ಉತ್ತಮ ಸಮಾಜಕ್ಕಾಗಿ

ಅಭಿನಯ ಶಿಬಿರ ಉದ್ಘಾಟನೆ

0

ಬೆಳಗಾವಿ: ಅಭಿನಯ ಎನ್ನುವುದು ತುಂಬ ಪ್ರಾಚೀನವಾದ ಕಲೆ. ಕಲಾವಿದರು ನಟನೆಯೊಂದಿಗೆ ಆ ಕುರಿತಂತೆ ಬೇರೆ ಪುಸ್ತಕಗಳನ್ನ ಓದುವುದರ ಮೂಲಕ ರಂಗಭೂಮಿ ಇತಿಹಾಸ ತಿಳಿದುಕೊಳ್ಳುವುದು ಅತ್ಯವಶ್ಯ. ಪ್ರಾಚೀನ ರಂಗಭೂಮಿ, ಭಾರತೀಯ ರಂಗಭೂಮಿ, ಪಾಶ್ಚಾತ್ಯ ರಂಗಭೂಮಿ, ಕರ್ನಾಟಕ ರಂಗಭೂಮಿಗಳ ಕುರಿತಂತೆ ಅಭ್ಯಾಸ ಮಾಡಿಕೊಳ್ಳುವುದು ಕಲಾವಿದನಿಗೆ ಅಷ್ಟೇ ಮಹತ್ವ. ನಟನೆಯೊಂದಿಗೆ ಓದುವ ಹವ್ಯಾಸವನ್ನೂ ಬೆಳೆಸಿಕೊಳ್ಳಿ ಎಂದು ಹಿರಿಯ ಪತ್ರಕರ್ತ, ಸಾಹಿತಿ ಎಲ್. ಎಸ್. ಶಾಸ್ತ್ರಿ ಇಂದಿಲ್ಲಿ ಹೇಳಿದರು.

ಯುವರಂಗ ಸಾಂಸ್ಕೃತಿಕ ಸಂಸ್ಥೆ(ರ) ಹಾಗೂ ಪುಣ್ಯಕೋಟಿ ಗ್ರಾಮೀಣಾಭಿವೃದ್ಧಿ ಸಾಂಸ್ಕೃತಿಕ ಸಂಸ್ಥೆ(ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಅಭಿನಯ ತರಬೇತಿ ಶಿಬಿರವನ್ನು ಸಸಿಗೆ ನೀರೆರಿಯುವುದರ ಮೂಲಕ ಉದ್ಘಾಟಿಸಿದ ಶಾಸ್ತ್ರಿಯವರು ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದ ಅವರು ಕೇವಲ ಸಿನೀಮಾದಲ್ಲಿ ನಟಿಸುವುದೊಂದೆ ಗುರಿಯನ್ನಾಗಿ ಇಟ್ಟುಕೊಂಡು ಅಭಿನಯ ತರಬೇತಿಯಲ್ಲಿ ತೊಡಗಿಕೊಳ್ಳದೇ ರಂಗಭೂಮಿ ನಟನೆಯಲ್ಲಿ ನೀವು ತೃಪ್ತಿ ಪಡುವ ಮನೋಭಾವವನ್ನು ಬೆಳಿಸಿಕೊಂಡು ನಿಮ್ಮನ್ನು ನೀವು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮಾತ್ರ ನೀವೊಬ್ಬ ಪರಿಪೂರ್ಣ ನಟರಾಗಲು ಸಾಧ್ಯವೆಂದು ಅವರು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಹಾಸ್ಯಕೂಟ ಸಂಚಾಲಕರಾದ ಗುಂಡೇನಟ್ಟಿ ಮಧುಕರ ಪ್ರತಿಯೊಬ್ಬರಲ್ಲಿಯೂ ಒಂದು ಕಲೆ ಅಡಗಿಕೊಂಡಿರುತ್ತದೆ. ಅದನ್ನು ಜಾಗೃತಗೊಳಿಸಲು ಇಂಥ ಶಿಬಿರಗಳು ಮಹತ್ವದ ಪಾತ್ರವಹಿಸುತ್ತವೆ ಅಲ್ಲದೇ ಕಲಾವಿದರಲ್ಲೊಂದು ಆತ್ಮವಿಶ್ವಾಸವನ್ನು ಹುಟ್ಟಿಸುತ್ತವೆ ಎಂದು ಹೇಳಿದ ಅವರು ಈ ಕಾರ್ಯವನ್ನು ಹಲವಾರು ವರ್ಷಗಳಿಂದ ಕಷ್ಟನಷ್ಟಗಳ ಮದ್ಯೆಯೂ ವಿಚಲಿತರಾಗದೇ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವ ಬಾಬಾಸಾಹೇಬ ಕಾಂಬಳೆ ಹಾಗೂ ರಾಜು ಮಠಪತಿ ಕಾರ್ಯ ಶ್ಲಾಘನೀಯ ಎಂದರು. ರಂಗಭೂಮಿ ಕಲಾವಿದರಾದ ಮಂಜುನಾಥ ನೀಲಣ್ಣವರ ಮಾತನಾಡಿ ನಾನು ಕ್ರಿಡಾಪಟುವೂ ಹೌದು ಆದರೆ ನನಗೆ ರಂಗಭೂಮಿ ಹೆಚ್ಚಿನ ಖುಷಿ ಕೊಡುತ್ತದೆ ಏಕೆಂದರೆ ನಮಗಿದು ನಗುವುದನ್ನು ಕಲಿಸಿಕೊಡುತ್ತದೆ. ನಗುವಿನಿಂದ ನಮ್ಮ ನೋವನ್ನು ಮರೆಯಬಹದು ಅಲ್ಲದೇ ರಂಗಭೂಮಿ ಸಮಾಜದಲ್ಲಿ ಜನರ ಒಡನಾಟ ಹೆಚ್ಚಿಸುತ್ತದೆ. ಸಹಿಷ್ಣುತೆ, ವಾಚನಾಭಿರುಚಿ ಹೀಗೆ ಹಲವಾರು ವಿಷಯಗಳಿಂದ ಪರಿಪೂರ್ಣ ಮನುಷ್ಯನನ್ನಾಗಿ ಮಾಡುತ್ತದೆ ಆದ್ದರಿಂದ ರಂಗಭೂಮಿ ನಾನು ಮೆಚ್ಚಿಕೊಳ್ಳುತ್ತೇನೆ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಬೀರದ ನಿರ್ದೇಶಕ ಬಾಬಾಸಾಹೇಬ ಕಾಂಬಳೆ ಇಂದಿನ ವಾಟ್ಸಪ್ ಹಾಗೂ ಫೇಸ್ಬುಕ್ ಜಗತ್ತು ಇಂದಿನ ಯುವಕರು ಹೊರಜಗತ್ತನ್ನು ಕಾಣದ, ಅದನ್ನು ಆಸ್ವಾದಿಸದ ಕುರುಡರಾಗಿದ್ದಾರೆ ಎಂದು ವಿಷಾದ ವ್ಯಕ್ತ ಪಡಿಸಿದ ಅವರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಯುವಜನತೆ ಇಂಥ ಶಿಬೀರದಲ್ಲಿ ಪಾಲ್ಗೊಂಡು ಇದರ ಸದಪಯೋಗ ಪಡೆಯಬೇಕೆಂದು ಹೇಳಿದರು. ತರಬೇತಿ ಪಡೆಯಲು 30ಕ್ಕೂ ಹೆಚ್ಚು ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ರಮೇಶ ಅನಿಗೋಳ, ರಾಜು ಮಠಪತಿ, ಬಸವರಾಜ ತಳವಾರ, ಸ್ಟಿಫನ್ ಜೇಮ್ಸ, ಗಗನ ಅವಳೆ, ಮಹಾದೇವ ಕಾಂಬಳೆ, ಅಪ್ಪಣ್ಣಾ ಕಬಾಡಗಿ, ಮುಂತಾದವರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.