ಉತ್ತಮ ಸಮಾಜಕ್ಕಾಗಿ

ನುಡಿದಂತೆ ನಡೆದ ಸರಕಾರ ನಮ್ಮದು : ಮುಖ್ಯಮಂತ್ರಿ ಸಿದ್ದರಾಮಯ್ಯ:

0

ಬೆಳಗಾವಿ: ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಣಾಳಿಕೆಯಲ್ಲಿ ಒಟ್ಟು 165 ಬರವಸೆಯನ್ನು ಕೊಟ್ಟಿದ್ದೇವು ಅದರಲ್ಲಿ 155ನ್ನು ಈಡೇರಿಸುವದರೊಂದಿಗೆ ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ರಾಮದುರ್ಗ ಮತಕ್ಷೇತ್ರದ ವಿವಿಧ ಇಲಾಖೆಗಳ ಒಟ್ಟು 14224.66 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿದ ಬಳಿಕ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.
ರಾಜ್ಯವನ್ನು ಬರಮುಕ್ತವನ್ನಾಗಿಸುವ ಪ್ರಮುಖ ಉದ್ದೇಶದಿಂದದ ಮತ್ತು ರೈತರು ಬೆಳೆದ ಬೆಳೆಗಳಲ್ಲಿ ಅಧಿಕ ಲಾಭ ತರಲು ನೀರು ಪ್ರಮುಖವಾಗಿದ್ದು, 4 ವರ್ಷಗಳಲ್ಲಿ ಒಟ್ಟು 1 ಲಕ್ಷ 82 ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ಹೊಂಡಗಳ ನಿರ್ಮಾಣ ಮಾಡಿದ್ದೇವೆ ಎಂದು ತಿಳಿಸಿದರು.
ಒಟ್ಟು 1 ಕೋಟಿ 20 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ನೀಡಿ ರಾಜ್ಯವನ್ನು ಹಸಿವು ಮುಕ್ತವನ್ನಾಗಿಸುತದ್ದೇವೆ. ಮತ್ತು ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟಿನ್ ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು.
ಶಾಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗಬಾರದು ಎಂಬ ಉದ್ದೇಶದಿಂದ 1 ಕೋಟಿ 2 ಲಕ್ಷ ಮಕ್ಕಳಿಗೆ 5 ದಿನಗಳವರೆಗೆ ಹಾಲು ನೀಡುತ್ತಿದ್ದೇವೆ. ಒಂದು ವರ್ಷಕ್ಕೆ 3 ಲಕ್ಷ ಮನೆ ನಿರ್ಮಾಣದ ಗುರಿಹೊಂದಿದ್ದು, ಬರುವ ಮಾರ್ಚರೊಳಗೆ ರಾಜ್ಯದಲ್ಲಿ ಒಟ್ಟು 15 ಲಕ್ಷ ಮನೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ಹಾಲು ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರತಿ ಲೀಟರಗೆ 5 ರೂ. ಪ್ರೊತ್ಸಾಹ ಧನ ನೀಡುತ್ತಿದ್ದೇವೆ. ರಾಜ್ಯದಲ್ಲಿ ಆನ್ ಲೈನ್ ಮಾರುಕಟ್ಟೆಯಿಂದ ಶೇ. 33 ರಷ್ಟು ಲಾಭವಾಗಿದೆ ಎಂದರು.
ನಮ್ಮ ಸರಕಾರ ಆಡಳಿತಕ್ಕೆ ಬಂದ ನಂತರ ಇಲ್ಲಿಯ ವರೆಗೆ ನೀರಾವರಿ ಯೋಜನೆಗೆ 45 ಸಾವಿರ ಕೋಟಿ ಖರ್ಚು ಮಾಡಿದ್ದು, ಮಾರ್ಚ ಅಂತಯಕ್ಕೆ 50 ಸಾವಿರ ಕೋಟಿ ಖರ್ಚು ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾಗಿಟಿದ್ದ ಎಸ್‍ಸಿಪಿ ಟಿಎಸ್‍ಪಿ ಪಂಡಿನಲ್ಲಿ 86 ಸಾವಿರ ಕೋಟಿ ಖರ್ಚು ಮಾಡಲಾಗಿದೆ. 53 ಸಾವಿರ ಕೋಟಿ ನೇಕಾರರ ಸಾಲ ಮನ್ನಾ ಮಾಡಿದ್ದೇವೆ. 10 ಲಕ್ಷ ಗರ್ಭಿಣಿ ಸ್ತ್ರೀಯರಿಗೆ ಮದ್ಯಾಹ್ನದ ಊಟ ನೀಡುವುದರೊಂದಿಗೆ ಸಮಾಜ ಎಲ್ಲ ವರ್ಗಗಳನ್ನು ಅಭಿವೃದ್ಧಿಯತ್ತ ಸಾಗಿಸುತ್ತದೇವೆ ಎಂದು ಹೇಳಿದರು.
ಜಲಸಂಪನ್ಮೂಲ ಸಚಿವರಾದ ಎಂ.ಬಿ ಪಾಟೀಲ ಅವರು ಮಾತನಾಡಿ, ಕೃಷಿ ಹೊಂಡಕ್ಕೆ ಒಟ್ಟು 1 ಕೋಟಿ 80 ಲಕ್ಷ ನೀಡಲಾಗಿತ್ತು. ಅದರಲ್ಲಿ 1.20 ಕೋಟಿ ಉತ್ತರ ಕರ್ನಾಟಕ್ಕೆ ಬಂದಿದೆ ಇದರಿಂದ ಉತ್ತರ ಕರ್ನಾಟಕ್ಕೆ ರಾಜ್ಯ ಸರ್ಕಾರ ಯಾವುದೇ ಅನ್ಯಾಯ ಮಾಡಿಲ್ಲ ಎಂದು ಹೇಳಿದರು.
ಸ್ಥಳೀಯ ಶಾಸಕರಾದ ಮಹಾದೇವಪ್ಪ ಪಟ್ಟಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.