ಉತ್ತಮ ಸಮಾಜಕ್ಕಾಗಿ

ಪ್ರಕಟಣೆಗಳು

0

ಗೋದಿ ವಿತರಣೆಯಲ್ಲಿ ವಿಳಂಬ: ಅಕ್ಕಿ-ಬೇಳೆಕಾಳು ವಿತರಣೆಗೆ ಕ್ರಮ
ಬೆಳಗಾವಿ:  ಡಿಸೆಂಬರ್. 2017ನೇ ಮಾಹೆಯಲ್ಲಿ ಪ್ರತಿ ಆದ್ಯತಾ (ಬಿಪಿಲ್) ಕುಟುಂಬದ ಪಡಿತರ ಚೀಟಿಗಳಗೆ ಪ್ರತಿ ಯೂನಿಟಗೆ 2 ಕೆ.ಜಿ ಗೋದಿಯನ್ನು ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಗೆ ಹಂಚಿಕೆಯಾಗಿರುವ ಗೋದಿಯನ್ನು ಕಾರ್ಡುದಾರರಿಗೆ ಪೂರೈಸಲು ಕಾರಣಾಂತರಗಳಿಂದ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಅಕ್ಕಿ ಹಾಗೂ ಬೇಳೆಕಾಳು ವಿತರಣೆಗೆ ಕ್ರಮ ವಹಿಸುಂತೆ ಆಹಾರ ಇಲಾಖೆಯ ಸಚಿವರು ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ದೇಶಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿದಾರರು ಅದ್ಯತಾ ಚೀಟಿದಾರರಿಗೆ 2 ಕೆ.ಜಿ ಗೋದಿಗೆ ಸಂಬಧಿಸಿದಂತೆ ರಸೀದಿಯನ್ನು ನೀಡಬೇಕು. ಜಿಲ್ಲೆಗೆ ಗೋದಿ ಸರಬರಾಜು ಆದ ನಂತರ ಪೂರೈಕೆ ಮಾಡಲಾಗುವುದೆಂದು ಕಾರ್ಡದಾರರಿಗೆ ತಿಳಿಸಬೇಕು. ಗೋದಿ ಪೂರೈಕೆಯಾದ ಬಳಿಕ ರಸೀದಿ ನೀಡಿರುವ ಕಾರ್ಡದಾರರಿಗೆ ಸಮರ್ಪಕವಾಗಿ ಗೋದಿಯನ್ನು ವಿತರಿಸಬೇಕು. ವಿತರಣೆಯಲ್ಲಿ ಅಕ್ರಮ ಕಂಡುಬಂದರೆ ಸಂಬಂಧಪಟ್ಟ ತಾಲೂಕಿನ ಆಹಾರ ಕಾರ್ಯನಿರ್ವಾಹಕ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜ.2 ರಂದು ತಾಲೂಕು ಪಂಚಾಯತ ಜಮಾಬಂದಿ ಸಭೆ
ಬೆಳಗಾವಿ: 2016-17ನೇ ಸಾಲಿನ ಬೆಳಗಾವಿ ತಾಲೂಕ ಪಂಚಾಯತ ಕಚೇರಿಯ ಜಮಾಬಂದಿ ಕಾರ್ಯಕ್ರಮದ ಸಭೆಯು ಜನೇವರಿ.2 ರಂದು ತಾಲೂಕು ಪಂಚಾಯತ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಜಿಲ್ಲೆಯ ಎಲ್ಲ ತಾಲೂಕ ಪಂಚಾಯತ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗಬೇಕೆಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಮಟ್ಟದ ಆಯ್ಕೆ ಸಮಿತಿಯಿಂದ ಪುಸ್ತಕಗಳಿಗೆ ಆಹ್ವಾನ
ಬೆಳಗಾವಿ:  2017ನೇ ಸಾಲಿನಲ್ಲಿ 01-08-2017 ರಿಂದ 31-12-2017 ರವರೆಗೆ ಪ್ರಥಮ ಮುದ್ರಣವಾಗಿ ಪ್ರಕಟಣೆಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ಸ್ಪರ್ಧಾತ್ಮಕ, ಪಠ್ಯ ಸಾಂದರ್ಭಿಕ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ಸ್ಪರ್ಧಾತ್ಮಕ ಪರೀಕ್ಷೆ ಇತ್ಯಾದಿ ವಿಷಯಗಳ ಕನ್ನಡ, ಇಂಗ್ಲೀಷ ಹಾಗೂ ಭಾರತೀಯ ಇತರೆ ಭಾಷೆಗಳ ಗ್ರಂಥಗಳ ಆಯ್ಕೆಗಾಗಿ ಲೇಖಕ-ಪ್ರಕಾಶಕರು ಮತ್ತು ಪುಸ್ತಕ ವ್ಯಾಪಾರಿಗಳಿಂದ ಪುಸ್ತಕಗಳನ್ನು ರಾಜ್ಯಮಟ್ಟದ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಆಹ್ವಾನಿಸಲಾಗಿದೆ.
ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್‍ಸೈಟ್: www.karnatakapubliclibrary.gov.in ಅಥವಾ ನಿರ್ದೇಶಕರ ಕಚೇರಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು ಈ ವಿಳಾಸಕ್ಕೆ ಅಥವಾ ದೂ: 080-22864990, 22867358 ಗೆ ಸಂಪರ್ಕಿಸಬೇಕೆಂದು ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಬೆಳಗಾವಿ: ಯು.ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ 33/11 ಕೆವಿ ಫೋರ್ಟ್ ಮತ್ತು 33/11 ಕೆವಿಆರ್‍ಎಂ-2 ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-4 ಮಾರುತಿಗಲ್ಲಿ ಮತ್ತು ಎಫ್-5 ಶೆಟ್ಟಿಗಲ್ಲಿ ಪೂರಕದ ಮೇಲೆ ಬರುವ ರಾಮಲಿಂಗಕಿಂಡ್‍ಗಲ್ಲಿ, ಅನ್ಸೂರ್ಕರ್‍ಗಲ್ಲಿ, ಗಣಪತ್‍ಗಲ್ಲಿ ಮಾರುತಿಗಲ್ಲಿ, ಭಾತ್ಕಂಡೆಗಲ್ಲಿ, ಕೊಂಬಡಿ ಬಾಜರ್, ಕಿರ್ಲೋಸ್ಕರ್ ರೋಡ್, ಕಾವೇರಿ ಕೋಲ್ಡ್‍ಡ್ರಿಂಕ್ಸ ಸರ್ಕಲ್, ಮಹದೇವ್‍ಗಲ್ಲಿ. ಸಕ್ರ್ಯೂಟ ಹೌಸ್, ಸಿಬಿಟಿ, ಖಡೇಬಜಾರ, ಕಸಾಯಿ ಗಲ್ಲಿ, ಕೊತ್ವಾಲ್‍ಗಲ್ಲಿ, ಜಾಲಗಾರಗಲ್ಲಿ, ಶೆಟ್ಟಿಗಲ್ಲಿ, ಚಾವಟಗಲ್ಲಿ, ಕೀರ್ತಿ ಹೊಟೇಲ, ಆರ್‍ಟಿಓ ಆಪೀಸ, ಆಧಾರ ಹಾಸ್ಪಿಟಲ್, ಎಲ್‍ಐಸಿ ಆಫೀಸ್, ಡಿಸಿಸಿ ಬ್ಯಾಂಕ, ಲೇಕ್‍ವಿವ್ ಹಾಸ್ಪಿಟಲ್ ಪ್ರದೇಶದಲ್ಲಿ ಜನೇವರಿ.2 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ, ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.