಬಸ್ತವಾಡಕರ, ಸಂತೋಷ ಕಾಂಬಳೆ, ಶೇಖರ ತಳವಾರ, ಸಂತೋಷ ಹಲಗೇಕರ, ಶಂಕರ ಕಾಂಬಳೆ, ಸಚಿನ್ ರಾಯಗೋಳ, ಸಾಗರ ಚೌಗುಲೆ, ಮನೋಜ ಹಿತ್ತಲಮನಿ, ದಯಾನಂದ ಕಾವಲದಾರ, ಪ್ರವೀಣ ಘರಾಣಿ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.