ಉತ್ತಮ ಸಮಾಜಕ್ಕಾಗಿ

ಜ.3 ರಂದು 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

0

ಬೆಳಗಾವಿ: ರಾಯಬಾಗ ತಾಲೂಕಿನ ಹಾರೂಗೇರಿಯ ಶ್ರೀ ಎಸ್.ವ್ಹಿ.ಇ.ಎನ್. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜನೇವರಿ 3 ರಂದು ಬೆಳಿಗ್ಗೆ 10 ಗಂಟೆಗೆ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಕುಡಚಿ ಮತಕ್ಷೇತ್ರದ ಶಾಸಕರಾದ ಪಿ. ರಾಜೀವ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮನು ಬಳಗಾರ ಅವರು ಲಾಂಛನ ಬಿಡುಗಡೆಗೊಳಿಸುವರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಲ್.ಎಸ್. ಜಿಂಬಗಿ, ಎಸ್.ವ್ಹಿ.ಇ.ಎನ್. ಕಾಲೇಜಿನ ಅಧ್ಯಕ್ಷರಾದ ಗಿರೀಶ ಎಸ್. ದರೂರ, ಶ್ರೀ ಬ್ರಹ್ಮಾನಂದ ಜಾಗ್ರಿ ಇಂಡಸ್ಟ್ರೀಜ್‍ನ ಅಧ್ಯಕ್ಷರಾದ ಜನ್ನಪ್ಪ ಭೂ. ಅಸ್ಕಿ, ವಾಲ್ಮೀಕಿ ಶಿಕ್ಷಣ ಸಂಸ್ಥೆಯ
ಅಧ್ಯಕ್ಷರಾದ ಆರ್.ಎಂ. ಗಸ್ತಿ, ಎಸ್.ವ್ಹಿ.ಇ.ಎನ್. ಕಾಲೇಜಿನ ಪ್ರಾಧ್ಯಾಪಕರಾದ ಡಾ. ವ್ಹಿ.ಎಸ್. ಮಾಳಿ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಉಪಸ್ಥಿತರಿರುವರು.

Leave A Reply

 Click this button or press Ctrl+G to toggle between Kannada and English

Your email address will not be published.