ಉತ್ತಮ ಸಮಾಜಕ್ಕಾಗಿ

ರಾಯಬಾಗ ತಾಲೂಕಿನ ಮಂಟೂರ ಗ್ರಾಮ ಪಂಚಾಯತಿ ಪುನರ್ ರಚನೆ ಕರಡು ಅಧಿಸೂಚನೆ ಪ್ರಕಟ

0

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ 29-ಕಟಕಭಾವಿ ಗ್ರಾಮ ಪಂಚಾಯಿತಿಯಿಂದ 42-ಮಂಟೂರ ಗ್ರಾಮವನ್ನು ಪತ್ರ್ಯೇಕಿಸಿ, ಸ್ವತಂತ್ರ ಗ್ರಾಮ ಪಂಚಾಯತಿ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಕರಡು ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.
ರಾಯಬಾಗ ತಾಲೂಕಿನ ಕಟಕಭಾವಿ, ದೇವಾಪೂರಹಟ್ಟಿ ಗ್ರಾಮಗಳನ್ನು 29-ಕಟಕಭಾವಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಅದರಂತೆ 42-ಮಂಟೂರು ಗ್ರಾಮವನ್ನು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವೆಂದು ಘೋಷಿಸಲಾಗಿದೆ.
ಈ ಅಧಿಸೂಚನೆಯಿಂದ ಭಾದಿತರಾಗಬಹುದಾದ ಯಾವುದೇ ವ್ಯಕ್ತಿಗಳು ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಮೂವತ್ತು (30) ದಿನಗಳೊಳಗಾಗಿ ಅಂದರೆ 2018ರ ಜನೇವರಿ 25ರೊಳಗಾಗಿ ಮಾನ್ಯ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ ಇವರಿಗೆ ಮೇಲ್ಮನವಿಯನ್ನು ಸಲ್ಲಿಸಬಹುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆ ತಿಳಿಸಿದೆ.

Leave A Reply

 Click this button or press Ctrl+G to toggle between Kannada and English

Your email address will not be published.