ಉತ್ತಮ ಸಮಾಜಕ್ಕಾಗಿ

ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ – ಸುರೇಶ ಮುತ್ತಾ

0

ಬೆಳಗಾವಿ: ಇಂದಿನ ಯುವ ಜನಾಂಗ ಸ್ಮಾರ್ಟ ಕೆಲಸ ಮಾಡುವ ಮೂಲಕ ಯಶಸ್ಸು ಕಾಣಬಹುದು ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಜೀವನದಲ್ಲಿ ಕಠಿಣ ಪರಿಶ್ರಮ ವಹಿಸಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಎಂ.ಎಂ..ಎಕ್ಸ್ಪೋಟ್ರ್ಸ ಸಂಸ್ಥೆಯ ನಿರ್ದೇಶಕ ಸುರೇಶ ಮುತ್ತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿಯ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ಜಿತೋ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ಮೂರು ದಿನಗಳ ಜೈನ ಉತ್ಸವ-2 ಸಮಾರಂಭದಲ್ಲಿ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಕೇವಲ ಸ್ಮಾರ್ಟ ಕೆಲಸ ಎಂದು ಮೈಗಳ್ಳತನ ರೂಢಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಎಲ್ಲಿಯವರೆಗೆ ಕಠಿಣ ಪರಿಶ್ರಮ ವಹಿಸುವುದಿಲ್ಲವೋ ಅಲ್ಲಿಯವರೆಗೆ ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ನಿರಂತರ ಅಧ್ಯಯನ, ಕಠಿಣ ಪರಿಶ್ರಮ, ಕಾಲಕ್ಕೆ ತಕ್ಕಂತೆ ಬದಲಾವಣೆ , ತಮ್ಮ ಸ್ವಂತ ನಡುವಳಿಕೆಯಲ್ಲಿ ಬದಲಾವಣೆಗಳು ಸಹ ಯಶಸ್ಸಿಗೆ ಕಾರಣವಾಗುತ್ತವೆ. ಹಾಗಾಗಿ ಇಂದಿನ ಯುವ ಜನಾಂಗ ಕಠಿಣ ಪರಿಶ್ರಮ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಸಮಾರಂಭದ ಇನ್ನೋರ್ವ ಅತಿಥಿ ಅಶೋಕ ಬಿಲ್ಡಕಾನ ಸಂಸ್ಥೆಯ ನಿರ್ದೇಶಕ ಅಶೋಕ ಕಟಾರಿಯಾ ಅವರು ಮಾತನಾಡಿ, ಮನುಷ್ಯನಿಗೆ ಜೀವನದಲ್ಲಿ ಯಶಸ್ಸು ಬೇಕಾದರೆ ಒಂದು ನಿರ್ಧಿಷ್ಟ ಗುರಿ ಹೊಂದಿರಬೇಕು. ಮತ್ತು ಗುರಿ ತಲುಪುವ ಗಟ್ಟಿ ಮನಸ್ಸು , ಮಾನಸಿಕ ಧೃಡತೆ, ಶಾರೀರಕವಾಗಿ ಸದೃಡವಾಗಿರಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ನಿರಂತರ ಅಧ್ಯಯನ ಸಂದರ್ಭದಲ್ಲಿ ಕೆಲ ಕಾಲ ಹಿನ್ನಡೆ ಉಂಟಾಗಬಹುದು. ಉದ್ದಿಮೆಯಲ್ಲಿ ಹಣ ಕಳೆದುಕೊಳ್ಳಬಹುದು. ಆದರೆ ತಮ್ಮಲ್ಲಿನ ವಿಶ್ವಾಸ ಕಳೆದುಕೊಳ್ಳದೇ ತಮಗೆ ಉಂಟಾದ ಹಿನ್ನಡೆಯ ಬಗ್ಗೆ ಚಿಂತನೆ ಮಾಡಿ ಮುಂದುವರೆಯಬೇಕೆಂದು ಅವರು ತಿಳಿಸಿದರು.
ನಾವು ಮಾಡುವ ಯಾವುದೇ ಕೆಲಸವಿರಲಿ ಅದನ್ನು ಶ್ರದ್ದೆ ಮತ್ತು ನಿಷ್ಠೆಯಿಂದ ಮಾಡಬೇಕು. ಪ್ರೀತಿ ವಿಶ್ವಾಸದಿಂದ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಹಣ ಗಳಿಸುವುದೇ ಮುಖ್ಯ ಗುರಿಯಾಗಬಾರದು. ಜೀವನದಲ್ಲಿ ಜನರ ಪ್ರೀತಿ ಮತ್ತು ವಿಶ್ವಾಸ ಗೆಲ್ಲಬೇಕು. ಕೌಟುಂಬಿಕ ಜೀವನದಲ್ಲಿ ಶಾಂತಿ ನೆಲೆಸಿರಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅವರು ವಿವರಿಸಿದರು.
ಉಷಾ ಮೆಲವಾನಿ ಕಾರ್ಯಕ್ರಮ ನಡೆಸಿಕೊಟ್ಟರು. ಸಮಾರಂಭದಲ್ಲಿ ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸಂತೋಷ ಪೋರವಾಲ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಉಪ ಸಂಯೋಜಕ ಅಮಿತ ದೋಷಿ ಕಾರ್ಯದರ್ಶಿ ಸತೀಶ ಮೆಹತಾ ಬೆಳಗಾವಿ ಕಾರ್ಯಕ್ರಮ ಸಂಯೋಜಕ ಚೇತನ ಶಹಾ ಮೊದಲಾದವರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.