ಉತ್ತಮ ಸಮಾಜಕ್ಕಾಗಿ

ಸಂವಿಧಾನ ಬದಲಿಸುವ ಬಿಜೆಪಿ ಪ್ರಕಟಿಸಲಿ ನೊಡೋಣ: ವಿನಯ ನಾವಲಗಟ್ಟಿ ಸವಾಲು

0

ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾರತೀಯ ಸಂವಿಧಾನದ ಬಗೆಗೆ ತೀರಾ ಹಗುರವಾಗಿ ಮಾತಾಡಿದ್ದು, ಅವರನ್ನು ತತಕ್ಷಣ ಸಂಪುಟದಿಂದ ಕೈಬಿಡಬೇಕೆಂದು ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿ ಆಗ್ರಹಿಸಿತು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ ಪ್ರತಿಯೊಬ್ಬ ಭಾರತೀಯರು ಭಗವದ್ಗೀತೆ, ಬೈಬಲ್ ಮತ್ತು ಖುರಾನನಂತೆ ಭಾರತೀಯ ಸಂವಿಧಾನವನ್ನು ಪ್ರೀತಿಸಿ ಅಭಿಮಾನ ಪಡುತ್ತಾರೆ ಆದರೆ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆಯಂತಹ ಕನಿಷ್ಠ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಗೆ ಸಂವಿಧಾನ ಬದಲಾಯಿಸುವ ಮನಸ್ಸಿದ್ದರೆ ಮುಂಬರುವ ಚುನಾವಣೆಗಳ ಪ್ರಣಾಳಿಕೆಯಾಗಿ ಘೋಷಣೆ ಮಾಡಿ ಬದಲಾಯಿಸಲಿ ನೊಡೋಣ ಎಂದು ವಿನಯ ನಾವಲಗಟ್ಟಿ ಸವಾಲು ಹಾಕಿದರು.

ಸಂವಿಧಾನದ ವಿರುದ್ಧ ಮಾತನಾಡುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಸಂವಿಧಾನ ಬದಲಾವಣೆ ಮಾಡುವ ಚುನಾವಣೆ ಪ್ರಣಾಳಿಕೆ ಪ್ರಕಟಿಸಿ ಬಿಜೆಪಿ ಇಂತಹ ಹೇಳಿಕೆಗಳನ್ನು ಕೊಡಲಿ, ಅದನ್ನು ಬೇಕಾದ್ರೆ ಒಪ್ಪೋಣ ಎಂದು ನಾವಲಗಟ್ಟಿ ಅಸಮಧಾನ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.