ಉತ್ತಮ ಸಮಾಜಕ್ಕಾಗಿ

ದಕ್ಷಿಣ ಭಾರತ ಮಟ್ಟದ ಪುರೋಹಿತರ ಸಮ್ಮೇಳನ

0

ಬೆಳಗಾವಿ: ಅತಿಶಯ ಕ್ಷೇತ್ರ ಹೊಂಬುಜ ಜೈನ ಮಠ ಮತ್ತು ಶ್ರೀ ದಿ.ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿ.16-17ರಂದು ಕರ್ನಾಟಕ,ಮಹಾರಾಷ್ಟ್ರ,ತಮಿಳನಾಡು,ಕೇರಳ ರಾಜ್ಯಗಳ 4ನೇ ದಕ್ಷಿಣ ಭಾರತ ಮಟ್ಟದ ಪುರೋಹಿತರ ಸಮ್ಮೇಳನ ಬೆಳಗಾವಿಯ ಪ್ರತಿಷ್ಠಾಚಾರ್ಯ ಪಂಡಿತ ಶ್ರೀ ಶಾಂತಿನಾಥ ಪಾಶ್ರ್ವನಾಥ ಉಪಾಧ್ಯೆಇವರ ಸರ್ವಾಧ್ಯಕ್ಷತೆಯಲ್ಲಿ ಅತ್ಯಂತ ವೈಭವ ಮತ್ತು ಅರ್ಥಪೂರ್ಣವಾಗಿ ಜರುಗಿತು.
ಹೊಂಬುಜದಲ್ಲಿ ಜರುಗಿದ ಸಮ್ಮೇಳನದಲ್ಲಿ ಕನಕಗಿರಿಯ ಸ್ವಸ್ತಿಶ್ರೀ ಬುವನ ಕೀರ್ತಿ ಸ್ವಾಮೀಜಿ,ಸೋಂದಾ ಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಸ್ವಾಮೀಜಿ ಮತ್ತು ಹೊಂಬುಜ ಮಠದ ಡಾ||ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಮಹಾಸ್ವಾಮಿಗಳ ನೇತ್ರತ್ವ ಮತ್ತು ಸಾನಿಧ್ಯದಲ್ಲಿ,ಸಕಲೀಕೆಣ ಮತ್ತು ನಿತ್ಯ ಪೂಜಾ ವಿಧಾನ -ಜಿನ ಶಾಸನ ದೇವತಾ ಪೂಜೆಯ ಮಹತ್ತರತೆ-ಆರಾಧನಾ ವಿಧಿ ವಿಧಾನ-ಪಂಚ ಕಲ್ಯಾಣ ವಿಧಾನ-ಜೈನ ವಾಸ್ತು ಜೈನ ಜ್ಯೋತಿಷ್ಯ-ಯಂತ್ರ ಮಂತ್ರ ತಂತ್ರ-ಪುರೋಹಿತರ ಹಿತ ರಕ್ಷಣೆ ಮುಂತಾದ ಮಹತ್ವದ ವಿಷಯಗಳಬಗ್ಗೆ ವಿದ್ವಾಂಸ ಪಂಡಿತರಿಂದ ಗೋಷ್ಠಿ ಜರುಗಿದವು.
ಆರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಶೃಂಗರಿಸಿದ ಆನೆ-ಪೂರ್ಣ ಕುಂಭ-ಕ್ಷೇತ್ರದ ಮಹಿಳೆಯರಾದಿಯಾಗಿ ವಾದ್ಯ ಸಹಿತ ಸಭೆಗೆ ಕರೆ ತರಲಾಯಿತು. ಸರ್ವಾಧ್ಯಕ್ಷರ ಮತ್ತು ಸಮಸ್ತ ಪುರೋಹಿತರಿಗೆ ಮತ್ತು ಸಮಾಜದ ಒಳಿತು ಮತ್ತು ಉನ್ನತಿಗಾಗಿ ವಿಶೇಷ ಪೂಜೆ ಶಾಂತಿಕ ಪಾಠ-ಶ್ರೀ ಪದ್ಮಾವತ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.
ಪುರ-ಗ್ರಾಮ-ನಗರ-ರಾಜ್ಯ-ರಾಷ್ಟ್ರದ ಹಿತವನ್ನು ಸದಾ ಬಯಸುತ್ತ ಧರ್ಮ ಮಾರ್ಗದಲ್ಲಿ ಸಮಾಜವನ್ನು ಮುನ್ನಡೆಸುತ್ತಿರುವ ಪಂಡಿತರ ಹಿತ ರಕ್ಷಣೆಗೆ,ಶಿಕ್ಷಣಕ್ಕೆ,ವೃತ್ತಿಯಲ್ಲಿ ಗೌರವ ನೀಡಲು ಭಟ್ಟಾರಕರುಗಳು ಒತ್ತಾಯಿಸಿದರು.ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅನೇಕ ಕ್ಲಿಷ್ಟ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳನ್ನು ಸ್ವಾಮೀಜಿಯವರು ಮತ್ತು ಸರ್ವಾಧ್ಯಕ್ಷರು ನೀಡಿದರು.ಪ್ರತಿನಿಧಿಗಳಿಗೆ ಶಾಸ್ತ್ರ ನೀಡಲಾಯಿತು.ಹಿರಿಯ ಪುರೋಹಿತರಿಗೆ ಪುರಸ್ಕರಿಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.