ಉತ್ತಮ ಸಮಾಜಕ್ಕಾಗಿ

ಅಂಜಲಿತಾಯಿ ನಿಂಬಾಳಕರ ಪ್ರಾಯೋಜಿತ ಕಬ್ಬಡ್ಡಿ ಲೀಗ್: ಗರ್ಲಗುಂಜಿ, VHS ಹಲಗಾ ಪ್ರಥಮ ಸ್ಥಾನ

0

ಖಾನಾಪುರ: ಸ್ಥಳೀಯ ಮಲಪ್ರಭಾ ಕ್ರೀಡಾಂಗಣದಲ್ಲಿ ಡಿ.20 ರಿಂದ 24ರ ವರೆಗೆ ನಡೆದಿದ್ದ ಕಬಡ್ಡಿ ಲೀಗ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾರತೀಯ ಕಬ್ಬಡ್ಡಿ ತಂಡ ಉನ್ನತ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾದ ಮಾಜಿ ನಾಯಕ ರಮೇಶ ವ್ಯವಸ್ಥಾಪನೆಯಲ್ಲಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.ಪುರುಷರ ಕಬ್ಬಡಿಯಲ್ಲಿ ಗರ್ಲಗುಂಜಿ ಪ್ರಥಮ, ಕುಪ್ತಗಿರಿ ದ್ವಿತೀಯ ಹಾಗೂ ಕಸಬಾನಂದಗಡ ಮತ್ತು ಮಾಸ್ಕೇನಟ್ಟಿ ತೃತೀಯ ಸ್ಥಾನ ಪಡೆದಿವೆ‌. ಬೆಸ್ಟ್ ಕ್ಯಾಚರ್ ಪಪ್ಪು ಕುಪ್ತಗಿರಿ, ಬೆಸ್ಟ್ ರೈಡರ್, ವಿಶಾಲ ಪಾಟೀಲ(ಕಸಬಾ ನಂದಗಡ), ರಾಹುಲ್ ಪಾಟೀಲ (ಗರ್ಲಗುಂಜಿ) ಹಾಗೂ ಮಹಿಳೆಯರ ವಿಭಾಗದಲ್ಲಿ ವಿಎಚ್ ಎಸ್ ಹಲಗಾ, ಎಸ್ ಎಸ್ ಎಚ್ ಎಸ್ ಗೌಂಡಳ್ಳಿ ದ್ವಿತೀಯ ಹಾಗೂ ಮೂರನೇ ಸ್ಥಾನ ಆಮ್ಟೇ ಮತ್ತು ಇದ್ದಲಹೊಂಡ ಜತೆಗೆ ಮನಿಷಾ ಚೊಪಡೆ, ದರ್ಶನಾ ಗಾವಡೆ, ಟಿ. ಪಿ. ಜಾಂಬೋಡಕರ ಬಹುಮಾನ ಪಡೆದಿದ್ದಾರೆ.ಪ್ರಾಯೋಜಕತ್ವ ಅಂಜಲಿ ನಿಂಬಾಳ್ಕರ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಭಾರತದ ಸಾಂಪ್ರಾದಾಯಿಕ ಕ್ರೀಡೆಯಾಗಿರುವ ಕಬ್ಬಡ್ಡಿಯನ್ನು ಪೋಸ್ಥಾಹಿಸುವ ನಿಟ್ಟಿನಲ್ಲಿ ಖಾನಾಪುರ ಕಬ್ಬಡ್ಡಿ ಲೀಗವನ್ನು ಆಯೋಜಿಸಲಾಗಿತ್ತು ಎಂದರು. ಕಬಡ್ಡಿ ಲೀಗಗೆ ಡಿ.20 ರಂದು ಸಂಜೆ 6:30 ಕ್ಕೆ ಖಾನಾಪುರದ ಜಾಂಬೋಟಿ ಕ್ರಾಸನಲ್ಲಿ ಇರುವ ಮಲಪ್ರಭಾ ಕ್ರೀಡಾಂಗಣದಲ್ಲಿ ಚಾಲನೆ ದೊರೆತಿತ್ತು.

Leave A Reply

 Click this button or press Ctrl+G to toggle between Kannada and English

Your email address will not be published.