ಉತ್ತಮ ಸಮಾಜಕ್ಕಾಗಿ

ವಾರ್ಡ್ ನಂ.57 ಕಳಪೆ ರಸ್ತೆ: ಗುತ್ತಿಗೆದಾರನಿಗೆ ಬಿಲ್ ಕೊಡದಂತೆ ಜನತೆ ಒತ್ತಾಯ

0

ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಕಣಬರಗಿ( ವಾರ್ಡ್ ನಂ. 57)ಯಲ್ಲಿ ಕಳೆದೆರಡು ದಿನದ ಹಿಂದೆ ಮಾಡಲಾದ ಡಾಂಬರೀಕರಣ ಕಳಪೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿ ರಹವಾಸಿಗಳು ಪಾಲಿಕೆ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ರಸ್ತೆ ಮಾಡಲಾಗಿಯೂ ತಗ್ಗು ದಿಣ್ಣೆಗಳಾಗಿವೆ, ಕಳಪೆ ಮಟ್ಟದ ಕೆಲಸ ಮಾಡಲಾಗಿದೆ. ಗುಣಮಟ್ಟದ ರಸ್ತೆ ಮಾಡಲು ಮನವಿ ಮಾಡಿದರೂ ರಹವಾಸಿಗಳಿಗೆ ಕ್ಯಾರೆ ಎನ್ನದೇ ಕಾರ್ಪೋರೇಟರ್ ಮತ್ತು ಗುತ್ತಿಗೆದಾರ ಸುಮ್ಮನಿದ್ದಾರೆ. ರಸ್ತೆ ನಿರ್ಮಿಸಿಯೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ರಹವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಆಯುಕ್ತರು ಕೂಡಲೇ ರಸ್ತೆ ಕಾಮಗಾರಿ ಪರಿಶೀಲಿಸಬೇಕು. ಗುತ್ತಿಗೆದಾರನಿಗೆ ಯಾವುದೇ ಕಾರಣಕ್ಕೂ ಬಿಲ್ ಪಾಸ್ ಮಾಡಬೇಡಿ ಎಂದು ಆಗ್ರಹಿಸಿದ್ದಾರೆ.
ಬಾಬುಗೌಡ ಪಾಟೀಲ, ಭೀಮಗೌಡ ಪಾಟೀಲ, ರವೀಂದ್ರ ಪಾಟೀಲ, ಸಂಜಯ ಕೌಜಲಗಿ, ಬಸನಗೌಡ ಪಾಟೀಲ, ಗಣೇಶ ಪಾಟೀಲ ಸೇರಿದಂತೆ ಗ್ರಾಮಸ್ಥರು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.