ಉತ್ತಮ ಸಮಾಜಕ್ಕಾಗಿ

ಹಂತಕರನ್ನು ಪತ್ತೆ ಹಚ್ಚಲು ಶ್ರೀರಾಮ ಸೇನೆ ಗುಡುಗು

0

ಬೆಳಗಾವಿ: ವಿಜಯಪುರದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಹಾಗೂ ರೈತರಿಗೆ ಬಾಕಿ ಬಿಲ್ ಕೊಡದ ಸಕ್ಕರೆ ಕಾರ್ಖಾನೆಗಳ ಧೋರಣೆಗೆ ಅಸಮಧಾನ ವ್ಯಕ್ತಪಡಿಸಿ ಶ್ರೀರಾಮಸೇನೆ ಇಂದು ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಬಾಲಕಿ ಹಂತಕರನ್ನು ಕೂಡಲೇ ಪತ್ತೆ ಹಚ್ಚಬೇಕೆಂದು ಕೋರಿದರು.ರೈತರಿಗೆ ಬೆಂಬಲ: ನಂತರ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ರೈತರ ಸಮಸ್ಯೆಗಳ ಬಗ್ಗೆ ಮರುಕ ವ್ಯಕ್ತಪಡಿಸಿ, ರೈತರ ಬಾಕಿ ಬಿಲ್ ಬಿಡುಗಡೆಯಾಗದಿದ್ದರೆ ರೈತ ಹೋರಾಟದಲ್ಲಿ ಶ್ರೀರಾಮಸೇನೆ ಸಹ ಧುಮುಕುತ್ತದೆ ಎಂದು ಪ್ರತಿಭಟನಾ ನಿರತ ರೈತರಿಗೆ ಭರವಸೆ ನೀಡಿದರು.

ಬಾಲಕಿ ಹಂತಕ ಕಾಮುಕರನ್ನು ಗಲ್ಲಿಗೇರಿಸಿಅಂಬೇಡ್ಕರ್ ಕ್ರಾಂತಿ

ಬೆಳಗಾವಿ: ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವಿಜಯಪುರ ಬಾಲಕಿಯ ಹಂತಕರ ಪತ್ತೆ ಹಚ್ಚಿ ಶಿಕ್ಷಿಸಲು ಅಂಬೇಡ್ಕರ್ ಕ್ರಾಂತಿ ಯುವ ವೇದಿಕೆ ಅಧ್ಯಕ್ಷ ಎಸ್. ಜಿ. ಮಹೇಶ ನೇತೃತ್ವದಲ್ಲಿ ಆಗ್ರಹಿಸಿದೆ. ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ದಲಿತ ಅಪ್ರಾಪ್ತ ಬಾಲಕಿಯನ್ನು ಅಮಾನುಷ ಅತ್ಯಾಚಾರಗೈದು ಕೊಲೆಗೈದವರನ್ನು ಪತ್ತೆಹಚ್ಚಿ ಗಲ್ಲುಗೇರಿಸಬೇಕೆಂದು ಒತ್ತಾಯಿಸಿದರು. ದೇಶದಲ್ಲಿ ಪ್ರತಿ 15 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿರುವ ವರದಿ ಇದ್ದಾಗ ಮಹಿಳೆಯರಿಗೆ ಎಲ್ಲಿಯ ರಕ್ಷಣೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಕಾರ್ಯಕರ್ತರು ಕಾಮುಕರಿಗೆ ಕಾನೂನಿನ ಭಯವಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.