ಉತ್ತಮ ಸಮಾಜಕ್ಕಾಗಿ

ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿದ್ದವರು ಪೊಲೀಸ್ ಬಲೆಗೆ

0

ಬೆಳಗಾವಿ: ಕಣ್ಣಿಗೆ ಖಾರದ ಪುಡಿ ಎರಚಿ ಹೂವಿನ ವ್ಯಾಪಾರಿಯಿಂದ ₹24 ಲಕ್ಷ ಹಣ ದೋಚಿದ್ದ ಆರೋಪಿತನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹುಕ್ಕೇರಿಯ ಅಸ್ಕರ ಅಲಿ ನಜೀರ ಅಹ್ಮದ ಮಕಾನದಾರ (೨೨) ಬಂಧಿತನಾಗಿದ್ದಾನೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಐಜಿಪಿ ಕೆ. ರಾಮಚಂದ್ರರಾವ್ ಮತ್ತು ಡಿಸಿಪಿ ಸೀಮಾ ಲಾಟಕರ ಬಂಧಿತನಿಗರ ಹೂವಿನ ವ್ಯಾಪಾರಿಯ ಹಣ ಸಂಗ್ರಹಣೆಯ ಬಗ್ಗೆ ಮಾಹಿತಿ ಇತ್ತು. ನಾರಾಯಣಪ್ಪ ಹೂವು ಮಾರುವ ವ್ಯಾಪಾರಿಗಳಿಂದ ಹಣ ಸಂಗ್ರಹಿಸಲು ಹುಕ್ಕೇರಿಗೆ ಬರುತ್ತಿದ್ದ ಎಂಬ ಬಗ್ಗೆ ಆರೋಪಿತನಿಗೆ ಮಾಹಿತಿ ಇತ್ತು. ತನ್ನ ಗೆಳೆಯರಾದ ನಿಸ್ಸಾರ ಮುಲ್ಲಾ, ಉಮೇಶ ಬಸ್ತವಾಡೆ ಜತೆಗೆ ಸೇರಿ ಹಣ ದೋಚುವ ಪ್ಲಾನ್ ಮಾಡಿದ್ದರು. ಇವರು ಬೆಳಗಾವಿವರೆಗೆ ವ್ಯಾಪಾರಿಯನ್ನು ಹಿಂಬಾಲಿಸಿಕೊಂಡು ಬಂದು ಮತ್ತಿಬ್ಬರೊಂದಿಗೆ ಸೇರಿ ಕೃತ್ಯ ನಡೆಸಿದ್ದರು. ಶಶಿಕಾಂತ ಮಿಸಾಳೆ ಹಾಗೂ ಯಲ್ಲೇಶ ತಾನೂಗೋಳ ಇಬ್ಬರೂ ವ್ಯಾಪಾರಿ ತಂಗಿದ್ದ ವಸತಿ ಗೃಹದಿಂದ ಹಿಂಬಾಲಿಸಿದ್ದರು. ತುಮಕೂರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ನಾರಾಯಣ ಮತ್ತು ಅವರ ಸ್ನೇಹಿತ ರಾಮಣ್ಣ ಅವರ ಮೇಲೆ ಖಾರದ ಪುಡಿ ಎರಚಿ ಹಣ ಮತ್ತು ಎರಡು ಮೊಬೈಲ್ ದೋಚಿದ್ದರು.
ಪ್ರಕರಣ ಬೆನ್ನತ್ತಿದ್ದ ಸಿಸಿಐಬಿ ಇನ್ಸಪೆಕ್ಟರ್ ಎ. ಎಸ್. ಗುದಿಗೊಪ್ಪ, ಎಎಸ್ ಐ ಬಿ. ಆರ್. ಮುತ್ನಾಳ ಮತ್ತು ಸಿಬ್ಬಂಧಿ ಪ್ರಕರಣ ಬೇಧಿಸಿ ₹12,40,000 ನಗದು ಮತ್ತು ಎರಡು ಬೈಕ್ ವಶಕ್ಕೆ ಪಡೆದಿದ್ದಾರೆ ಎಂದರು. ಕಮಿಷ್ನರ್ ಕೆ. ರಾಮಚಂದ್ರರಾವ್, ಡಿಸಿಪಿ ಅಮರನಾಥರೆಡ್ಡಿ ಪತ್ತೆ ಹಚ್ಚಿದ ಪೊಲೀಸ್ ತಂಡವನ್ನು ಅಭಿನಂದಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.