ಉತ್ತಮ ಸಮಾಜಕ್ಕಾಗಿ

ಮಹದಾಯಿ ಹೋರಾಟ ನಿರ್ಲಕ್ಷಿಸಿದವರ ವಿರುದ್ಧ ಮತ್ತಷ್ಟು ಹೋರಾಟ

0

ನವಿಲು ತೀರ್ಥದಲ್ಲಿ ಜೆಎಸ್‍ಪಿ
`ಬಸವ ರಥ ಯಾತ್ರೆ’ಗೆ ಚಾಲನೆ
ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ `ಜನ ಸಾಮಾನ್ಯರ ಪಕ್ಷ’ದ ಬಸವ ರಥ ಯಾತ್ರೆಗೆ ನವಿಲು ತೀರ್ಥದಲ್ಲಿ ನೂರಾರು ಜನರ ಸಮ್ಮುಖದಲ್ಲಿ ಶನಿವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಪಕ್ಷದ ಮುಖ್ಯಸ್ಥರಾದ ಡಾ. ಅಯ್ಯಪ್ಪ ಕಳಸಾ-ಬಂಡೂರಿ ಹೋರಾಟದ ಪ್ರಮುಖ ವಿಜಯ ಕುಲಕರ್ಣಿ ಬಸವ ರಥಕ್ಕೆ ಚಾಲನೆ ನೀಡಿದರು.
ಕಾಂಗ್ರೆಸ್, ಬಿಜೆಪಿ ಸರಕಾರಗಳು ಕಳಸಾ- ಬಂಡೂರಿ ಹೋರಾಟವನ್ನು ನಿರ್ಲಕ್ಷಿಸಿ ರಾಜ್ಯದ ಉತ್ರರ ಭಾಗದ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಹಿಂದೆ ಚುನಾವಣೆಗಳಲ್ಲಿ ಮಲಪ್ರಭಾ ನದಿಗೆ ಮಹದಾಯಿ ನದಿ ನೀರು ಹರಿಸುವುದಾಗಿ ಮಾತು ಕೊಟ್ಟವರು ಮಾತಿಗೆ ತಪ್ಪಿದ್ದಾರೆ ಎಂದರು.
ಹೊಸ ವರ್ಷದ ಜನವರಿ 5ರೊಳಗಾಗಿ ಕಳಸಾ-ಬಂಡೂರಿ ವಿವಾದದ ವಿಚಾರದಲ್ಲಿ ನ್ಯಾಯ ಸಿಗುವ ಸ್ಪಷ್ಟ ಭರವಸೆ ಸಿಗದಿದ್ದರೆ ಮಾತಿಗೆ ತಪ್ಪಿದವರ ವಿರುದ್ಧ ಜನಾಂದೋಲ ನಡೆಸಲಾಗುವುದಲ್ಲದೇ ಜನ ಸಾಮಾನ್ಯರ ಪಕ್ಷದ ವತಿಯಿಂದ ಪರಿಣಾಮಕಾರಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿರು.
ರಾಜ್ಯದ ಜನಸತೆ ವಿನೂತನ ಪರ್ಯಾಯ ಶಕ್ತಿಗೆ ಕಾಯುತ್ತಿದ್ದಾರೆ. ರೈತರು, ವಿವಿಧ ರಂಗಗಳ ಹೋರಾಟಗಾರರು, ಶಿಕ್ಷಣ ತಜ್ಞರು ಒಂದೇ ವೇದಿಕೆಯಡಿ ಪರ್ಯಾಯವನ್ನು ನೀಡಲು ಸಿದ್ಧರಾಗಿದ್ದಾರೆ ಎಂದು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮುತ್ತಣ್ಣ ಕೋಮಾರ ಹೇಳಿದರು.
ಬಸವ ರಥ 12 ಶತಮಾನದ ಶಿವ ಶರಣರ ಭಾವಚಿತ್ರಗಳು ಮತ್ತು ಆಶಯದ ಸಿದ್ಧಾಂತಗಳನ್ನು ಬಿಂಬಿಸುತ್ತಿದೆ. ಜನ ಸಾಮಾನ್ಯರ ಪಕ್ಷದ ಸಿದ್ಧಾಂತವೂ ಬಸವಾದಿ ಶರಣಗಳ ಆಶಯಗಳನ್ನು ಒಳಗೊಂಡಿದೆ ಎಂದ ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಅವರು, ಕಾಂಗ್ರೆಸ್, ಬಿಜೆಪಿ, ಜನತಾ ದಳಗಳ ಆಡಳಿತದಿಂದ ಬೇಸತ್ತ ಜನತೆಗೆ ಜನ ನೂತನ ಪಕ್ಷ ಪರ್ಯಾಯ ಶಕ್ತಿಯಾಗಲಿದೆ ಎಂದರು.
ನಿವೃತ್ತ ಕೆಎಎಸ್ ಅಧಿಕಾರಿ ಉಳವಿ, ಬಸವ ರಥ ಸಂಚಾಲಕ ಯಲ್ಲಪ್ಪ ಹೆಗಡೆ, ಸಿದ್ದನಗೌಡ ಮೋದಗಿ ಮತ್ತಿತರರು ಮಾತನಾಡಿದರು.
ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಸತೀಶ್, ಪ್ರಮುಖರಾದ ಬಸವರಾಜ ಸುಕ್ಕಾಲಿ, ಬಾಬಣ್ಣ ಬಿರಾದಾರ, ಟಿ.ಟಿ. ಮುರಕಟನಾಳ, ಅಮೃತ ಇಜೇರಿ, ವಿಕಾಸ ಸೊಪ್ಪಿನ, ನಿಲೇಶ ಬನ್ನೂರ, ನಾಗರಾಜ ಗೋಳಶೆಟ್ಟಿ, ಮಿಲನಕುಮಾರ ತಾರಿಹಾಳ, ಮಲ್ಲು ಮಡಿವಾಳರ, ಸಿದ್ದಣ್ಣ ಅಂಗಡಿ, ಗುರು ಅಂಗಡಿ ಸೇರಿದಂತೆ ಇತರರು ಇದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.