ಉತ್ತಮ ಸಮಾಜಕ್ಕಾಗಿ

ಗೇಟ ಬಳಿ ಭೀಕರ ಅಪಘಾತ ಸಿ.ಸಿ.ಟಿ.ವಿಯಲ್ಲಿ ದಾಖಲಾಯ್ತು ದೃಶ್ಯಾವಳಿಗಳು

0

ಬೆಳಗಾವಿ: ಬ್ರೆಕ್ ಫೇಲಗೊಂಡಿದ್ದ ಕ್ಯಾಂಟರ ವಾಹನವೊಂದು ನಿಯಂತ್ರಣ ತಪ್ಪಿ ಟೋಲ ಗೇಟ್ ಗೆ ಡಿಕ್ಕಿ ಹೊಡೆದ ಘಟನೆ ಬೆಳಗಾವಿ ಕೊಲ್ಹಾಪುರ ರಸ್ತೆಯ ಕೋಗನೊಳಿ ಟೋಲ ಗೇಟ ಬಳಿ ನಡೆದಿದೆ. ಅಪಘಾತದ ಭೀಕರತೆಗೆ ಕ್ಯಾಂಟರನ ಮುಂಭಾಗ ವಾಹನದಿಂದ ಬೇರ್ಪಟ್ಟಿದೆ. ಈ ಎಲ್ಲ ದೃಶ್ಯಗಳು ಸಿ.ಸಿ.ಟಿ.ವಿ ಯಲ್ಲಿ ದಾಖಲಾಗಿದೆ. ಟೋಲ್ ಗೇಟನ ಸಿಬ್ಬಂದಿ ಹಾಗೂ ವಾಹನ ಚಾಲಕ ಸ್ವಲ್ಪದರಲ್ಲೆ ಪಾರಾಗಿದ್ದನ್ನು ದೃಶ್ಯಾವಳಿಗಳಲ್ಲಿ ಕಾಣಬಹುದು. ಘಟನೆ ನಡೆದ ತಕ್ಷಣ ಟೋಲ ಸಿಬ್ಬಂದಿ ಹಾಗೂ ಸಾರ್ವಜನಿಕರು ಸೇರಿ ಚಾಲಕನನ್ನು ರಕ್ಷಿಸಿದ್ದು. ಆತನಿಗೆ ಗಂಭಿರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹೆದ್ದಾರಿ ರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: