ಉತ್ತಮ ಸಮಾಜಕ್ಕಾಗಿ

ಮಧ್ಯ ಅಂಗಡಿ ಮುಚ್ಚಲು ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ

0

ಬೆಳಗಾವಿ: ನಗರದ ಎಪಿಎಮ್ ಸಿ ರಸ್ತೆಯ ಪ್ರದೇಶದಲ್ಲಿ ಹೊಸದಾಗಿ ಪ್ರಾರಂಭಗೊಂಡ ಮಧ್ಯದಂಗಡಿಯನ್ನು ಮುಚ್ಚ ಬೇಕೆಂದು ಆಗ್ರಹಿಸಿ ಸ್ಥಳೀಯ ಸಿದ್ದಾಯಿ ಮಹಿಳಾ ಮಂಡಳದ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು. ನಗರದ ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಕಚೇರಿ ಎದುರು ಘೋಷಣೆಗಳನ್ನು ಕೂಗಿದರು. ವಸತಿ ಪ್ರದೇಶದಲ್ಲಿ ಮಧ್ಯ ಅಂಗಡಿ ನಡೆಸಲು ಪರವಾನಿಗೆ ನೀಡಿರುವದು ಸರಿಯಲ್ಲ ಇದರಿಂದ ಮಹಿಳೆಯರು ಮಕ್ಕಳು ಓಡಾಡುವದು ಕಠಿಣವಾಗಿದೆ ಆದ್ದರಿಂದ ಕೂಡಲೇ ಈ ಮದ್ಯ ಅಂಗಡಿಯನ್ನು ಬಂದ ಮಾಡಬೇಕೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು, ಸ್ಥಳಿಯ ಮಹಿಳಾ ಮುಖಂಡರು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.