ಉತ್ತಮ ಸಮಾಜಕ್ಕಾಗಿ

ಜಿತೋ ಸಂಸ್ಥೆಯ ಕಾರ್ಯ ಶ್ಲಾಘನೀಯ – ಶಾಸಕ ಸಂಜಯ ಪಾಟೀಲ

0

ಬೆಳಗಾವಿ: ಜೈನ ಇಂಟರ್‍ನ್ಯಾಷನಲ್ ಟ್ರೆಡ್ ಆರ್ಗೈನೇಷನ ( ಜಿತೋ ) ಸಂಸ್ಥೆಯು ಜೈನ ಸಮಾಜದ ಯುವಕರಿಗೆ ಮತ್ತು ಉದ್ದಿಮೆದಾರರಿಗೆ ಸಹಾಯ ಮಾಡುವ ಮೂಲಕ ಸಮಾಜದ ಏಳ್ಗೆಗಾಗಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಸಂಜಯ ಪಾಟೀಲ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಜಿತೋ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ಮೂರು ದಿನಗಳ ಜೈನ ಉತ್ಸವ-2 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಜೈನ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸಕಾರಾತ್ಮಕವಾಗಿ ನಿಭಾಯಿಸುವ ಕಾರ್ಯ ಮಾಡುತ್ತಿರುವ ಜಿತೋ ಸಂಸ್ಥೆ ಇಂದಿನ ಯುವಕರಿಗೆ ಮಾರ್ಗದರ್ಶಕವಾಗಿದೆ ಎಂದು ಹೇಳಿದ ಅವರು, ಭಾರತದ ವಿವಿಧ ನಗರಗಳಲ್ಲಿ ತನ್ನ ಶಾಖೆಗಳನ್ನು ಹೊಂದುವ ಮೂಲಕ ಎಲ್ಲ ಭಾಗದಲ್ಲಿನ ಜೈನ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿರುವ ಈ ಸಂಸ್ಥೆಗೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ತಾವು ಸದಾ ಸಿದ್ದ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಬೆಂಗಳೂರು, ಚೆನೈ, ಕಲ್ಕತ್ತಾ. ಮುಂಬೈ ನಗರಗಳಲ್ಲಿ ಮಾತ್ರ ಕೈಗಾರಿಕೋದ್ಯಮ ಬೆಳೆಯುತ್ತಿದೆ. ಬೆಳಗಾವಿಯಲ್ಲಿ ಕೈಗಾರಿಕೋದ್ಯಮ ಪ್ರಾರಂಭಿಸಲು ಸಾಕಷ್ಟು ಅವಕಾಶಗಳಿದ್ದು, ಇಲ್ಲಿ ಎಲ್ಲ ಮೂಲಭೂತ ಸೌಕರ್ಯಗಳಿವೆ. ಇದನ್ನು ಸದುಪಯೋಗ ಪಡಿಸಿಕೊಂಡು ಬೆಳಗಾವಿಯಲ್ಲಿ ಬಂಡವಾಳ ಹೂಡಿ ಉದ್ಯೋಗಗಳನ್ನು ಪ್ರಾರಂಭಿಸಿ ಜೈನ ಸಮಾಜದ ಜೊತೆಗೆ ಇನುಳಿದ ಸಮಾಜ ಯುವಕರಿಗೆ ಉದ್ಯೋಗ ನೀಡಬೇಕೆಂದು ಹೇಳಿದ ಅವರು ಇದಕ್ಕೆ ಅಗತ್ಯವಿರುವ ಎಲ್ಲ ಸಹಾಯ ಸಹಾಕಾರ ನೀಡಲು ತಾವು ಸದಾ ಸಿದ್ದ ಎಂದು ಅವರು ಹೇಳಿದರು .
ಸಮಾರಂಭದ ಅತಿಥಿ ಜಿತೋ ಅಫೆಕ್ಸ ಉಪಾಧ್ಯಕ್ಷ ಪ್ರಕಾಶ ಸಿಂಘವಿ ಅವರು ಮಾತನಾಡಿ, ಜಿತೋ ಸಂಸ್ಥೆ ದೇಶದಲ್ಲಿ 65 ಶಾಖೆಗಳನ್ನು ಹೊಂದಿದ್ದು, 15 ವಿವಿಧ ದೇಶಗಳಲ್ಲಿ ತನ್ನ ಶಾಖೆಯನ್ನು ಹೊಂದುವ ಮೂಲಕ ತನ್ನ ವಿಸ್ತಾರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.ಮುಂಬರುವ ದಿನಗಳಲ್ಲಿ ಜೈನ ಸಮಾಜದ ಯುವಕರಿಗೆ ಉದ್ಯೋಗಗಳನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ತರಲಾಗುವುದು ಎಂದು ಅವರು ತಿಳಿಸಿದರು.
ಇನ್ನೋರ್ವ ಅತಿಥಿ ಜಿತೋ ಅಪೆಕ್ಸ ಚೇರಮನ್ ರಾಜೇಂದ್ರ ಗಾಂಧಿ ಅವರು ಮಾತನಾಡಿ, ಬೆಳಗಾವಿ ವಿಭಾಗ ಅತ್ಯಂತ ಪ್ರೇರಣೆ ನೀಡುವ ವಿಭಾಗವಾಗಿದೆ. ಈ ಮೂಲಕ ಸಮಾಜದಲ್ಲಿನ ಯುವಕರನ್ನು ಮತ್ತು ಉದ್ದಿಮೆದಾರರನ್ನು ಒಗ್ಗೂಡಿಸಿ ಸಮಾಜವನ್ನು ಮುನ್ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸಂತೋಷ ಪೋರವಾಲ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಉಪ ಸಂಯೋಜಕ ಅಮಿತ ದೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸತೀಶ ಮೆಹತಾ ಬೆಳಗಾವಿ ವಿಭಾಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆ ಮೇಲೆ ಜೀತೊ ಅಪೆಕ್ಸ್ ವಿಭಾಗದ ಪದಾಧಿಕಾರಿಗಳಾದ ಅಶೋಕ ಶಹಾ, ಗೌತಮಜಿ ಓಸ್ವಾಲ, ಅಶೋಕ ಸಲೆಚಾ, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಚೇತನ ಶಹಾ ವಂದಿಸಿದರು. ಉಷಾ ಮೆಲವಾನಿ ಕಾರ್ಯಕ್ರಮ ನಿರೂಪಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.