ಉತ್ತಮ ಸಮಾಜಕ್ಕಾಗಿ

ಪ್ರಕಟಣೆ

0

ಜ.1 ರಿಂದ ಆಧಾರ ಅದಾಲತ್
ಬೆಳಗಾವಿ:  ಜಿಲ್ಲಾಡಳಿತ ಹಾಗೂ ಇ-ಆಡಳಿತ ಕೇಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ನಗರದ ಟಿಳಕವಾಡಿಯಲ್ಲಿರುವ ಕಲಾ ಮಂದಿರದಲ್ಲಿ 2018ರ ಜನೇವರಿ 1 ರಿಂದ 5ರವರೆಗೆ ಆಧಾರ ಅದಾಲತ್ ನಡೆಸಲು ಉದ್ದೇಶಿಸಲಾಗಿದ್ದು, ಅದಾಲತ್‍ನಲ್ಲಿ ಆಧಾರ ನೋಂದಣಿ, ತಿದ್ದುಪಡಿ ಮಾಡಲಾಗುವುದು ಹಾಗೂ ಆಧಾರಗೆ ಸಂಬಂಧಿಸಿದಂತೆ ಯಾವುದೇ ತಾಂತ್ರಿಕ ದೋಷಗಳಿದ್ದಲ್ಲಿ ಅವುಗಳನ್ನು ನಿವಾರಿಸಲಾಗುವುದು.
ಜಿಲ್ಲೆಯ ಎಲ್ಲ ಜನರು ಅದಾಲತ್‍ಗೆ ಭೇಟಿ ನೀಡಿ ಈ ವಿಶೇಷ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ವರ್ಷಾಚರಣೆ; ಹೋಟೆಲ್, ಬಾರ್‍ಗಳ ಸಮಯ ವಿಸ್ತರಣೆ
ಬೆಳಗಾವಿ: ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಹೋಟೆಲ್, ಮನರಂಜನಾ ಕ್ಲಬ್, ಬಾರ್ ಮತ್ತು ರೆಸ್ಟೋರೆಂಟ್‍ಗಳಿಗೆ ಡಿಸೆಂಬರ್ 31ರ ಮಧ್ಯರಾತ್ರಿ 1 ಗಂಟೆಯವರೆಗೆ ತೆರೆಯಲು ಅನುಮತಿಯನ್ನು ನೀಡಲಾಗಿದೆ.

-ಸೆಂಬರ್ 31ರಂದು ಮಧ್ಯರಾತ್ರಿವರೆಗೆ ತೆರೆಯಲು ಹೋಟೆಲ್, ಬಾರ್ ಹಾಗೂ ರೆಸ್ಟಾರೆಂಟ್ ಮಾಲೀಕರು ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕು. ಮತ್ತು ಸಿಎಲ್-2 ಲೈಸೆನ್ಸ್ ಹೊಂದಿದ ವೈನ್ ಮತ್ತು ಲಿಕ್ಕರ್ ಅಂಗಡಿಗಳಿಗೆ ಈ ಆದೇಶ ಅನ್ವಯಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರಾದ ಡಾ. ಕೆ.ರಾಮಚಂದ್ರರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಪ್ಪಾಣಿ ಶಹರದಲ್ಲಿ ಡಿ.29 ರಂದು ಮದ್ಯ ಮಾರಾಟ ನಿಷೇಧ
ಬೆಳಗಾವಿ:  ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಶಹರದಲ್ಲಿರುವ ಹಜರತ ಪೀರಾನಪೀರ ದಸ್ತಗೀರ ಸಾಹೇಬ್ ದರ್ಗಾ ಉರುಸನ್ನು ಆಚರಿಸುವ ಪ್ರಯುಕ್ತ ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿಸೆಂಬರ್ 29ರ ಬೆಳಿಗ್ಗೆ 6 ಗಂಟೆಯಿಂದ 2018ರ ಜನೇವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ನಿಪ್ಪಾಣಿ ಶಹರದ ಮದ್ಯ ಮಾರಾಟ ಮಳಿಗೆಗಳನ್ನು ಬಂದ್ ಇಡುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಎಸ್. ಜಿಯಾವುಲ್ಲಾ ಅವರು ಆದೇಶ ಹೊರಡಿಸಿದ್ದಾರೆ.

ಮಹಿಳೆಯರು ಮತ್ತು ಹಿರಿಯ ನಾಗರಿಕರಿಂದ ಅಹವಾಲು ಸ್ವೀಕಾರ
ಬೆಳಗಾವಿ:  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಪ್ರಥಮ ಬಾರಿಗೆ ಹಿರಿಯ ನಾಗರಿಕರು ಮತ್ತು ಮಹಿಳಾ ಪ್ರಯಾಣಿಕರ ಕುಂದುಕೊರತೆ ನಿವಾರಣೆ ಮಾಡುವ ಪ್ರಯುಕ್ತ ಪ್ರತಿ ತಿಂಗಳು 29 ನೇ ದಿನಾಂಕದಂದು ಕೇವಲ ಹಿರಿಯ ನಾಗರಿಕರು ಮತ್ತು ಮಹಿಳೆಯರಿಂದ ಮಾತ್ರ ಸಾರಿಗೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಸ್ವೀಕರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗಾವಿಯ ವಾ.ಕ.ರ.ಸಾ ಸಂಸ್ಥೆ ವಿಭಾಗೀಯ ಕಛೇರಿಯಲ್ಲಿ ಡಿಸೆಂಬರ್ 29 ರಂದು ಬೆಳಿಗ್ಗೆ 11 ರಿಂದ 1 ಗಂಟೆವರೆಗೆ ಕೇವಲ ಹಿರಿಯ ನಾಗರಿಕರು ಮತ್ತು ಮಹಿಳೆಯರು ಸಾರಿಗೆ ಸೌಲಭ್ಯಗಳಿಗೆ ಸಂಭಂದಿಸಿದಂತೆ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನದ ಅಂಗವಾಗಿ
ವಿಶ್ವಮಾನವ ದಿನಾಚರಣೆ
ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ವಿಶ್ವ ಮಾನವ ದಿನಾಚರಣೆ” ಯನ್ನು ಡಿಸೆಂಬರ್ 29 ರಂದು ಮುಂಜಾನೆ 11 ಗಂಟೆಗೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ರಾಜ್ಯ ಸಹಕಾರ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಶ್ರೀ.ಮ.ನಿ.ಪ್ರ.ಸ್ವ. ಸಿದ್ಧರಾಮ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು.
ಭಾರತ ಸರ್ಕಾರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಅನಂತಕುಮಾರ ಹೆಗಡೆ, ಸರ್ಕಾರದ ಮುಖ್ಯ ಸಚೇತಕರಾದ ಅಶೋಕ ಪಟ್ಟಣ ಹಾಗೂ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಗಳಾದ ಗಣೇಶ ಹುಕ್ಕೇರಿ ಇವರುಗಳು ವಿಶೇಷ ಆಮಂತ್ರಿತರಾಗಿ ಭಾಗವಹಿಸವುರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಫಿರೋಜ್ ಎನ್ ಶೇಠ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗೌರವಾನ್ವಿತರು ಉಪಸ್ಥಿತರಿದ್ದರು.
ಕುವೆಂಪು ವೈಚಾರಿಕ ನೆಲೆ ಮತ್ತು ವಿಶ್ವ ಮಾನವ ಪ್ರಜ್ಞೆ ಎಂಬ ವಿಷಯದ ಕುರಿತು ವಿಶ್ವಮಾನವ ಪ್ರಶಸ್ತಿ ಪುರಸ್ಕøತರಾದ ಸಂಕೇಶ್ವರದ ಡಾ.ಗುರುಪಾದ ಮರಿಗುದ್ದಿ ಅವರು ಉಪನ್ಯಾಸವನ್ನು ಮಂಡಿಸುವರು.

ರೈತರಿಗೆ ಹನಿ ಹಾಗೂ ತುಂತುರು ನೀರಾವರಿ ಸೌಲಭ್ಯ
ಬೆಳಗಾವಿ:  2017-18ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹನಿ ನೀರಾವರಿ ಅನುಷ್ಟಾನ ಮಾಡಲು ಇಚ್ಚೀಸುವ ರೈತರು ಹಾಗೂ ತುಂತುರು ನೀರಾವರಿ ಘಟಕ ಪಡೆಯಲು ಬಯಸುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಅನುದಾನ ಲಭ್ಯವಿದ್ದು, ಕೊಡಲೇ ಸಂಬಂಧಿಸದ ರೈತ ಸಂಪರ್ಕ ಕೇಂದ್ರಗಳು ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಿ ಈ ಸೌಲಭ್ಯವನ್ನು ಪಡೆಯಬೇಕೆಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೀವ ರಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಬೆಳಗಾವಿ: ಅಪಘಾತದ ಸಂದರ್ಭಗಳಲ್ಲಿ ನೊಂದವರ ನೆರವಿಗೆ ಧಾವಿಸುವ ಸಾರ್ವಜನಿಕರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಸರ್ಕಾರವು “ಜೀವ ರಕ್ಷಕ” ಪ್ರಶಸ್ತಿಯನ್ನು ಸ್ಥಾಪಿಸಿದೆ. ಅಪಘಾತದಂತಹ ಸಂಕಷ್ಟದ ಸಂದರ್ಭದಲ್ಲಿ ತಕ್ಷಣದ ಚಿಕಿತ್ಸೆ ಒದಗಿಸಲು ಹಾಗೂ ಜೀವ ಉಳಿಸಲು ನೆರವಾಗುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಯಾವುದೇ ನಿರೀಕ್ಷೆಗಳಿಲ್ಲದೇ ಸ್ವಯಂಪ್ರೇರಿತರಾಗಿ ಬಂದು ಅಪಘಾತ ಗಾಯಾಳುಗಳಿಗೆ ನೆರವಾಗುವ ಅಥವಾ ಸಹಾಯ ಮಾಡುವ ಉಪಕಾರಿ ವ್ಯಕ್ತಿ ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.
ರಾಜ್ಯದ ವ್ಯಾಪ್ತಿಯೊಳಗಿನ ರಸ್ತೆ ಅಪಘಾತದ ಗಾಯಾಳುಗಳಿಗೆ ಸಹಾಯ ಮಾಡಲು ಶ್ರಮಿಸುವ ಯಾವುದೇ ವಯಸ್ಸಿನ ವ್ಯಕ್ತಿ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಥವಾ ಅದಕ್ಕೆ ಸಾಕ್ಷಿಯಾದ ವ್ಯಕ್ತಿಯು ನಾಮಕರಣಗೊಳ್ಳಬಹುದು. ಇದಕ್ಕೆಂದು ರಚಿಸಲಿರುವ ಸಮಿತಿಯು ಸೂಕ್ತ ವ್ಯಕ್ತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಿದೆ.
ಈ ಪ್ರಶಸ್ತಿಯನ್ನು ಒಂದು ವರ್ಷದಲ್ಲಿ ಎರಡು ಬಾರಿ ನೀಡಲಾಗುವುದು. ನಾಮಕರಣ ಅರ್ಜಿಗಳನ್ನು ಜನವರಿಯಿಂದ ಜುಲೈವರೆಗೆ ಹಾಗೂ ಆಗಷ್ಟನಿಂದ ಡಿಸೆಂಬರವರೆಗೆ ಸ್ವೀಕರಿಸಲಾಗುವುದು. ಪ್ರಶಸ್ತಿಗಳನ್ನು ಪ್ರತಿವರ್ಷ ಆಗಷ್ಟ 15 ರಂದು ಸ್ವಾತಂತ್ರ್ಯ ದಿನಾಚರಣೆ ಮತ್ತು ಜನವರಿ 26 ರಂದು ಗಣರಾಜ್ಯೋತ್ಸವ ಸಂದರ್ಭದಲ್ಲಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಜನವರಿ 5 ಕೊನೆಯ ದಿನವಾಗಿದೆ. ಮಾಹಿತಿ ಮತ್ತು ಅರ್ಜಿಗಾಗಿ ಸುವರ್ಣ ಆರೋಗ್ಯ ಟ್ರಸ್ಟಿನ ಜಿಲ್ಲಾ ಸಂಯೋಜಕ ಶ್ರೀ ಬಿ ಜಿ.ಮಕಾನದಾರ 8861005600 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave A Reply

 Click this button or press Ctrl+G to toggle between Kannada and English

Your email address will not be published.