ಉತ್ತಮ ಸಮಾಜಕ್ಕಾಗಿ

ನಾಟಕದ ಮುಖಾಂತರ ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದ ರೈತರು

0

ಬೆಳಗಾವಿ: ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿ ಬಾರದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆಯುತ್ರಿರುವ ರೈತರ ಧರಣಯಲ್ಲಿ ಇಂದು ವಿಶಿಷ್ಟವಾಗಿ ಪ್ರತಿಭಟನೆ ನಡೆಸಿ ನಾಟಕದ ಮುಖಾಂತರ ಸಚಿವ ರಮೇಶ ಜಾರಕಿಹೊಳಿಗೆ ಡೈಲಾಗ್ ಗಳ ಮೂಲಕ ಟಾಂಗ್ ನೀಡಿದರು. ರಾಜಕುಮಾರ ಅಭಿನಯದ ಬಬ್ರುವಾಹನ ಚಿತ್ರದ ಸಂಭಾಷಣೆಯ ಭಾಗಗಳನ್ನು ಆರಿಸಿಕೊಂಡ ರೈತರು ಅದರೊಳಗೆ ಸಚಿವ ಜಾರಕಿಹೊಳಿ ಅವರನ್ನು ಖಲನಾಯಕನ ರೀತಿ ಬಿಂಬಿಸಿದರು. ನಂತರ ರಾಮಾಯಣದ ಕೆಲ ದೃಶ್ಯಗಳನ್ನು ಅನುಕರಿಸಿದ ಅವರು ಸಚಿವರನ್ನು ರಾವಣನಂತೆ ತೋರಿಸಿ ಕಬ್ಬಿನ ಬಾಕಿ ಬಿಲ್ ಅನ್ನು ಶೀಘ್ರ ಬಿಡುಗಡೆಗೊಳಿಸಲು ಆಗ್ರಹಿಸಿದರು. ಇ ರೀತಿಯ ಮನೋರಂಜನಾತ್ಮಕ ಪ್ರತಿಭಟನೆ ನೆರೆದವರಲ್ಲಿ ನಗೆಯ ಅಲೆ ಎಬ್ಬಿಸಿತು.

Leave A Reply

 Click this button or press Ctrl+G to toggle between Kannada and English

Your email address will not be published.