ಉತ್ತಮ ಸಮಾಜಕ್ಕಾಗಿ

ಭಯೋತ್ಪಾದನೆ ಮಟ್ಟ: ಇಂಡೋ ಮಾಲ್ಡೀವ್ಸ್ ಸಮರಾಭ್ಯಾಸ ಸಮಾರೋಪ

0

ಬೆಳಗಾವಿ: ಹೆಮ್ಮೆಯ ನಡೆಯಲ್ಲಿ ಬೆಳಗಾವಿಯಲ್ಲಿ ಭಾರತೀಯ ಸೈನ್ಯ ಮತ್ತು ಮಾಲ್ಡೀವ್ಸ್ ಆರ್ಮಿ ಜಂಟಿ ಸಮರಾಭ್ಯಾಸ ನಡೆಸಿ ದೇಶದ ಗಮನ ಸೆಳೆದವು. ಇಂದು ಜಂಟಿ ಸಮರಾಭ್ಯಾಸಕ್ಕೆ ಸರಳ ಸಮಾರಂಭದಲ್ಲಿ ಸಮಾರೋಪ ನೀಡಲಾಯಿತು. ಕಳೆದ ೧೪ ದಿನಗಳಿಂದ ನಡೆದ ಜಂಟಿ ಸಮರಾಭ್ಯಾಸ ಇಂದು ಜಗತ್ತಿನ ದೇಶಗಳನ್ನು ಕಾಡುತ್ತಿರುವ ಭಯೋತ್ಪಾದನೆ ಹತ್ತಿಕ್ಕುವಲ್ಲಿ ಅಭ್ಯಾಸ ನಡೆಸಿದವು.ಭಾರತೀಯ ಸೇನೆಯ ಮಹಾನಿರೀಕ್ಷಕ ಬ್ರಿಗೇಡಿಯರ್ ಅಲೋಕ ಖುರಾನಾ ಮಾತನಾಡಿ ಇಂಡಿಯಾ- ಮಾಲ್ಡೀವ್ಸ್ ನಡುವೆ ಪರಸ್ಪರ ಸ್ನೇಹ ಸಂಬಂಧ ವೃದ್ಧಿ, ಸಹಾಯ ಸಹಕಾರ ಮತ್ತು ಸೈನಿಕರು ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ಭಯೋತ್ಪಾದನೆ ವಿರುದ್ಧ ಹೋರಾಡುವ ಕೌಶಲ್ಯ ಈ ಸಮರಾಭ್ಯಾಸದಿಂದ ಪಡೆದಿದ್ದಾರೆ ಎಂದರು. ಮಾಲ್ಡೀವ್ಸ್ ರಾಷ್ಟ್ರೀಯ ಮಿಲುಟರಿ ಮಹಾನಿರೀಕ್ಷಕ ಬ್ರಿಗೇಡಿಯರ್ ಜನರಲ್ ಅಲಿ ಜುಹೇರ ಭಾರತದೊಂದಿಗೆ ಸಮಾರಾಭ್ಯಾಸ ಮಾಡುವ ಅವಕಾಶ ಮಾಲ್ಡೀವ್ಸ್ ಸೈನ್ಯಕ್ಕೆ ಅಪೂರ್ವ ಕ್ಷಣ ಎಂದು ಬಣ್ಣಿಸಿ ಸಂತಸ ವ್ಯಕ್ತಪಡಿಸಿದರು. ಬಹಳ ಕಠಿಣ ಸಂದರ್ಭಗಳನ್ನು ಎದುರಿಸುವ ಅತ್ಯುತ್ತಮ ತರಬೇತಿ ನೀಡಿದ್ದಕ್ಕಾಗಿ ಎಂಎಲ್ ಐಆರ್ ಸಿಗೆ (MLIRC)ಗೆ ಬ್ರಿ. ಜುಹೇರ್ ಧನ್ಯವಾದಗಳು ನೀಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.