ಉತ್ತಮ ಸಮಾಜಕ್ಕಾಗಿ

ಕೇಂದ್ರ ಸಚಿವ ಅನಂತಕುಮಾರ ಹೇಳಿಕೆ: CM ಸಿದ್ದರಾಮಯ್ಯ ಅಸಮಾಧಾನ

0

ಹುಬ್ವಳ್ಳಿ: ನಾವು ಸಂವಿಧಾನ ಬದಲಾಯಿಸುತ್ತೇವೆ ಎಂಬ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯದಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಅನಂತಕುಮಾರ್ ಹೆಗಡೆ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಸಂವಿಧಾನ ಮೊದಲು ಹುಟ್ಟಿದ್ದೋ, ಅನಂತಕುಮಾರ್ ಹೆಗಡೆ ಮೊದಲು ಹುಟ್ಟಿದ್ದೋ ಅಂತ ಹರಿಹಾಯ್ದಿದ್ದಾರೆ. ಅನಂತಕುಮಾರ್ ಹೆಗಡೆಗೆ ಸಂವಿಧಾನ ಗೊತ್ತಿಲ್ಲ. ಸಾಮಾಜಿಕ ಕಳಕಳಿಯೂ ಇಲ್ಲ. ಇಂತಹವರು ಸಂವಿಧಾನ ಬದಲಿಸಲು ಹೊರಟಿದ್ದಾರೆ ಅಂತ ಕಿಡಿಕಾರಿದರು.

ನಮ್ಮದು ಧರ್ಮ ನಿರಪೇಕ್ಷ ರಾಷ್ಟ್ರ. ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡೋದು ನಮ್ಮ ಗುರಿ ಅಂತ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಬೆಂಗಳೂರಿನಲ್ಲಿ ಅನಂತಕುಮಾರ್ ಹೆಗಡೆ ವಿರುದ್ಧ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಅನಂತಕುಮಾರ್ ಹೆಗಡೆ ಮಾತಿನಿಂದ ಅವರ ಪಕ್ಷದ ಸಿದ್ಧಾಂತ ಹೊರಬಂದಿದೆ. ಜಾತ್ಯಾತೀಯವಾದಿಗಳಿಗೆ ಅಪ್ಪ ಅಮ್ಮ ಇಲ್ಲ ಅಂದಿದ್ದಾರೆ. ಅವರಿಗೆ ಅಸ್ತಿತ್ವವೇ ಇಲ್ಲವೆಂದಿದ್ದಾರೆ. ಅನಂತಕುಮಾರ್ ಹೆಗಡೆ ಹೇಳಿಕೆ ಖಂಡನೀಯ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.