ಉತ್ತಮ ಸಮಾಜಕ್ಕಾಗಿ

ಪ್ರಕಟಣೆಗಳು

0

ಕೇಂದ್ರದ ಆಯುಷ್ಯ ಇಲಾಖೆ ಸಚಿವರ ಜಿಲ್ಲಾ ಪ್ರವಾಸ
ಬೆಳಗಾವಿ:  ಕೇಂದ್ರದ ಆಯುಷ್ಯ ಇಲಾಖೆ ಸಚಿವರಾದ ಶ್ರೀಪಾದ ನಾಯಕ, ಅವರು 2018ರ ಜನೇವರಿ 1 ರಂದು ಬೆಳಗಾವಿ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.
ಜನವರಿ 1 ರಂದು ಬೆಳಿಗ್ಗೆ 9-30 ಗಂಟೆಗೆ ಆಗಮಿಸುವರು. ಬೆಳಿಗ್ಗೆ 10-30 ಗಂಟೆಗೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ಶ್ರೀ ಶಿವಯೋಗೇಶ್ವರ ಗ್ರಾಮೀಣ ಆಯುರ್ವೇದಿಕ ಮೆಡಿಕಲ್ ಕಾಲೇಜು ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ನಂತರ 5-45ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿಗೆ ಕ.ಸಾ.ಪ ಅಧ್ಯಕ್ಷರು
ಬೆಳಗಾವಿ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಮನು ಬಳಿಗಾರ ಅವರು ಜನವರಿ 1 ರಿಂದ 3 ರವರೆಗೆ ಬೆಳಗಾವಿ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.
ಜನವರಿ 1 ರಂದು 12-30 ಗಂಟೆಗೆ ಬೆಳಗಾವಿಗೆ ಆಗಮಿಸಿ, ಅಥಣಿಗೆ ಪ್ರಯಾಣ ಬೆಳೆಸುವರು. ಸಂಜೆ 4 ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೊಂದಿಗೆ ಸಮಾಲೋಚನೆ ಹಾಗೂ ಸಾಹಿತಿಗಳು, ಕಲಾವಿದರೊಂದಿಗೆ ಚರ್ಚೆ ನಡೆಸುವರು. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ.
ಜನವರಿ 2 ರಂದು ಬೆಳಿಗ್ಗೆ 11 ಗಂಟೆಗೆ ಅಥಣಿ ಮೋಟಗಿ ಮಠದ ಅನುಭವ ಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಥಣಿ ಸರ್ಕಾರಿ ಅತಿಥಿ ಗೃಹದಲ್ಲಿ ವಾಸ್ತವ್ಯ. ಜನವರಿ 3 ರಂದು ಬೆಳಿಗ್ಗೆ 11 ಗಂಟೆಗೆ ಹಾರುಗೇರಿಯಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವರು. ನಂತರ ಸಂಜೆ 5-45 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ತರಕಾರಿ ಬೀಜಗಳ ವಿತರಣೆ
ಬೆಳಗಾವಿ: ತೋಟಗಾರಿಕೆ ಇಲಾಖೆಯಿಂದ 2017-18ನೇ ಸಾಲಿಗೆ ಕೃಷಿಭಾಗ್ಯ ಯೋಜನೆಯಡಿ ಸಣ್ಣ, ಅತೀಸಣ್ಣ ನೀರಾವರಿ ಸೌಲಭ್ಯ ಹೊಂದಿರುವ ಅರ್ಹ ರೈತರಿಗೆ ಗರಿಷ್ಠ 1 ಎಕರೆ ಪ್ರದೇಶದವರೆಗೆ ರೂ.2000 ಮೌಲ್ಯದ ತರಕಾರಿ ಬೀಜ ಕಿಟ್ ಶೇ.100ರ ಸಹಾಯಧನದಲ್ಲಿ ವಿತರಿಸಲಾಗುತ್ತಿದ್ದು, ಆಸಕ್ತ ರೈತರು ತಾಲೂಕು ತೋಟಗಾರಿಕಾ ಕಚೇರಿಗೆ ಅಗತ್ಯ ದಾಖಲಾತಿಗಳನ್ನು ಒದಗಿಸಿ ಸೌಲಭ್ಯವನ್ನು ಪಡೆಯಬೇಕು. ಮೊದಲ ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಕಾರರ ಸಾಲಮನ್ನಾ; ದಾಖಲಾತಿ ನೀಡಲು ಜ.8 ಕೊನೆಯ ದಿನ
ಬೆಳಗಾವಿ:  ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರ ಸಹಕಾರಿ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಂದ ಸಾಲ ಪಡೆದು 2017ರ ಜೂನ್ 30ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ರೂ. 50,000 ಗಳವರೆಗಿನ ಸಾಲ ಮನ್ನಾ ಮಾಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಸಾಲ ನೀಡಿದ ನೇಕಾರರ ಸಹಕಾರಿ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರಿ ಬ್ಯಾಂಕುಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಸಾಲ ನೀಡಿದ ಒಟ್ಟು ಮೊತ್ತದಲ್ಲಿ ರೂ. 50,000 ಗಳವರೆಗಿನ (ಸಾಲ ಮತ್ತು ಬಡ್ಡಿಯನ್ನು ಒಳಗೊಂಡು) ಸಾಲದ ಅಸಲು ಮತ್ತು ಬಡ್ಡಿ ಸಾಲ (ಕ್ಲೇಮ್ ಬಿಲ್) ಪಡೆದ ದಾಖಲಾತಿಯನ್ನು ನಿಗಧಿತ ನಮೂನೆಯಲ್ಲಿ ಈ ಕಚೇರಿಗೆ 2018ರ ಜನವರಿ 8 ರೊಳಗಾಗಿ ಸಲ್ಲಿಸಬೇಕು.
ಈ ದಿನಾಂಕದ ನಂತರ ಸಲ್ಲಿಸಲ್ಪಡುವ ಸಾಲ (ಕ್ಲೇಮ್ ಬಿಲ್) ಪಡೆದ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ. ಸಹಕಾರ ಸಂಘ, ಬ್ಯಾಂಕುಗಳು ಮುತುವರ್ಜಿ ವಹಿಸಿ ಯೋಜನೆಯ ಲಾಭವನ್ನು ನೇಕಾರರಿಗೆ ತಲುಪಿಸುವಲ್ಲಿ ಸಹಕರಿಸುವುದು.
ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದೂರವಾಣಿ ಸಂಖ್ಯೆ 0831-2407237 ಮತ್ತು 0831-2443246ಗೆ ಸಂಪರ್ಕಿಸಬೇಕೆಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.