ಉತ್ತಮ ಸಮಾಜಕ್ಕಾಗಿ

ಸಾಧನೆ: ಸಿಇಓ ರಾಮಚಂದ್ರನ್ ಅವರಿಂದ ಸತ್ಕಾರ

0

ಬೆಳಗಾವಿ: ಸ್ವಿಮ್ಮಿಂಗನಲ್ಲಿ ಭಾರತವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಇಬ್ಬರು ಈಜುಗಾರರನ್ನು ಜಿಲ್ಲಾ ಪಂಚಾಯಿತಿ ಸಿಇಓ ಡಾ. ಆರ್. ರಾಮಚಂದ್ರನ್ ಇಂದು ಸಂಜೆ ಸತ್ಕರಿಸಿದರು.ಏಷಿಯನ್ ಯೂಥ್ ಪ್ಯಾರಾ ಓಲಿಂಪಿಕ್ಸ್ ದುಬೈನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ನಗರದ ಮಜಗಾವಿಯ ಶ್ರೀಧರ ಮಾಳಗಿ(೧೯) ಮತ್ತು ಕೆನಡಾದಲ್ಲಿ ನಡೆದ World Dwarf Games ನಲ್ಲಿ ಭೋಜಗಲ್ಲಿ ಶಹಾಪುರದ ಸಿಮ್ರನ್ ಗೌಂಡಳಕರ (೧೬) ಸಾಧನೆ ಮಾಡಿದ್ದಾರೆ. ೧೦೦ಮೀಟರ್ ಬ್ರೀಸ್ಟ್ ಸ್ಟ್ರೋಕ್ ಮತ್ತು ೨೦೦ ಮೀಟರ್ ವೈಯಕ್ತಿಕ ಕ್ಯಾಟಗೆರಿಯ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಬ್ರಾಂಜ್ ಪಡೆದಿದ್ದಾರೆ. ೫೦೦ ಮೀಟರ್ ಬ್ಯಾಕ್ ಸ್ಟ್ರೋಕ್ ನಲ್ಲಿ ಚಿನ್ನ, ೫೦ ಮೀಟರ್ ಬಟರ ಫ್ಲೈ ಮತ್ತು ಫ್ರೀ ಸ್ಟೇಜ್ ನಲ್ಲಿ ಬೆಳ್ಳಿ ಪದಕ ಸಿಮ್ರನ್ ಪಡೆದಿದ್ದಾರೆ.

ಸ್ಪರ್ಧಿಗಳ ಸಾಧನೆ ಪರಿಗಣಿಸಿ ಜಿ.ಪಂ. ವತಿಯಿಂದ ಸಿಇಓ ರಾಮಚಂದ್ರನ್ ಅಭಿನಂದಿಸಿ ಶಾಲು ಹೊದಿಸಿ, ಖಾದಿ ಕೈವಸ್ತ್ರ ನೀಡಿ ಸನ್ಮಾನಿಸಿದರು. ತರಬೇತಿದಾರ ಉಮೇಶ ಕಲಘಟಗಿ, ವಿವೇಕ ಗೌಂಡಳಕರ ಉಪಸ್ಥಿತರಿದ್ದರು. ಕಳೆದ ಡಿ. 8ರಿಂದ 14ರವರೆಗೆ ಸ್ಪರ್ಧೆ ನಡೆದಿತ್ತು.

Leave A Reply

 Click this button or press Ctrl+G to toggle between Kannada and English

Your email address will not be published.