ಉತ್ತಮ ಸಮಾಜಕ್ಕಾಗಿ

3000 ರೈತರ ಆತ್ಮಹತ್ಯೆ ಮಾಡಿ ಕೊಂಡಿದ್ದೇ ಸಿದ್ಧರಾಮಯ್ಯ ಸರಕಾರದ ಸಾಧನೆ: ಪ್ರಜ್ವಲ್ ರೇವಣ್ಣ

0

ಬೆಳಗಾವಿ: ರಾಜ್ಯ ಸರಕಾರ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಜನರ ದುಡ್ಡಿನಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದು, ಮೂರು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದೇ ಸಿದ್ಧರಾಮಯ್ಯ ಸರಕಾರದ ಮಹಾ ಸಾಧನೆ ಎಂದು ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು. ಇಂದು ನಗರದಲ್ಲಿ ಬೆಳಗಾವಿ ಜೆಡಿಎಸ್ ಯುವ ಘಟಕದ ಸಮಾವೇಶಕ್ಕೆ ಆಗಮಿಸಿದ ಅವರು ಮಾಧ್ಯಮದ ಜೊತೆ ಮಾತನಾಡಿದರು. ಸಿದ್ದರಾಮಯ್ಯ ಸರಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ದುಡ್ಡಿಲ್ಲ ಆದರೆ ಸಮಾವೇಶಗಳ, ಕಾರ್ಯಕ್ರಮಗಳ ಹೆಸರಿನಲ್ಲಿ ಖರ್ಚುಮಾಡಲು ನೂರಾರು ಕೋಟಿ ಹೇಗೆ ಹುಟ್ಟಿ ಕೊಳ್ಳುತ್ತದೆ ಎಂದು ಇದೇ ಸಂಧರ್ಭದಲ್ಲಿ ಅವರು ಪ್ರಶ್ನಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.