ಉತ್ತಮ ಸಮಾಜಕ್ಕಾಗಿ

ಅಟಲ್ ಬಿಹಾರಿ ವಾಜಪೇಯಿ ಅಪ್ರತಿಮ ಶಾಂತಿದೂತ: ಅನಿಲ ಬೆನಕೆ

0

ಬೆಳಗಾವಿ: ದೇಶ ಕಂಡ ಅಪ್ರತಿಮ ರಾಜಕಾರಣಿ, ಅಜಾತಶತ್ರು ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 93ನೇ ಜನ್ಮದಿನವನ್ನು ನಗರದಲ್ಲಿ ಆಚರಿಸಲಾಯಿತು.
ನಗರದ ಚವಾಟಗಲ್ಲಿ ನಲ್ಲಿ ಬಿಜೆಪಿ ಮುಖಂಡ ಅನಿಲ ಬೆನಕೆ ಹಾಗೂ ಕಾರ್ಯಕರ್ತರು ವಾಜಪೇಯಿ ಅವರಿಗೆ ಅಭಿನಂದನಾ ಶುಭಾಶಯ ಬರೆದು ಸಿಹಿ ಹಂಚಿ ಸಂಭ್ರಮಿಸಿದರು. ಅನಿಲ ಬೆನಕೆ ಮಾತನಾಡಿ ವಾಜಪೇಯಿ ಅವರು ಒಬ್ಬ ದಕ್ಷ ಆಡಳಿತಗಾರನಾಗಿ, ಆದರ್ಶ ರಾಜಕಾರಣಿಯಾಗಿ, ಕವಿ ಮತ್ತು ವಾಗ್ಮಿಯಾಗಿ ಆದರ್ಶಪ್ರಾಯರಾಗಿದ್ದಾರೆ. ವಿದೇಶಗಳೊಂದಿಗೆ ಸೌಹಾರ್ಧ ಸಂಬಂಧ ಬೆಸೆಯುವ ಮೂಲಕ ಶಾಂತಿದೂತರಾಗಿರುವ ಅವರು ಅಧಿಕಾರದ ಹಿಂದೆ ಬೀಳಲಿಲ್ಲ. ಸಕ್ರೀಯ ರಾಜಕಾರಣದಾಚೆ ಇದ್ದರೂ ನಮ್ಮೆಲ್ಲರ ಮಧ್ಯೆ ಪ್ರೀತಿಪಾತ್ರರಾಗಿದ್ದಾರೆ ಎಂದು ಬಣ್ಣಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.