ಉತ್ತಮ ಸಮಾಜಕ್ಕಾಗಿ

ಸತ್ಯದ ನಿಲುವು ಅರಿಯುವುದೇ ಶೀಲ-ನಾಗನೂರು ಶ್ರೀಗಳು

0

ಬೆಳಗಾವಿ: 12ನೇ ಶತಮಾನದ ಬಸವಾದಿ ಶರಣರು ಸತ್ಯದ ಆರಾಧಕರಾಗಿದ್ದರು. ಸತ್ಯವೇ ಭಗವಂತನ ಸ್ವರೂಪವೆಂದು ಸಾಧಿಸಿದವರು. ಸತ್ಯದಲ್ಲಿ ನಡೆಯುವುದು ಶೀಲ, ಸತ್ಯದಲ್ಲಿ ನುಡಿಯುವುದೇ ಶೀಲ, ಆಧುನಿಕ ಸಮಾಜದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಕೂಡ ತಾವು ಚಿಕ್ಕಂದಿನಲ್ಲಿ ಸತ್ಯ ಹರಿಶ್ಚಂದ್ರನ ನಾಟಕವನ್ನು ನೋಡಿ ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಂಡು ಅದೇ ರೀತಿ ಬದುಕಿದವರು. ಹರಿಶ್ಚಂದ್ರ ಚಕ್ರವರ್ತಿ ಹರನೆಂಬುದೇ ಸತ್ಯ, ಸತ್ಯವೆಂಬುದು ಹರ- ಎಂದು ನಂಬಿ ಬದುಕಿ, ಸೂರ್ಯ-ಚಂದ್ರರಿರುವವರೆಗೆ ತನ್ನ ಕೀರ್ತಿಯನ್ನು ಶಾಶ್ವತವಾಗಿಟ್ಟವನು. ಹೀಗಾಗಿ ನಾವು ಸತ್ಯದ ನಿಲುವನ್ನರಿತು ಬದುಕಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ನಾಗನೂರು ಶ್ರೀ ರುದ್ರಾಕ್ಷಿಮಠದ ಪರಮ ಪೂಜ್ಯಶ್ರೀ ಡಾ. ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ಕರುಣಿಸಿದರು.
ಬೆಳಗಾವಿ ಶ್ರೀ ಕಾರಂಜಿಮಠದಲ್ಲಿ ಸೋಮವಾರ 01-01-2018 ರಂದು ನಡೆದ 209 ನೆಯ ಮಾಸಿಕ ಶಿವಾನುಭವ ಹಾಗು ಗೌರವಾಭಿನಂದನ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮೇಲಿನಂತೆ ಪ್ರಸಾದ ವಾಣಿ ಕರುಣಿಸಿದರು.
ಈ ಸಮಾರಂಭದ ರೂವಾರಿಗಳಾದ ಶ್ರೀ ಕಾರಂಜಿಮಠದ ಪೂಜ್ಯಶ್ರೀ ಗುರುಸಿದ್ಧ ಮಹಾಸ್ವಾಮಿಗಳು ನೇತೃತ್ವ ಹಾಗು ಉತ್ತರಾಧಿಕಾರಿಗಳಾದ ಪೂಜ್ಯಶ್ರೀ ಶಿವಯೋಗಿ ದೇವರು ಸಮ್ಮುಖ ವಹಿಸಿ, ಜೀವಮಾನದ ಸಮಾಜ ಸೇವೆಗಾಗಿ ಡಾ. ಎಫ್. ವ್ಹಿ. ಮಾನ್ವಿ ಹಾಗು ಸಾಹಿತಿ, ಪ್ರಾಚಾರ್ಯ ಶ್ರೀ ಬಿ. ಎಸ್. ಗವಿಮಠ ದಂಪತಿಗಳನ್ನು ಶ್ರೀಮಠದಿಂದ ಗೌರವಿಸಿದರು.
ಡಾ. ಗುರುದೇವಿ ಹುಲೆಪ್ಪನವರಮಠ ಅತಿಥಿ ಉಪನ್ಯಾಸ ನೀಡಿದರು. ಪ್ರೊ. ಎಮ್. ಆರ್. ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಶಾನವಾಡ ಸ್ವಾಗತಿಸಿದರೆ ಡಾ. ಮಹೇಶ ಗುರುನಗೌಡರ ಸನ್ಮಾನಿತರ ಪರಿಚಯ ಮಾಡಿದರು. ಶ್ರೀ ಬಿ. ವ್ಹಿ. ಕಟ್ಟಿ ಡಾ. ಎಚ್. ಬಿ. ರಾಜಶೇಖರ, ಖಡಬಡಿ ಜಿ. ಕೆ. ಸರಳಾ ಹೇರೇಕರ, ಡಾ. ಬಸವರಾಜ ಜಗಜಂಪಿ ಮುಂತಾದ ಗಣ್ಯಮಾನ್ಯರು ಪಾಲ್ಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.