ಉತ್ತಮ ಸಮಾಜಕ್ಕಾಗಿ

ಮರಾಠಿ ಯುವ ಮಂಚ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ

0

ಬೆಳಗಾವಿ: ಎಮ್ಇಎಸ್ ಬೆಂಬಲಿತ ಮರಾಠಿ ಯುವ ಮಂಚ ಸಂಘಟನೆಯು ಇತ್ತಿಚೆಗೆ ಮಹದಾಯಿ ವಿಷಯದಲ್ಲಿ ಗಡಿ ವಿವಾದವನ್ನು ಎಳೆದು ತಂದು ರಾಜಕೀಯ ಮಾಡುತ್ತಿದ್ದು ಹಾಗೂ ರೈತರ ಭಾವನೆಗಳಿಗೆ ಹಾಗೂ ನಾಡಿಗೆ ವಿರೋಧವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ ಎಮ್ಇಎಸ್ ಬೆಂಬಲಿತ ಮರಾಠ ಯುವ ಮಂಚ ಸಂಘಟನೆಯನ್ನು ಕೂಡಲೇ ನೀಷೇಧಿಸಬೆಕೆಂದು ಭಾರತೀಯ ಕೃಷಿಕ ಸಮಾಜ ವತಿಯಿಂದ ಇಂದು ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿ ಪ್ರತಿಭಟಿಸಲಾಯಿತು. ಸುಮಾರು 20 ವರ್ಷಗಳಿಂದ ರೈತರು ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ ಆದರೆ ರೈತರಲ್ಲದ ಹಾಗೂ ಈ ವಿಷಯಕ್ಕೆ ಸಂಭದವೇ ಇಲ್ಲದ ಈ ಸಂಘಟನೆಯು ಸುಮ್ಮನೆ ರಾಜಕೀಯಕ್ಕಾಗಿ ರೈತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಇದೇ ಸಂಧರ್ಭದಲ್ಲಿ ಪ್ರತಿಭಟನಾಕಾರರು ಆಕ್ರೊಶ ವ್ಯಕ್ತ ಪಡಿಸಿದರು.

ಸಿದಗೌಡ ಮೊದಗಿ ಅಧ್ಯಕ್ಷತೆಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಶಿವಾಜಿ ಕದಂ, ಗಂಗಾರಾಮ ಕಂಬಾರ, ನಾಗರಾಜ ಮೊದಗಿ ಮತ್ತಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.