ಉತ್ತಮ ಸಮಾಜಕ್ಕಾಗಿ

ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ-ವೃತ್ತಿ ಕೌಶಲ್ಯ ತರಬೇತಿ

0

ಬೆಳಗಾವಿ: ತಾಲೂಕಿನ ಹೊಸವಂಟಮುರಿ ಗ್ರಾಮ ಪಂಚಾಯತ ಅದೀನದಲ್ಲಿ ಬರುವ ಗ್ರಾಮಗಳಲ್ಲಿ ನವ್ಯ ದಿಶಾ ಸಂಸ್ಥೆಯ ಸುಗ್ರಾಮ ಯೋಜನೆಯಡಿಯಲ್ಲಿ ಬಜ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹಣಕಾಸು ನಿರ್ವಹಣೆ, ಉದ್ಯಮ ಕೌಶಲ್ಯಗಳು ಮತ್ತು ವೈಯಕ್ತಿಕ ಬೆಳವಣಿಗೆ ಕುರಿತಾದ ಆರ್ಥಿಕ ಸ್ವಾವಲಂಬನೆ ಕಾರ್ಯಕ್ರಮವನ್ನು ಡಿಸೆಂಬರ್.25 ರಿಂದ 30 ರವರೆಗೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಹಣಕಾಸು ನಿರ್ವಹಣೆ, ಪರ್ಯಾಯ ಆದಾಯ ಮೂಲವನ್ನು ಕಂಡುಕೊಳ್ಳಲು ಭವಿಷ್ಯತಿನಲ್ಲಿ ಉದ್ಯಮ ಮತ್ತು ಸಣ್ಣ ಅಂಗಡಿ ವ್ಯಾಪಾರವನ್ನು ಮಾಡಲು ತಿಳಿಸಿಕೊಡಲಾಯಿತು. ಹೊಸವಂಟಮುರಿ ಗ್ರಾಮ ಪಂಚಾಯತ ಅಧೀನದಲ್ಲಿ ಬರುವ ಗ್ರಾಮಗಳಾದ ಸುತಗಟ್ಟಿ, ಹೊಸವಂಟಮುರಿ, ಮಲ್ಲಹೊಳೆ, ಪರಶ್ಯಾನಟ್ಟಿ, ಉಕ್ಕಡ, ರಾಮದುರ್ಗ, ಮರಣಹೊಳ ಮತ್ತು ಭೊತರಾಮನಹಟ್ಟಿ ಗ್ರಾಮಗಳ ಸ್ವ-ಸಹಾಯ ಸಂಘಗಳು, ಮಹಿಳಾ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು ಹಾಗೂ ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರುಗಳು ತರಬೇತಿಯ ಲಾಭವನ್ನು ಪಡೆದುಕೊಂಡರು.
300ಕ್ಕೂ ಅಧಿಕ ಮಹಿಳೆಯರು ತರಬೇತಿ ಪಡೆದುಕೊಂಡರು. ಬಜ್ ಇಂಡಿಯಾ ಸಂಸ್ಥೆಯ ತರಬೇತು ದಾರರಾದ ಮಂಜುನಾಥ, ಪದ್ಮಾವತಿ ಸರ್ವಜ್ಞೆ ಹಾಗೂ ನವ್ಯ ದಿಶಾ ಸಂಸ್ಥೆಯ ಮಹಾದೇವ ಪಾಟೀಲ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಉಪನ್ಯಾಸಕರಾದ ಶ್ರೀಮತಿ ದೇವತಾ ಗಸ್ತಿ, ಸುಗ್ರಾಮ ಯೋಜನೆ ನವ್ಯ ದಿಶಾ ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ ಮಠ, ಶಿವುಕುಮಾರ ಹಲ್ಯಾಳಿ, ಸುಗ್ರಾಮ ಯುವಕ ಸಂಘದ ಸದಸ್ಯರು ತರಬೇತಿಯಲ್ಲಿ ಉಸಸ್ಥಿತರಿದ್ದರು. ತರಬೇತಿ ಪಡೆದ ಸಂಘದ ಮಹಿಳಾ ಸದಸ್ಯರುಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.