ಉತ್ತಮ ಸಮಾಜಕ್ಕಾಗಿ

ತಾಯಿ-ಹೆಂಡತಿ ರಕ್ಷಕಿಯಾಗಬೇಕು: ರವಿ ಭಜಂತ್ರಿ

0

ಬೆಳಗಾವಿ:ಮದುವೆ ಮಾಡುವ ಮೊದಲು ಹೆಣ್ಣು-ಗಂಡಿನ ಜಾತಕ ನೋಡುವ ಬದಲಾಗಿ,ಹುಡುಗಿಯ ಅತ್ತೆಯಾದವಳ ಜಾತಕ ನೋಡಬೇಕು. ಹೊಂದಾಣೆಕೆಯಾಲ್ಲಿ ಮಾತ್ರ ಗಂಡು ಮದುವೆಯಾಗಬೇಕು ಹೊಂದಾಣಿಕೆಯಾಗದಿದ್ದಲ್ಲಿ ಮದುವೇನೇ ಆಗಬಾರದು ಎಂದು ರವಿ ಭಜಂತ್ರಿ ಹೇಳಿದರು.
ಶಿವಬಸವನಗರದ ಸಭಾಭವನದಲ್ಲಿ ಶನಿವಾರ 23 ರಂದು ಲಿಂಗಾಯತ ಮಹಿಳಾ ಸಮಾಜ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಮಾತನಾಡಿದ ಅವರು.
ತಾಯಿ ಶಿಕ್ಷಕಿಯಾದರೆ,ಹೆಂಡತಿ ರಕ್ಷಕಿಯಾದಾಗ ಗಂಡಸ ರಕ್ಷತೆಯಿಂದ ದಕ್ಷನಾಗಿ ಮನೆತನ ನಡೆಸುತ್ತಾನೆ.ಆದರೆ ಅವರಿಬ್ಬರೂ ರಾಕ್ಷಸರಾದರೆ ಗಂಡಸು ಭಿಕ್ಷುಕನಾಗಬೇಕಾಗುತ್ತದೆ.ಇಂದಿನ ಯುಗದಲ್ಲಿ ಹೆಚ್ಚುತ್ತಿರುವ ಇಂಗ್ಲೀಷ್ ಭಾಷಾ ವ್ಯಾಮೋಹದ ಬಗ್ಗೆ ಮಾತನಾಡುತ್ತ.ಅರಿಯದ ಭಾಷೆಯಲ್ಲಿ ಆಡುವದಕ್ಕಿಂತ ಕನ್ನಡ ಅಮ್ಮನ ಭಾಷೆಯಲ್ಲಿ ಅರಳುವುದು ಮುಖ್ಯ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ ಭಾರತಿ ಸಂಕಣ್ಣವರ ಅವರು ಹಾಸ್ಯ ಪ್ರಜ್ಞೆ ಆರೋಗ್ಯಕ್ಕೆ ಸಹಕಾರಿ ಮನುಷ್ಯ ಆಳವಾದ ನೋವು ದಣಿವನ್ನು ಮರೆಸುವ ಶಕ್ತಿಯಾಗಿರುವದು ಹಾಸ್ಯಕ್ಕಡ ಮಾತ್ರ ಮನುಷ್ಯನನ್ನು ಶಾರೀರಿಕ ಮಾನಸಿಕವಾಗಿ ಆರೋಗ್ಯವಂತ ನಾಗಿಡುವಲ್ಲಿ ಸಹಕಾರಿ ಎಂದು ಅಭಿಪ್ರಾಯ ಪಟ್ಟರು.
ಈ ಕಾರ್ಯಕ್ರಮದಲ್ಲಿ ರಾಜೇಶ್ವರಿ ಹಿರೇಮಠ ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಭಾರತಿ ಸಂಕಣ್ಣವರ ಸ್ವಾಗತಿಸಿದರು. ರಾಜೇಶ್ವರಿ ಹಿರೇಮಠ ಅತಿಥಿ ಪರಿಚಯಿಸಿದರು. ಶೈಲಾ ಸಂಸುದ್ದಿ ಪಾರ್ಥಿಸಿದರು. ವಚನ ಗಾಯನ ವಿಜಯಲಕ್ಷ್ಮೀ ಹೊಸಮನಿ ನೆರೆವೆರಿಸಿದರು. ವಿಜಯಲಕ್ಷ್ಮೀ ಪಾಟೀಲ,ಶೈಲಜಾ ಬಿಂಗೆ,ನೈಯನಾ ಗಿರಿಗೌಡರ,ಜ್ಯೋತಿ ಬದಾಮಿ,ವಿದ್ಯಾ ಹುಂಡೆಕರ,ಆಶಾ ಪಾಟೀಲ, ಶಕುಂತಲಾ ಮುಲಿಮನಿ, ಪ್ರಭಾ ಪಾಟೀಲ ನಿರೂಪಿಸಿದರು. ಶ್ವೇತಾ ಪಾಟೀಲ ವಂದಿಸಿದರು .

Leave A Reply

 Click this button or press Ctrl+G to toggle between Kannada and English

Your email address will not be published.