ಉತ್ತಮ ಸಮಾಜಕ್ಕಾಗಿ

ಮಣ್ಣು, ನೀರು, ಗಾಳಿ ಹಾಗೂ ಪರಿಸರದಲ್ಲಿ ವಿಷಕಾರಿ ಅಂಶಗಳು ಕೂಡಿಕೊಂಡು ತೀವ್ರ ಪರಿಣಾಮ ಎಂ ಎ ಶೇಖರ

0

ಬೆಳಗಾವಿ:ನಗರೀಕರಣದಿಂದ ಅನೇಕ ಸಮಸ್ಯೆಗಳು ಉದ್ಭವವಾಗುತ್ತಿದ್ದು, ರಸಾಯನಿಕಗಳ ಅತೀಯಾದ ಬಳಕೆಯಿಂದ ಮಣ್ಣು, ನೀರು, ಗಾಳಿ ಹಾಗೂ ಪರಿಸರದಲ್ಲಿ ವಿಷಕಾರಿ ಅಂಶಗಳು ಕೂಡಿಕೊಂಡು ಗರ್ಭಿಣಿ ಮಹಿಳೆ ಹಾಗೂ ವಯಸ್ಕರ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿ, ಬೊಜ್ಜು ಹಾಗೂ ಮಧುಮೇಹದಂತಹ ಕಾಯಿಲೆಗಳಿಗೆ ಒಳಪಡಬೇಕಾಗುತ್ತದೆ ಎಂದು ಬೆಂಗಳೂರಿನ ಕರ್ನಾಟಕ ಎಂಡೋಕ್ರಿನಾಲಾಜಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಎಂ ಎ ಶೇಖರ ಅವರಿಂದಿಲ್ಲಿ ಹೇಳಿದರು.
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೆಎಲ್‍ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ, ರಾಷ್ಟ್ರೀಯ ಮಧುಮೇಹ ಪ್ರತಿಷ್ಠಾನ, ಎಂಸಿಐ ಮತ್ತು ಐಸಿಎಂಆರ್ ಇವರ ಸಂಯುಕ್ತಾಶ್ರಯದಲ್ಲಿ ದಿ. 23 ಡಿಸೆಂಬರ 2017 ರಂದು ಏರ್ಪಡಿಸಲಾಗಿದ್ದ ‘ಮಧುಮೇಹ ವಿಜ್ಞಾನದಲ್ಲಿ ಹೊಸ ಆವಿಷ್ಕಾರಗಳು’ ಎಂಬ ವಿಷಯದ ಕುರಿತು ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗರ್ಭವತಿ ಮಹಿಳೆಯು ಬೊಜ್ಜು ಹಾಗೂ ಅಪೌಷ್ಟಿಕಾಂಶದಿಂದ ಬಳಲುತ್ತಿದ್ದರೆ, ಅವಳಲ್ಲಿ ದೈಹಿಕ ಮತ್ತು ಮಾನಸಿಕ ತೊಂದರೆಯುಂಟಾಗಿ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ದುಷ್ಪರಿಣಾಮ ಬೀರಿ ಮಧುಮೇಹ ಮತ್ತು ಬೇರೆ ಕಾಯಿಲೆಗಳಿಂದ ಬಳಲಬಹುದು. ಅಪೌಷ್ಟಿಕಾಂಶತೆಯಿಂದ ಹುಟ್ಟುವ ಮಕ್ಕಳ ತೂಕವೂ ಕೂಡ ಕಡಿಮೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಪರಿಸರದೊಂದಿಗೆ ಆರೋಗ್ಯವಾಗಿರುವ ಜನರು ಕೇವಲ ಶೇ.18ರಷ್ಟು ಮಾತ್ರ. ಯೋಗ ಸಾಂಪ್ರದಾಯಿಕ ಆಹಾರ ಪದ್ದತಿ, ಜೀವನ ಶೈಲಿಯಿಂದ ಮಧುಮೇಹದಿಂದ ದೂರವಿರುತ್ತಾರೆ ಎಂದ ಅವರು, ಸಂಶೋಧನೆಗೆ ಅತೀ ಹೆಚ್ಚು ಹಣ ವ್ಯಯಿಸುತ್ತಿದ್ದರೂ, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ ಮತ್ತು ಹೃದರೋಗದಂತ ಗಂಭೀರ ಖಾಯಿಲೆಗಳಿಗೆ ನಿಖರವಾದ ಔಷಧಿ ನೀಡಿ ಅದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮದ್ರಾಸನ ಮಧುಮೇಹ ಸಂಶೋಧನಾ ಪ್ರತಿಷ್ಠಾನದ ಹಿರಿಯ ವಿಜ್ಞಾನಿ ಡಾ. ಎಂ ಬಾಲಸುಬ್ರಮನ್ಯಮ್ ಅವರು ದತ್ತಿ ಉಪನ್ಯಾಸ ನೀಡಿ, ಆಧುನಿಕ ಯುಗದಲ್ಲಿ ನಗರೀಕರ ಮತ್ತು ಆಹಾರ ಶೈಲಿಯಲ್ಲುಂಟಾದ ಬದಲಾವಣೆಯಿಂದ ಬಂದೆರುಗುವ ರೋಗಗಳಿಗೂ ಸಂಪೂರ್ಣ ಗುಣಪಡಿಸುವ ಕ್ರಮವನ್ನು ವೈದ್ಯವಿಜ್ಞಾನ ಕಂಡುಹಿಡಿಯಬೇಕಾಗಿದೆ. ಒಂದು ದಶಕದ ಕಾಲ ಗುಪ್ತವಾಗಿರುವ ಮಧುಮೇಹದಿಂದ ಹೃದಯಾಘಾತ, ಕಿಡ್ನಿ ತೊಂದರೆ, ಕಣ್ಣಿನ ತೊಂದರೆ ಸೇರಿದಂತೆ ಹಲವಾರು ರೋಗಗಳು ಬಂದೆರಗುತ್ತವೆ ಆದ್ದರಿಂದ ಇದಕ್ಕೆ ಸೂಕ್ತವಾದ ಜಾಗೃತಿ ಮೂಡಿಸುವದರ ಜೊತೆಗೆ ವೈದ್ಯರು ಸರಿಯಾದ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶದಿಂದ ಕೂಡಿದ ಭಾರತೀಯರಲ್ಲಿ ರೋಗಗಳ ಕುರಿತು ಜಾಗೃತಿ ಕಡಿಮೆ. ಶಿಕ್ಷಣದಿಂದ ವಂಚಿತ, ಆರ್ಥಿಕ ದುರ್ಬಲತೆ, ತಿರಸ್ಕಾರ ಮನೋಭಾವ ಅಧಿಕವಾಗಿದೆ. ದೂಮ್ರಪಾನ ಮಾಡುವ ಯುವಕರು ಮಧುಮೇಹದ ಜೊತೆಗೆ ಹೃದ್ರೋಗದಿಂದ ಬಳಲುವ ಸಾಧ್ಯತೆ ತೀವ್ರವಾಗಿದೆ. ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವ ಕುಟುಂಭದ ಮೇಲೆ ತೀವ್ರ ಆರ್ಥಿಕ ಹೊಡೆತ ಉಂಟಾಗುತ್ತಿದೆ. ಮುಖ್ಯವಾಗಿ 44 ವರ್ಷಕ್ಕೆ ಭಾರತೀಯರಲ್ಲಿ ಮಧುಮೇಹ ಕಂಡುಬರುತ್ತಿದೆ ಎಂದು ತಿಳಿಸಿದರು.
ಕೆಎಲ್‍ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯಕಾರ್ಯನರ್ವಹಣಾಧಿಕಾರಿಯಾದ ಡಾ. ಎಂ ವಿ ಜಾಲಿ ಅವರು ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಮಂಜುನಾಥ ಆನಕಲ್ ಅವರು ದಿ ಎಮರ್ಜಿಂಗ ಲಿಂಕ ಬಿಟ್ವೀನ ಡಯಾಬಿಟಿಸ್ ಮತ್ತು ಒಸ್ಟಿಯೊಪೊರೊಸಿಸ್ ಹಾಗೂ ಡಾ ವರುನ ಆಲೂರ ಅವರು ಡಯಾಬಿಟಿಸ್ ಮತ್ತು ವುಮನ ಹೆಲ್ತ ಅಕ್ರಾಸ ದಿ ಲೈಫ್ ಸ್ಟೀಜ್ಸ್ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕೆಎಲ್‍ಇ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿ. ಡಿ. ಪಾಟೀಲ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಹೆಚ್. ಬಿ. ರಾಜಶೇಖರ, ಡಾ. ಆರ್. ಎಸ್. ಮುಧೋಳ ಹಾಗೂ ಡಾ. ರೇಖಾ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ. ನಂದಿತಾ ಪವಾರ ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.