ಉತ್ತಮ ಸಮಾಜಕ್ಕಾಗಿ

ಘೋಡಗೇರಿ ಮಹಿಳೆಯ ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿ¸ಲು ಆಗ್ರಹÀ

0

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಕಳೆದ ದಿನಾಂಕ 24 ರಂದು ರಾತ್ರಿ ವೇಳೆ ಮಹಿಳೆಯ ಮೇಲೆ ಅತ್ಯಂತ ಹೇಯವಾಗಿ ಲೈಂಗಿಕ ಚಿತ್ರಹಿಂಸೆ ಮಾಡಿ ಅತ್ಯಾಚಾರ ವೆಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಘೋಡಗೇರಿ ಗ್ರಾಮದ ದಲಿತ ಮುಖಂಡರು ಇಂದು ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಇಂಥಹ ಅಮಾನವೀಯ ದುರ್ಘಟನೆ ನಡೆದದ್ದು ಇದೇ ಮೊದಲಾಗಿದ್ದು ಈ ಘಟನೆಯಿಂದ ಗ್ರಾಮದ ಮಹಿಳೆಯರು ಭಯಭೀತರಾಗಿದ್ದಾರೆ. ಕಾರಣ ಗ್ರಾಮದ ಪ್ರಜ್ಞಾವಂತ ನಾಗರಿಕರು ರೊಚ್ಚಿಗೆದ್ದುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಈ ಕಾಮುಕರನ್ನು ಜೈಲಿನಿಂದ ಬಿಡುಗಡೆ ಮಾಡಬಾರದು.ಅಲ್ಲದೇ ಇವರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಇತ್ತಿಚಿಗಷ್ಟೇ ವಿಜಯಪುರ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಘಟನೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾ ಸಂದರ್ಭದಲ್ಲಿಯೇ ಕನ್ನಡ ಸಾಹಿತ್ಯ ಲೋಕಕ್ಕೆ 8 ನೇ ಜ್ಞಾನ ಪೀಠ ಪ್ರಶಸ್ತಿ ತಂದು ಕೊಟ್ಟ ಘೋಡಗೇರಿ ಗ್ರಾಮದಲ್ಲಿ ಇಂಥಹ ಘಟನೆ ನಡೆದದ್ದು ಮರ್ಯಾದಸ್ತ ಗ್ರಾಮಸ್ಥರು ತಲೆ ತಗ್ಗಿಸುವಂತಾಗಿದೆ.
ಪೋಲಿಸ್ ವಶದಲ್ಲಿರುವ ಆರೋಪಿಗಳಾದ ಇದೇ ಗ್ರಾಮದ ಶಿವಾನಂದ ಚಂದ್ರಪ್ಪ ಯರಗಟ್ಟಿ ಮತ್ತು ನವೀನಕುಮಾರ ಕಲ್ಲಪ್ಪ ಕಾಂಬಳೆ ಹಾಗೂ ಇವರಿಗೆ ಸಹಕರಿಸಿದಯರಿಗೂ ಜಾಮೀನು ಸಿಗದ ಹಾಗೇ ನೋಡಿಕೊಂಡು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶಂಕರ ಬಾಗೇವಾಡಿ,ಗ್ರಾಮ ಪಂಚಾಯತ ಮಾಜಿ ಸದಸ್ಯ(ಪತ್ರಕರ್ತ) ಘೋಡಗೇರಿ ಬಸು, ಪಾರೇಶ ಕಾಂಬಳೆ,ಕೃಷ್ಣಾ ಬಾಗೇವಾಡಿ,ಕುಮಾರ ತಳವಾರ,ಗಂಗಾಧರ ಹುಲ್ಲೊಳ್ಳಿ,ಪತ್ರೆಪ್ಪ ಸಣ್ಣಕ್ಕಿ,ಮಲ್ಲಪ್ಪ ಸಣ್ಣಕ್ಕಿ,ಬಾಳವ್ವ ಕಾಂಬಳೆ,ಶಾಂತವ್ವ ಬಾಗೇವಾಡಿ ಮತ್ತಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.