ಉತ್ತಮ ಸಮಾಜಕ್ಕಾಗಿ

ಸಂಗೊಳ್ಳಿ ರಾಯಣ್ಣ ಉತ್ಸವ: ಜನೇವರಿ.6 ರಿಂದ ವೀರಜ್ಯೋತಿ ಯಾತ್ರೆ

0

ಬೆಳಗಾವಿ: ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ಜನೇವರಿ 6 ರಂದು ಬೆಳಿಗ್ಗೆ 10 ಗಂಟೆಗೆ ನಂದಗಡದಿಂದ ವೀರಜ್ಯೋತಿ ಯಾತ್ರೆ ಪ್ರಾರಂಭವಾಗಲಿದ್ದು, ಜ್ಯೋತಿಯು ಜಿಲ್ಲೆಯ ವಿವಿಧೆಡೆ ಸಂಚರಿಸಿ ಜನೇವರಿ 12 ರಂದು ಮರಳಿ ಸಂಗೊಳ್ಳಿಗೆ ತಲುಪಲಿದೆ.
ವೀರಜ್ಯೋತಿ ಯಾತ್ರೆಯು ನಂದಗಡದಿಂದ ಜನೇವರಿ 6 ರಂದು ಮಧ್ಯಾಹ್ನ ಖಾನಾಪೂರಕ್ಕೆ ಆಗಮಿಸುವುದು. ಸಂಜೆ 5 ಗಂಟೆಗೆ ಬೆಳಗಾವಿಗೆ ಆಗಮಿಸಿ, ವಾಸ್ತವ್ಯಗೊಳ್ಳುವುದು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವುವು.
ಜನೇವರಿ 7 ರಂದು ಮಧ್ಯಾಹ್ನ 12 ಗಂಟೆಗೆ ಕಾಕತಿ, 3 ಗಂಟೆಗೆ ಹುಕ್ಕೇರಿ ಹಾಗೂ ಸಂಜೆ 6 ಗಂಟೆಗೆ ಚಿಕ್ಕೋಡಿಗೆ ತೆರಳಿ, ವಾಸ್ತವ್ಯಗೊಳ್ಳುವುದು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಜನೇವರಿ 8 ರಂದು ಮಧ್ಯಾಹ್ನ 3 ಗಂಟೆಗೆ ಅಥಣಿ, ಸಂಜೆ 6 ಗಂಟೆಗೆ ರಾಯಬಾಗಗೆ ಆಗಮಿಸಿ ವಾಸ್ತವ್ಯಗೊಳ್ಳುವುದು. ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಜನೇವರಿ 9 ರಂದು ಮಧ್ಯಾಹ್ನ 2 ಗಂಟೆಗೆ ಗೋಕಾಕ, ಸಂಜೆ 6 ಗಂಟೆಗೆ ರಾಮದುರ್ಗಕ್ಕೆ ಆಗಮಿಸಿ ವಾಸ್ತವ್ಯಗೊಳ್ಳುವುದು. ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಜನೇವರಿ 10 ರಂದು ಮಧ್ಯಾಹ್ನ 2 ಗಂಟೆಗೆ ಸವದತ್ತಿ, ಸಂಜೆ 5 ಗಂಟೆಗೆ ಬೈಲಹೊಂಗಲಕ್ಕೆ ತೆರಳಿ ವಾಸ್ತವ್ಯಗೊಳ್ಳುವುದು. ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಜನೇವರಿ 11 ರಂದು ಮಧ್ಯಾಹ್ನ 2 ಗಂಟೆಗೆ ಚನ್ನಮ್ಮನ ಕಿತ್ತೂರಿಗೆ ಆಗಮಿಸಿ, ಅಲ್ಲಿಯೇ ವಾಸ್ತವ್ಯಗೊಳ್ಳುವುದು. ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವುವು.
ವೀರಜ್ಯೋತಿ ಯಾತ್ರೆಯು ಜನೇವರಿ 12 ರಂದು ಬೆಳಿಗ್ಗೆ 9 ಗಂಟೆಗೆ ಸಂಗೊಳ್ಳಿ ತೆರಳಲಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: