ಉತ್ತಮ ಸಮಾಜಕ್ಕಾಗಿ

ಬರಮುಕ್ತ, ಹಸಿವುಮುಕ್ತ ಕರ್ನಾಟಕ ನಮ್ಮ ಗುರಿ : ಮುಖ್ಯಮಂತ್ರಿ ಸಿದ್ದರಾಮಯ್ಯ

0

ಬೆಳಗಾವಿ: ಬರಮುಕ್ತ, ಋಣಮುಕ್ತ, ಅಪೌಷ್ಟಿಕತೆ ಮುಕ್ತ, ಹಸಿವು ಮುಕ್ತ ಕರ್ನಾಕಟಕ ನಿರ್ಮಾಣ ಸರಕಾದ ಗುರಿಯಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಗೋಕಾಕ ಮತಕ್ಷೇತ್ರದಲ್ಲಿ ವಿವಿಧ ಇಲಾಖೆಗಳ ಒಟ್ಟು 110 ಕೋಟಿ ರೂಪಾಯಿಯ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆವೇರಿಸಿದ ಬಳಿಕ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
ಕೈಗಾರಿಕೆ ರಾಜ್ಯ ನಂ.1:
ದೇಶದಲ್ಲಿಯೇ ಕೈಗಾರಿಕಾ ಸ್ನೇಹಿ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.
2013-14ರಲ್ಲಿ 11ನೇ ಸ್ಥಾನದಲ್ಲಿ ಇದ್ದ ರಾಜ್ಯ ಇದೀಗ ನಂ. ಸ್ಥಾನಕ್ಕೇರಿದೆ.
ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಒಟ್ಟಾರೆ ಶೇ. 19 ರಷ್ಟು ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ.
ನೆರೆಯ ಗುಜರಾತ್ ರಾಜ್ಯದಲ್ಲಿ ವಿದೇಶಿ ನೇರ ಬಂಡವಾಳ ಪ್ರಮಾಣ ಕೇವಲ ಶೇ. 1.65 ಆಗಿರುತ್ತದೆ.
2014-19ರ ಕೈಗಾರಿಕಾ ನೀತಿ ಜಾರಿಗೆ ತಂದಿರುವ ನಮ್ಮ ಸರ್ಕಾರ ಕಳೆದ ಐದು ವರ್ಷಗಳಲ್ಲಿ 15 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿತ್ತು.
ಇದುವರೆಗೆ 14 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

ಗುತ್ತಿಗೆಯಲ್ಲಿ ಮೀಸಲಾತಿ:
ಪರಿಶಿಷ್ಟ ಜಾತಿ, ಜನಾಂಗಗಳ ಜನರಿಗೆ ಸಿವಿಲ್ ಕಾಮಗಾರಿಗಳಲ್ಲಿ ಮೀಸಲಾತಿ ಒದಗಿಸಿದ ಮೊದಲ ರಾಜ್ಯ ಕರ್ನಾಟಕ.
ಕುರುಬರ ಹಟ್ಟಿ, ನಾಯಕರ ಹಟ್ಟಿ, ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ನೀರಾವರಿ, ಸಾಲಮುಕ್ತ ಯೋಜನೆಗಳ ಶೇ. 60 ಫಲಾನುಭವಿಗಳು ಉತ್ತರ ಕರ್ನಾಟಕದ ವರು ಎಂದರು.
ಸಹಕಾರ ಸಚಿವರಾದ ರಮೇಶ ಜಾರಕಿಹೊಳಿ ಮತ್ತಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.