ಉತ್ತಮ ಸಮಾಜಕ್ಕಾಗಿ

ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ

0

ಬೆಳಗಾವಿ – ಹುಕ್ಕೇರಿ ತಾಲೂಕ ನಿಡಸೋಸಿ ಹಾಗೂ ಹೆಬ್ಬಾಳ ಗ್ರಾಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಸೃಜನಶೀಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಮೂಲಕ ಬೀದಿ ನಾಟಕ ಪ್ರದರ್ಶನ, ಶೌಚಾಲಯ ಪರಿಕರಗಳನ್ನು ವಿತರಿಸಲಾಯಿತು.
ಅತಿಥಿಗಳು ದೀಪ ಬೆಳಗುವುದರೊಮದಿಗೆ ಕಾರ್ಯಕ್ರಮ ಪ್ರಾರಾಂಭವಾಯಿತು. ಪ್ರಾಸ್ತಾವಿಕವಾಗಿ ಜಿಲ್ಲಾ ನಿರ್ದೇಶಕರಾದ ಶಿವಪ್ಪ ಎಂ. ಅವರು ಯೋಜನೆಗಳ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ತಿಳಿಸಿದರು. ಸಂಪನ್ಮೂಲ ವ್ಯಕ್ತಿ ಸ್ವಚ್ಛ ಭಾರತ ಮಿಶನ್ ಸಮನ್ಮಯ ಅಧಿಕಾರಿಗಳಾದ ಜಿ. ಎ. ಕರಡಿಗುದ್ದಿ ಶೌಚಾಯಲಯ ಮಹತ್ವಗಳ ಕುರಿತು ತಿಳಿಸಿದರು.
ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ , ಗ್ರಾಮಪಂಚಾಯಿತಿ ಪಿಡಿಓ ಎಚ್. ಎಂ. ಕೋಳಿ, ಯೋಜನಾಧಿಕಾರಿ ಮಂಜುನಾಥ ಎನ್. ಆರ್., ಜಿ. ಎ.ಕರಡಿಗುದ್ದಿ, ಸ್ಚಚ್ಛ ಭಾರತ ಮಿಷನ್ನಿನ ಬುರನ್ ಪರವೀಜ್ ಮುಜಾವರ ಹಾಗೂ ಸುಮಂಗಲಾ ದೊಡಮನಿ ಮುಂತಾದವರು ಉಪಸ್ಥಿತರಿದ್ದರು.
ಅಂಜನಾ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಸ್ವಾಗತಿಸಿದರು. ನೂರಜಾನ ಮಕಾಂದರ ವಂದಿಸಿದರ. ನಿಡಸೋಸಿ ಗ್ರಾಮದ ಗ್ರಾಮಸ್ಥರು ಕಲಾಭಿಮಾಗಳು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.