ಉತ್ತಮ ಸಮಾಜಕ್ಕಾಗಿ

ಜಿಲ್ಲಾ ಔಷಧ ಉಗ್ರಾಣಕ್ಕೆ ಜಿ.ಪಂ ಸಿಇಓ ರಾಮಚಂದ್ರನ್ ಭೇಟಿ

0

ಬೆಳಗಾವಿ: ಬೆಳಗಾವಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮಚಂದ್ರನ್ ಆರ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳು ಇಂದು (ಡಿ.26ರ) ಸಾಯಂಕಾಲ 4.30 ಘಂಟೆಗೆ ಜಿಲ್ಲಾ ಔಷಧ ಉಗ್ರಾಣಕ್ಕೆ ಭೇಟಿ ನೀಡಿ, ಲಭ್ಯವಿರುವ ಔಷಧಗಳ ಮಾಹಿತಿ ಪಡೆದುಕೊಂಡು ಜೊತೆಗೆ ಶೀತಲ ಸರಪಣಿಯಲ್ಲಿ ಶೇಖರಿಸಿದ ಔಷಧಗಳನ್ನು ಪರಿಶೀಲಿಸಿ ಜೀವರಕ್ಷಕ ಔಷಧಗಳ ದಾಸ್ತಾನು ಇಡುವಂತೆ ಸಲಹೆ ನೀಡಿದರು.
ಅವಧಿ ಸಮೀಪಿಸುತ್ತಿರುವ ಔಷಧಗಳ ಮಾಹಿತಿಯನ್ನು ಪಡೆದುಕೊಂಡ, ಇಓ ರಾಮಚಂದ್ರನ್ ಅವರು, ಔಷಧಿಯನ್ನು ಹಾಗೂ ಮಾಹಿತಿಯನ್ನು ಸರಿಯಾಗಿ ನಿರ್ವಹಿಸುವಂತೆ ಸೂಚಿಸಿದರು.
2017-18 ನೇ ಸಾಲಿನಲ್ಲಿ ಜಿಲ್ಲೆಯ ಬೆಳಗಾವಿ ಔಷಧ ಉಗ್ರಾಣದ ಎಲ್ಲ ಆರೋಗ್ಯ ಸಂಸ್ಥೆಗಳಿಗೆ ಸರಬರಾಜಾದ ಔಷಧಗಳ ಮಾಹಿತಿಯನ್ನು ಪಡೆದುಕೊಂಡು ಯಾವುದೇ ಸಮಯದಲ್ಲಿ ಔಷಧಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಉಗ್ರಾಣದ ಸಿಬ್ಬಂದಿಗಳಿಗೆ ಸೂಚಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: